ನಿಡಾಲ್ ಮಲಿಕ್ ಹಸನ್ 
ವಿದೇಶ

ಅಮೆರಿಕ ಸೇನೆಯ ಮಾಜಿ ಮೇಜರ್‌ಗೆ ಶೂಟ್ ಮಾಡುವ ಮೂಲಕ ಮರಣದಂಡನೆ ಶಿಕ್ಷೆ: 65 ವರ್ಷಗಳಲ್ಲಿ ಇದೇ ಮೊದಲು!

2009 ರ ನವೆಂಬರ್ 5 ರಂದು ಟೆಕ್ಸಾಸ್‌ನ ಫೋರ್ಟ್ ಹುಡ್ ನೆಲೆಯಲ್ಲಿ ಅಮೆರಿಕ ಸೇನೆಯ ಮನೋವೈದ್ಯ ನಿಡಾಲ್ ಮಲಿಕ್ ಹಸನ್ ಅವರು ನಡೆಸಿದ ಗುಂಡಿನ ದಾಳಿಯಲ್ಲಿ 13 ಸೈನಿಕರು ಮೃತಪಟ್ಟಿದ್ದರು ಮತ್ತು 32 ಸಿಬ್ಬಂದಿ ಗಾಯಗೊಂಡಿದ್ದರು.

ವಾಷಿಂಗ್ಟನ್‌ ಡಿಸಿ: 65 ವರ್ಷಗಳಲ್ಲಿ ಇದೇ ಮೊದಲ ಬಾರಿಗೆ, ಟೆಕ್ಸಾಸ್‌ನ ಫೋರ್ಟ್ ಹುಡ್‌ನಲ್ಲಿ ಫೈರಿಂಗ್ ಸ್ಕ್ವಾಡ್‌ನಿಂದ ಅಮೆರಿಕ ಸೇನೆಯ ಮಾಜಿ ಮೇಜರ್ ಒಬ್ಬರಿಗೆ ಮರಣದಂಡನೆ ಶಿಕ್ಷೆ ವಿಧಿಸಲು ನಿರ್ಧರಿಸಲಾಗಿದೆ.

2009 ರ ನವೆಂಬರ್ 5 ರಂದು ಟೆಕ್ಸಾಸ್‌ನ ಫೋರ್ಟ್ ಹುಡ್ ನೆಲೆಯಲ್ಲಿ ಅಮೆರಿಕ ಸೇನೆಯ ಮನೋವೈದ್ಯ ನಿಡಾಲ್ ಮಲಿಕ್ ಹಸನ್ ಅವರು ನಡೆಸಿದ ಗುಂಡಿನ ದಾಳಿಯಲ್ಲಿ 13 ಸೈನಿಕರು ಮೃತಪಟ್ಟಿದ್ದರು ಮತ್ತು 32 ಸಿಬ್ಬಂದಿ ಗಾಯಗೊಂಡಿದ್ದರು.

ರಕ್ಷಣಾ ಕಾರ್ಯದರ್ಶಿ ಪೀಟ್ ಹೆಗ್ಸೆತ್ ಹಸನ್ ಅವರು ಸೇನಾ ಫೈರಿಂಗ್ ಸ್ಕ್ವಾಡ್ ಮೂಲಕ ನಿಡಾಲ್ ಮಲಿಕ್ ಹಸನ್ ಅವರಿಗೆ ಮರಣದಂಡನೆ ಶಿಕ್ಷೆ ಜಾರಿಗೊಳಿಸಲು ಶಿಫಾರಸು ಮಾಡಿದ್ದು, ಅದಕ್ಕೆ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಅನುಮೋದನೆ ನೀಡಿದ್ದಾರೆ ಎಂದು ಪೆಂಟಗನ್ ವಕ್ತಾರರು X ನಲ್ಲಿ ತಿಳಿಸಿದ್ದಾರೆ.

ಪೀಟ್ ಹೆಗ್ಸೆತ್ ಅವರ ಶಿಫಾರಸಿನ ಮೇರೆಗೆ, ಸೇನಾ ಫೈರಿಂಗ್ ಸ್ಕ್ವಾಡ್ ಮೂಲಕ ನಿಡಾಲ್ ಮಲಿಕ್ ಹಸನ್ ಅವರನ್ನು ಮರಣದಂಡನೆಗೆ ಗುರಿಪಡಿಸಲು, ಡೊನಾಲ್ಡ್ ಟ್ರಂಪ್‌ ಅನುಮತಿ ನೀಡಿದ್ದಾರೆ ಎಂದು ಪೆಂಟಗನ್ ವಕ್ತಾರ ಸೀನ್ ಪಾರ್ನೆಲ್ ಮಾಹಿತಿ ನೀಡಿದ್ದಾರೆ.

ನಿಡಾಲ್‌ ಹಸನ್‌ ನಡೆಸಿದ ಗುಂಡಿನ ದಾಳಿಯಲ್ಲಿ, 12 ನಿರಾಯುಧ ಸಕ್ರಿಯ-ಕಾರ್ಯನಿರತ ಸೈನಿಕರು ಮತ್ತು ಓರ್ವ ನಿವೃತ್ತ ಸೈನಿಕ ಮೃತಪಟ್ಟಿದ್ದರು. ಈ ದಾಳಿಯಲ್ಲಿ ಇತರ 32 ಸೈನಿಕರು ಗಂಭಿರವಾಗಿ ಗಾಯಗೊಂಡಿದ್ದರು. ಸೇನಾ ಕಾರ್ಯದರ್ಶಿಯವರು ನಿಡಾಲ್‌ ಹಸನ್ ಗಲ್ಲುಶಿಕ್ಷೆಯ ಸಮಯ ಮತ್ತು ಸ್ಥಳವನ್ನು ನಿರ್ಧರಿಸಲಿದ್ದಾರೆ.‌

ಅಮೆರಿಕದಲ್ಲಿ ಗಲ್ಲಿಗೇರಿಸಲ್ಪಟ್ಟ ಕೊನೆಯ ಯುಎಸ್ ಮಿಲಿಟರಿ ಸಿಬ್ಬಂದಿ ಪ್ರೈವೇಟ್ ಜಾನ್ ಬೆನೆಟ್. ಅವರು ಅಪ್ರಾಪ್ತ ಬಾಲಕಿ ಮೇಲೆ ಅತ್ಯಾಚಾರ ಎಸಗಿ ಕೊಲೆಗೆ ಯತ್ನಿಸಿದ್ದಕ್ಕಾಗಿ 1961 ರಲ್ಲಿ ಗಲ್ಲಿಗೇರಿಸಲಾಯಿತು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

'ನನ್ನ ವಿರುದ್ಧ 100 ಎಫ್‌ಐಆರ್‌ ದಾಖಲಿಸಿ ಹೆದರಲ್ಲ, ಪ್ರತಿಯೊಂದೂ ನನಗೆ ಪದಕ': ರಾಹುಲ್ ಗಾಂಧಿ

CM ಆಗಲು ಸಿದ್ದರಾಮಯ್ಯ ವಿರುದ್ಧ ಡಿಕೆಶಿ ಸ್ಟಿಂಗ್ ಆಪರೇಷನ್; ಈಗ ಸಚಿವರ ವಿರುದ್ಧವೂ ಅದೇ ತಂತ್ರ: ಕುಮಾರಸ್ವಾಮಿ ಗಂಭೀರ ಆರೋಪ

SIR ವೇಳೆ ಡಿಲೀಟ್ ಆಗಿರುವ 13.3 ಕೋಟಿ ಮತದಾರರ ಪತ್ತೆಗೆ ಕಾಂಗ್ರೆಸ್‌ನಿಂದ ‘ಮತ ರಕ್ಷಕ’ರ ನೇಮಕ!

'ಸ್ಪಾದಲ್ಲಿ ಅಕ್ರಮ ಚಟುವಟಿಕೆ' ಎಂದು ಆರೋಪಿಸಿ ದಾಂಧಲೆ; 5 ಲಕ್ಷ ರೂ ಗೆ ಬೇಡಿಕೆ, 1 ಲಕ್ಷ ವಸೂಲಿ! ಶಾಕಿಂಗ್ ಘಟನೆ

'ಇತಿಹಾಸ ನಿಮ್ಮನ್ನು ಇನ್ನಷ್ಟು ಗೌರವದಿಂದ ನೆನಪಿಸಿಕೊಳ್ಳಲಿದೆ'; Agarkarಗೆ ಗೇಟ್ ಪಾಸ್`, ಗಂಭೀರ್‌ ಭಾವುಕ ಸಂದೇಶ!