ಗ್ಯಾಂಗ್‌ಸ್ಟರ್ ಗೋಲ್ಡಿ ಬ್ರಾರ್‌ 
ವಿದೇಶ

ಗೋಲ್ಡಿ ಬ್ರಾರ್ ಕೆನಡಾದ ಮೋಸ್ಟ್ ವಾಂಟೆಡ್ No.1: ಸುಳಿವು ನೀಡಿದ್ರೆ ₹2.33 ಕೋಟಿ ಬಹುಮಾನ!

ಅಮೆರಿಕ ನಂತರ ಗ್ಯಾಂಗ್‌ಸ್ಟರ್ ಗೋಲ್ಡಿ ಬ್ರಾರ್‌ಗೆ ಸಮಸ್ಯೆ ಈಗ ಕೆನಡಾದಲ್ಲಿಯೂ ಹೆಚ್ಚಿವೆ. ಕೆನಡಾದ ಪೊಲೀಸರು ಮತ್ತು ತನಿಖಾ ಸಂಸ್ಥೆಗಳು ಅವನ ಹುಡುಕಾಟವನ್ನು ತೀವ್ರಗೊಳಿಸಿವೆ. ಕೆನಡಾದ ಬೋಲೊ ಪ್ರೋಗ್ರಾಂ ತನ್ನ ಹೊಸ 25 ಮೋಸ್ಟ್ ವಾಂಟೆಡ್ ಅಪರಾಧಿಗಳ ಪಟ್ಟಿಯಲ್ಲಿ ಗೋಲ್ಡಿ ಬ್ರಾರ್‌ಗೆ ಮೊದಲ ಸ್ಥಾನ ನೀಡಿದೆ.

ಒಟ್ಟಾವಾ: ಅಮೆರಿಕ ನಂತರ ಗ್ಯಾಂಗ್‌ಸ್ಟರ್ ಗೋಲ್ಡಿ ಬ್ರಾರ್‌ಗೆ ಸಮಸ್ಯೆ ಈಗ ಕೆನಡಾದಲ್ಲಿಯೂ ಹೆಚ್ಚಿವೆ. ಕೆನಡಾದ ಪೊಲೀಸರು ಮತ್ತು ತನಿಖಾ ಸಂಸ್ಥೆಗಳು ಅವನ ಹುಡುಕಾಟವನ್ನು ತೀವ್ರಗೊಳಿಸಿವೆ. ಕೆನಡಾದ ಬೋಲೊ ಪ್ರೋಗ್ರಾಂ ತನ್ನ ಹೊಸ 25 ಮೋಸ್ಟ್ ವಾಂಟೆಡ್ ಅಪರಾಧಿಗಳ ಪಟ್ಟಿಯಲ್ಲಿ ಗೋಲ್ಡಿ ಬ್ರಾರ್‌ಗೆ ಮೊದಲ ಸ್ಥಾನ ನೀಡಿದೆ. ಆತನ ಬಂಧನಕ್ಕೆ ಕಾರಣವಾಗುವ ಮಾಹಿತಿಯನ್ನು ಒದಗಿಸುವ ಯಾರಿಗಾದರೂ 250,000 ಕೆನಡಿಯನ್ ಡಾಲರ್‌ಗಳ (2.33 ಕೋಟಿ ರೂಪಾಯಿ) ಬಹುಮಾನವನ್ನು ನೀಡಲಾಗುತ್ತದೆ.

ಬೋಲೊ ಪ್ರೋಗ್ರಾಂ ನವೆಂಬರ್ 19ರಂದು ಗೋಲ್ಡಿ ಬ್ರಾರ್ ಬಗ್ಗೆ ಈ ಘೋಷಣೆ ಮಾಡಿದೆ. ಆರೋಪಿಯ ಪತ್ತೆಗೆ ಸಹಾಯಕ್ಕಾಗಿ ಸಾರ್ವಜನಿಕರಲ್ಲಿ ಮನವಿ ಮಾಡಿದೆ. ಗೋಲ್ಡಿ ಬ್ರಾರ್ ನ ನಿಜವಾದ ಹೆಸರು ಸತೀಂದರ್ಜಿತ್ ಸಿಂಗ್. 2023ರಲ್ಲಿ ಕೆನಡಾದಲ್ಲಿ ನಡೆದ ಕೊಲೆ ಪ್ರಕರಣದ ಆರೋಪಿಯಾಗಿದ್ದಾನೆ. ಇದೇ ವೇಳೆ ಆತನ ಸಹಚರ ಕರಣ್‌ಬೀರ್ ಸಿಂಗ್‌ ಪತ್ತೆಗೂ ಬಹುಮಾನ ಘೋಷಿಸಲಾಗಿದೆ.

ಗೋಲ್ಡಿ ಬ್ರಾರ್ ಕೆನಡಾದ ವಿನ್ನಿಪೆಗ್‌ನಲ್ಲಿ 39 ವರ್ಷದ ಸುಖ್‌ದುಲ್ ಸಿಂಗ್ ಗಿಲ್ ಅವರನ್ನು ಕೊಲೆ ಮಾಡಿದ ಆರೋಪ ಹೊತ್ತಿದ್ದಾನೆ. ಪೊಲೀಸರ ಪ್ರಕಾರ, ಸೆಪ್ಟೆಂಬರ್ 20, 2023 ರಂದು ಬೆಳಿಗ್ಗೆ 10 ಗಂಟೆ ಸುಮಾರಿಗೆ ವಾಯುವ್ಯ ವಿನ್ನಿಪೆಗ್‌ನ ಹ್ಯಾಝೆಲ್ಟನ್ ಡ್ರೈವ್‌ನಲ್ಲಿರುವ ಮನೆಯಲ್ಲಿ ಗುಂಡಿನ ದಾಳಿ ನಡೆದಿತ್ತು. ನಂತರ ವಿನ್ನಿಪೆಗ್ ಪೊಲೀಸರು ತನಿಖೆಯನ್ನು ಪ್ರಾರಂಭಿಸಿದ್ದರು. ರಾಯಲ್ ಕೆನಡಿಯನ್ ಮೌಂಟೆಡ್ ಪೊಲೀಸ್ (RCMP), ಮ್ಯಾನಿಟೋಬಾ ಜಸ್ಟೀಸ್ ಮತ್ತು ದೇಶಾದ್ಯಂತದ ಇತರ ಕಾನೂನು ಜಾರಿ ಸಂಸ್ಥೆಗಳು ಸಹ ತನಿಖೆಯಲ್ಲಿ ಸಹಾಯ ಮಾಡಿದ್ದು ಸುದೀರ್ಘ ತನಿಖೆಯ ಹೊರತಾಗಿಯೂ, ಇಬ್ಬರು ಶಂಕಿತರ ಪತ್ತೆಯಾಗಿಲ್ಲ.

ಗೋಲ್ಡಿ ಬ್ರಾರ್ ಮತ್ತು ಕರಣ್‌ಬೀರ್ ಸಿಂಗ್ ವಿರುದ್ಧ ಬಂಧನ ವಾರಂಟ್‌

2026ರ ಫೆಬ್ರವರಿ 23ರಂದು ಈ ಪ್ರಕರಣದಲ್ಲಿ ಗೋಲ್ಡಿ ಬ್ರಾರ್ ಮತ್ತು ಕರಣ್‌ಬೀರ್ ಸಿಂಗ್ ವಿರುದ್ಧ ಆರೋಪಗಳನ್ನು ರೂಪಿಸಲು ಅನುಮೋದನೆ ನೀಡಲಾಯಿತು. ಇಬ್ಬರ ಮೇಲೂ ಕೊಲೆ ಮತ್ತು ಕೊಲೆಗೆ ಸಂಚು ರೂಪಿಸಿದ ಆರೋಪ ಹೊರಿಸಲಾಯಿತು. ತರುವಾಯ, ಅವರ ಬಂಧನಕ್ಕೆ ವಾರಂಟ್‌ಗಳನ್ನು ಹೊರಡಿಸಲಾಯಿತು. ಇಬ್ಬರೂ ಶಸ್ತ್ರಸಜ್ಜಿತರು ಮತ್ತು ಅಪಾಯಕಾರಿ ಎಂದು ಪೊಲೀಸರು ಸಾರ್ವಜನಿಕರಿಗೆ ಎಚ್ಚರಿಕೆ ನೀಡಿದ್ದಾರೆ. ಆದ್ದರಿಂದ, ಅವರ ಬಗ್ಗೆ ಯಾರಿಗಾದರೂ ಮಾಹಿತಿ ಇದ್ದರೆ, ಅವರನ್ನು ವೈಯಕ್ತಿಕವಾಗಿ ಸಂಪರ್ಕಿಸುವ ಬದಲು ಪೊಲೀಸರಿಗೆ ವರದಿ ಮಾಡಲು ಸೂಚಿಸಲಾಗಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಸಿದ್ದರಾಮಯ್ಯ ವಿರುದ್ಧ ಸ್ಟಿಂಗ್: ಕೃಪಾ ಆಳ್ವಾ, ರಾಕೇಶ್ ಶೆಟ್ಟಿಗೆ ಬಿಗ್ ಶಾಕ್; ಜಾಮೀನು ಅರ್ಜಿ ವಜಾ, ಯಾವುದೇ ಕ್ಷಣದಲ್ಲಿ ಬಂಧನ ಸಾಧ್ಯತೆ!

ಪಾಕ್ ಸಚಿವನಿಗೆ ರೆಡ್ ಕಾರ್ಪೆಟ್: ಪಹಲ್ಗಾಮ್ ಬಲಿಪಶು ಕುಟುಂಬಗಳ ಗಾಯದ ಮೇಲೆ ಉಪ್ಪು ಸವರಿದಂತೆ; ಕಾಂಗ್ರೆಸ್ ಕಿಡಿ!

ಬೆಂಗಳೂರು: ಲಿವ್-ಇನ್ ಸಂಗಾತಿಯ ಮಗನ ಕೊಂದು ರೂಮ್‌ ಲಾಕ್‌ ಮಾಡಿದ ಪಾಪಿ; ಶವದ ಮುಂದೆ 3 ದಿನ ತಾಯಿ ನರಳಾಟ!

ಚಿನ್ನದ ದರದಲ್ಲಿ ಭಾರಿ ಕುಸಿತ: ಒಂದೇ ದಿನ 5,120 ರೂ ಇಳಿಕೆ! ಬೆಂಗಳೂರಿನಲ್ಲಿ 10 ಗ್ರಾಂ ಚಿನ್ನದ ಬೆಲೆ ಈಗ ಎಷ್ಟಿದೆ ಗೊತ್ತಾ?

ದೆಹಲಿ: ಇನ್‌ಫ್ಲುಯೆನ್ಸರ್‌ ನೇಹಾ ಮನೆಗೆ ನುಗ್ಗಿ ಮದ್ವೆಯಾಗುವಂತೆ ಪಟ್ಟು ಹಿಡಿದ ಅಭಿಮಾನಿ: ಥಳಿಸಿ ಕೊಂದ ಕುಟುಂಬ!