Israel ಸರ್ಕಾರ ರಚನೆ ಕಸರತ್ತು: ಐಸೆನ್‌ಕೋಟ್ ಜೊತೆ ಅಧಿಕಾರ ಹಂಚಿಕೆಗೆ ನೆತನ್ಯಾಹು ಒಲವು; ಆದರೆ....
ಅಧಿಕಾರ ಹಂಚಿಕೆಯ ಪ್ರಸ್ತಾವನೆಯಲ್ಲಿ 4 ವರ್ಷಗಳ ಅವಧಿಯಲ್ಲಿ 2 ವರ್ಷಗಳ ಅವಧಿಗೆ ಐಸೆನ್ಕೋಟ್ ಪ್ರಧಾನಿಯಾಗಿರಲಿದ್ದು, ನಂತರದ ಅವಧಿಗೆ ನೆತನ್ಯಾಹು ಪ್ರಧಾನಿಯಾಗಲಿದ್ದಾರೆ.
ಇಸ್ರೇಲ್ ನಲ್ಲಿ ಸರ್ಕಾರ ರಚನೆ ಪ್ರಹಸನ ಇನ್ನೂ ಮುಂದುವರೆದಿದ್ದು, ಹಂಗಾಮಿ ಪ್ರಧಾನಿ ಬೆಂಜಮಿನ್ ನೆತನ್ಯಾಹು- ಯಶಾರ್ ಪಕ್ಷದ ಮುಖ್ಯಸ್ಥರೂ ಆಗಿರುವ ಎರಡನೇ ಅತಿ ದೊಡ್ದ ಪಕ್ಷದ ನಾಯಕ ಗಾದಿ ಐಸೆನ್ಕೋಟ್ ಅವರಿಗೆ ಅಧಿಕಾರ ಹಂಚಿಕೆಯ ಪ್ರಸ್ತಾವನೆಯನ್ನು ನೀಡಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ
ಅಧಿಕಾರ ಹಂಚಿಕೆಯ ಪ್ರಸ್ತಾವನೆಯಲ್ಲಿ 4 ವರ್ಷಗಳ ಅವಧಿಯಲ್ಲಿ 2 ವರ್ಷಗಳ ಅವಧಿಗೆ ಐಸೆನ್ಕೋಟ್ ಪ್ರಧಾನಿಯಾಗಿರಲಿದ್ದು, ನಂತರದ ಅವಧಿಗೆ ನೆತನ್ಯಾಹು ಪ್ರಧಾನಿಯಾಗಲಿದ್ದಾರೆ.
ಟೈಮ್ಸ್ ಆಫ್ ಇಸ್ರೇಲ್ ಈ ಬಗ್ಗೆ ವರದಿ ಪ್ರಕಟಿಸಿದ್ದು, ಅರಬ್ ಪಕ್ಷಗಳನ್ನು ಹೊರಗಿಟ್ಟು ಐಸೆನ್ಕೋಟ್ ಅವರ ಪಕ್ಷದೊಂದಿಗೆ ಮೈತ್ರಿ ಸರ್ಕಾರ ಅಂದರೆ ರಾಷ್ಟ್ರೀಯ ಒಕ್ಕೂಟ ಸರ್ಕಾರ ನಡೆಸಲು ಮುಂದಾಗಿರುವ ನೆತನ್ಯಾಹು ಈ ಪ್ರಸ್ತಾವನೆ ನೀಡಿದ್ದಾರೆ. ಆದರೆ ಇದಕ್ಕೆ ನೆತನ್ಯಾಹು ಅವರ ಆಪ್ತ ವಲಯದಲ್ಲಿ ಮಿಶ್ರ ಅಭಿಪ್ರಾಯ ವ್ಯಕ್ತವಾಗಿದೆ.
ಡಿಸೆಂಬರ್ 6 ರ ವೇಳೆಗೆ ಸರ್ಕಾರ ರಚನೆ ಮಾಡುವ ಜವಾಬ್ದಾರಿ ಐಸೆನ್ಕೋಟ್ ಮೇಲಿದ್ದು, ಸರ್ಕಾರ ರಚನೆಗೆ ಗಾದಿ ಐಸೆನ್ಕೋಟ್ ತೀವ್ರ ಕಸರತ್ತು ನಡೆಸುತ್ತಿದ್ದಾರೆ. ಒಂದು ವೇಳೆ ಈ ಗಡುವಿನಲ್ಲಿ ಸರ್ಕಾರ ರಚನೆ ಸಾಧ್ಯವಾಗದೇ ಇದ್ದಲ್ಲಿ ಗಡುವು ವಿಸ್ತರಣೆಗೆ ರಾಷ್ಟ್ರಪತಿಗಳ ಬಳಿ ಮನವಿ ಸಲ್ಲಿಸುವ ಸಾಧ್ಯತೆ ಇದೆ. ಇನ್ನು ನೆತನ್ಯಾಹು ಅವರ ಪ್ರಸ್ತಾವನೆಗೆ ಐಸೆನ್ಕೋಟ್ ಆಗಲೀ ಅಥವಾ ಅವರ ಪಕ್ಷದಿಂದಾಗಲೀ ಈ ವರೆಗೂ ಪ್ರತಿಕ್ರಿಯೆ ಬಂದಿಲ್ಲ.