ಸಾಂದರ್ಭಿಕ ಚಿತ್ರ 
ವಿದೇಶ

ಅಮೆರಿಕದಲ್ಲಿ ದಿಢೀರ್ ವಿಮಾನ ಸಂಚಾರ ಸ್ಥಗಿತ; ಎಲ್ಲಾ ವಿಮಾನಗಳ ಟೇಕ್-ಆಫ್ ರದ್ದು: ಆದ್ರೂ ಯಾವುದೇ ಬೆದರಿಕೆ ಇಲ್ಲ - US

ಈ ಘಟನೆಯನ್ನು ಸೆಪ್ಟೆಂಬರ್ 11, 2001ರ ದಾಳಿಗಳೊಂದಿಗೆ ಹೋಲಿಸಬಾರದು ಎಂದು ಅಮೆರಿಕದ ಹೋಮ್‌ಲ್ಯಾಂಡ್ ಸೆಕ್ಯುರಿಟಿ ಕಾರ್ಯದರ್ಶಿ ಸ್ಪಷ್ಟಪಡಿಸಿದ್ದಾರೆ.

ವಾಷಿಂಗ್ಟನ್: ಅಮೆರಿಕದ ವಿಮಾನ ನಿಲ್ದಾಣಗಳಲ್ಲಿ ದೂರಸಂಪರ್ಕ ವ್ಯವಸ್ಥೆಯ ವ್ಯತ್ಯಯದಿಂದಾಗಿ ಎಲ್ಲಾ ವಿಮಾನಗಳ ಹಾರಾಟವನ್ನು ಏಕಾಏಕಿ ಸ್ಥಗಿತಗೊಳಿಸಲಾಗಿದೆ(ground stop). ಇದರ ಹಿಂದೆ ರಾಷ್ಟ್ರೀಯ ಭದ್ರತೆಗೆ ಸಂಬಂಧಿಸಿದ ಯಾವುದೇ ಬೆದರಿಕೆ ಇಲ್ಲ ಎಂದು ಅಮೆರಿಕದ ಹೋಮ್‌ಲ್ಯಾಂಡ್ ಸೆಕ್ಯುರಿಟಿ ಕಾರ್ಯದರ್ಶಿ ಮಾರ್ಕ್‌ವೇನ್ ಮುಲ್ಲಿನ್ ಶುಕ್ರವಾರ ತಿಳಿಸಿದ್ದಾರೆ.

ಈ ಘಟನೆಯನ್ನು ಸೆಪ್ಟೆಂಬರ್ 11, 2001ರ ದಾಳಿಗಳೊಂದಿಗೆ ಹೋಲಿಸಬಾರದು ಎಂದು ಅಮೆರಿಕದ ಹೋಮ್‌ಲ್ಯಾಂಡ್ ಸೆಕ್ಯುರಿಟಿ ಕಾರ್ಯದರ್ಶಿ ಸ್ಪಷ್ಟಪಡಿಸಿದ್ದಾರೆ.

ವೈಟ್ ಹೌಸ್ ಹೊರಗೆ ಸುದ್ದಿಗಾರರೊಂದಿಗೆ ಮಾತನಾಡಿದ ಮುಲ್ಲಿನ್, "ಇದನ್ನು 9/11 ಘಟನೆಯೊಂದಿಗೆ ಹೋಲಿಸಲು ಸಾಧ್ಯವಿಲ್ಲ" ಎಂದು ಹೇಳಿದರು. ಅಲ್ಲದೆ, ಎಲ್ಲಾ ವಿಮಾನಗಳ ಸ್ಥಿತಿಗತಿ ಖಚಿತಪಡಿಸಿಕೊಳ್ಳಲಾಗಿದ್ದು, ಪ್ರಯಾಣಿಕರೆಲ್ಲರೂ ಸುರಕ್ಷಿತವಾಗಿದ್ದಾರೆ ಎಂದು ಅವರು ಭರವಸೆ ನೀಡಿದರು.

ಸಂವಹನ ವ್ಯವಸ್ಥೆಯ ವೈಫಲ್ಯವು ಅಮೆರಿಕದ ವಿರುದ್ಧದ ಯಾವುದೇ ಬೆದರಿಕೆಗೆ ಸಂಬಂಧಿಸಿದೆ ಎಂದು ನಂಬಲು ಸದ್ಯಕ್ಕೆ ಯಾವುದೇ ಕಾರಣಗಳಿಲ್ಲ ಎಂದು ಮುಲ್ಲಿನ್ ಹೇಳಿದರು. ಆದಾಗ್ಯೂ, ಸೈಬರ್ ದಾಳಿ ಸೇರಿದಂತೆ ಇತರ ಯಾವುದೇ ಕಾರಣಗಳ ಸಾಧ್ಯತೆಯನ್ನು ಅವರು ತಳ್ಳಿಹಾಕಲಿಲ್ಲ.

"ಸದ್ಯದ ಮಟ್ಟಿಗೆ, ಇದು ಅಮೆರಿಕಕ್ಕೆ ಎದುರಾದ ಬೆದರಿಕೆ ಎಂದು ನಂಬಲು ಯಾವುದೇ ಆಧಾರಗಳಿಲ್ಲ. ಇದು ನಮ್ಮ ವಿರುದ್ಧ ನಡೆಸಲಾದ ಯಾವುದೇ ದುರುದ್ದೇಶಪೂರಿತ ದಾಳಿ ಎಂಬುದಕ್ಕೆ ಸದ್ಯಕ್ಕೆ ಯಾವುದೇ ಸೂಚನೆಗಳಿಲ್ಲ" ಎಂದು ಪುನರುಚ್ಚರಿಸಿದರು.

"ಇದು ಕೇವಲ ದೂರಸಂಪರ್ಕ ವ್ಯವಸ್ಥೆಯ ವ್ಯತ್ಯಯವಷ್ಟೇ" ಎಂದು ಮುಲ್ಲಿನ್ ದೃಢವಾಗಿ ಹೇಳಿದರು.

ಫೆಡರಲ್ ಏವಿಯೇಷನ್ ​​ಅಡ್ಮಿನಿಸ್ಟ್ರೇಷನ್ (FAA) ವಿಧಿಸಿರುವ ಈ ನಿರ್ಬಂಧದ ಬಗ್ಗೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರಿಗೆ ಮಾಹಿತಿ ನೀಡಲಾಗಿದೆ ಮತ್ತು ಅವರು ಅಮೆರಿಕದ ಸಾರಿಗೆ ಕಾರ್ಯದರ್ಶಿ ಸೀನ್ ಡಫಿ ಅವರೊಂದಿಗೆ ಮಾತನಾಡಿದ್ದಾರೆ ಎಂದು ಹೋಮ್‌ಲ್ಯಾಂಡ್ ಸೆಕ್ಯುರಿಟಿ ಕಾರ್ಯದರ್ಶಿ ಖಚಿತಪಡಿಸಿದರು.

ಎಲ್ಲಾ ವಿಮಾನಗಳ ಟೇಕ್-ಆಫ್ ರದ್ದು

ಪ್ರಾದೇಶಿಕ ವಾಯು ಸಂಚಾರ ನಿಯಂತ್ರಣ ಕೇಂದ್ರಗಳಲ್ಲಿ ಸಂವಹನ ಸಂಪರ್ಕ ಕಡಿತಗೊಂಡ ಬೆನ್ನಲ್ಲೇ, ಪ್ರಯಾಣಿಕರ ಸುರಕ್ಷತೆಗೆ ಮೊದಲ ಆದ್ಯತೆ ನೀಡಿರುವ ಎಫ್‌ಎಎ 'ಗ್ರೌಂಡ್ ಸ್ಟಾಪ್' ಘೋಷಿಸಿದೆ. ಮುಂದಿನ ಆದೇಶದವರೆಗೆ ಯಾವುದೇ ವಿಮಾನ ಟೇಕ್-ಆಫ್ ಆಗದಂತೆ ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ.

ಈ ಕುರಿತು ಎಕ್ಸ್ (X) ಖಾತೆಯಲ್ಲಿ ಮಾಹಿತಿ ಹಂಚಿಕೊಂಡಿರುವ ಅಮೆರಿಕದ ಸಾರಿಗೆ ಸಚಿವ ಸೀನ್ ಡಫಿ, "ತಾಂತ್ರಿಕ ಸಿಬ್ಬಂದಿ ಸಮಸ್ಯೆಯ ಮೂಲವನ್ನು ಪತ್ತೆಹಚ್ಚಲು ಸಮರೋಪಾದಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ" ಎಂದು ತಿಳಿಸಿದ್ದಾರೆ. ಸಮಾಧಾನಕರ ಸಂಗತಿಯೆಂದರೆ, ಈಗಾಗಲೇ ಆಕಾಶದಲ್ಲಿ ಹಾರಾಟ ನಡೆಸುತ್ತಿರುವ ವಿಮಾನಗಳಿಗೆ ಯಾವುದೇ ತೊಂದರೆಯಾಗಿಲ್ಲ ಅವುಗಳ ಸುರಕ್ಷಿತ ಲ್ಯಾಂಡಿಂಗ್‌ಗೆ ಕ್ರಮ ಕೈಗೊಳ್ಳಲಾಗಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಭಾರತದ ಆರ್ಥಿಕ ಬೆಳವಣಿಗೆಯ ಪ್ರಮುಖ ಚಾಲನಾ ಶಕ್ತಿ ನವ ಮಧ್ಯಮ ವರ್ಗ: ಪ್ರಧಾನಿ ಮೋದಿ; Video

ಬೆತ್ತಲೆ ಫೋಟೋ ಕಳುಹಿಸಿದ ಪಾಕ್ ಏಜೆಂಟ್; ಪ್ರತಿಯಾಗಿ ರಹಸ್ಯ ಯುದ್ಧ ಯೋಜನೆ ಮಾಹಿತಿ ನೀಡಿದ IAF ಅಧಿಕಾರಿ!

ಸಿದ್ದರಾಮಯ್ಯ ವಿರುದ್ಧದ ಸ್ಟಿಂಗ್: ಯಾರಿಗೆ ಕ್ಲೀನ್ ಚಿಟ್? ಕುಮಾರಸ್ವಾಮಿ ಪ್ರಶ್ನೆ

ವಿಧಾನಸೌಧವನ್ನೇ ಮಾರಿಬಿಡಿ: ಸರ್ಕಾರಿ ಆಸ್ತಿಯನ್ನು ರಕ್ಷಿಸಲು ವಿಫಲರಾದ ಅಧಿಕಾರಿಗಳ ವಿರುದ್ದ ಸಾರಿಗೆ ಸಚಿವ ಗರಂ

ಆರೋಗ್ಯ ಮತ್ತು ಸೌಖ್ಯಕ್ಕೆ ಅಭ್ಯಂಗ (ಕುಶಲವೇ ಕ್ಷೇಮವೇ)