ರೆನೀ ಲಿನ್, ರಾಹುಲ್ ಗಾಂಧಿ 
ವಿದೇಶ

'ರಾಹುಲ್ ಗಾಂಧಿ ನನ್ನ ಪರ್ಸ್, ಮೊಬೈಲ್ ಕದ್ದಿದ್ದಾರೆ': ಅಮೆರಿಕನ್ ಕಾರ್ಯಕರ್ತೆ ರೆನೀ ಲಿನ್ ವ್ಯಂಗ್ಯಾತ್ಮಕ ಹೇಳಿಕೆ; Video

ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ (SIR) ಕುರಿತಂತೆ ವಿಪಕ್ಷ ನಾಯಕ ರಾಹುಲ್ ಗಾಂಧಿ ಸುದೀರ್ಘ ಹೋರಾಟ ನಡೆಸುತ್ತಿದ್ದಾರೆ. ಭಾರತದ ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ಅವರು ರಾಜಿನಾಮೆ ನೀಡುವಂತೆ ಪ್ರತಿಭಟನೆಗಳನ್ನು ನಡೆಸುತ್ತಿದ್ದಾರೆ.

ವಾಷ್ಟಿಂಗನ್: ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ (SIR) ಕುರಿತಂತೆ ವಿಪಕ್ಷ ನಾಯಕ ರಾಹುಲ್ ಗಾಂಧಿ ಸುದೀರ್ಘ ಹೋರಾಟ ನಡೆಸುತ್ತಿದ್ದಾರೆ. ಭಾರತದ ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ಅವರು ರಾಜಿನಾಮೆ ನೀಡುವಂತೆ ಪ್ರತಿಭಟನೆಗಳನ್ನು ನಡೆಸುತ್ತಿದ್ದಾರೆ. ಈ ಮಧ್ಯೆ ಪುರಾವೆಗಳಿಲ್ಲದೆ ಆರೋಪ ಮಾಡುತ್ತಿರುವ ರಾಹುಲ್ ಗಾಂಧಿಯನ್ನು ಅಮೇರಿಕನ್ ಕಾರ್ಯಕರ್ತೆ ರೆನೀ ಲಿನ್ ಟೀಕಿಸಿದ್ದಾರೆ.

ಅಮೆರಿಕದಲ್ಲಿ ರಾಹುಲ್ ಗಾಂಧಿ ತಮ್ಮ ಪರ್ಸ್ ಮತ್ತು ಫೋನ್ ಕದ್ದಿದ್ದಾರೆ ಎಂದು ರೆನೀ ಲಿನ್ ಹೇಳಿಕೊಂಡಿದ್ದಾರೆ. ಈ ಬಗ್ಗೆ ವಿಡಿಯೋ ಮಾಡಿರುವ ರೆನೀ ಲಿನ್, ಆದರೆ ಇದಕ್ಕೆ ತಮ್ಮ ಬಳಿ ಯಾವುದೇ ಪುರಾವೆಗಳಿಲ್ಲ ಎಂದು ಒಪ್ಪಿಕೊಂಡಿದ್ದಾರೆ. ನನ್ನ ಮೊಬೈಲ್ ಮತ್ತು ಪರ್ಸ್ ಅನ್ನು ರಾಹುಲ್ ಗಾಂಧಿಯೇ ಕದ್ದಿದ್ದಾರೆ ಎಂದು ನನಗೆ ತೀವ್ರವಾಗಿ ಅನಿಸುತ್ತಿದೆ. ನನ್ನ ವಸ್ತುಗಳನ್ನು ಕದ್ದಿಲ್ಲ ಎಂದು ಸ್ವತಃ ರಾಹುಲ್ ಗಾಂಧಿಯೇ ನಿರೂಪಿಸಬೇಕು. ಇಲ್ಲದಿದ್ದರೆ ನಾನು ರಾಷ್ಟ್ರಪತಿಗಳಿಗೆ ದೂರು ನೀಡಲು, ದೆಹಲಿಯಲ್ಲಿರುವ ರಾಹುಲ್ ಗಾಂಧಿಯವರ ಮನೆಯ ಹೊರಗೆ ಪ್ರತಿಭಟನೆ ನಡೆಸಲು ಮತ್ತು ಅವರ ರಾಜೀನಾಮೆಗೆ ಒತ್ತಾಯಿಸುವುದಾಗಿ ಹೇಳಿದ್ದಾರೆ.

ರೆನೀ ಲಿನ್ ಅವರ ವಿಡಂಬನೆಯ ಗುರಿ ಸ್ಪಷ್ಟವಾಗಿದೆ. ಆರೋಪ ಮಾಡಿದವರು ಪುರಾವೆಗಳನ್ನು ಒದಗಿಸಬೇಕೇ ಅಥವಾ ಮುಗ್ಧತೆಯನ್ನು ಸಾಬೀತುಪಡಿಸುವ ಜವಾಬ್ದಾರಿ ಆಡಳಿತ ಪಕ್ಷದ ಮೇಲಿದೆಯೇ? ಎಂಬುದು ಅವರ ಮಾತುಗಳಲ್ಲಿ ವ್ಯಕ್ತವಾಗಿದೆ. ಲಿನ್ ಅವರ ಪೋಸ್ಟ್, ರಾಜಕೀಯ ವಾದ-ವಿವಾದಗಳು ಹೇಗೆ ವ್ಯಂಗ್ಯದ ಮೂಲಕ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ವ್ಯಕ್ತವಾಗುತ್ತಿವೆ ಎಂಬುದನ್ನು ತೋರಿಸಿಕೊಡುತ್ತದೆ.

ರಾಹುಲ್ ಗಾಂಧಿಯ 'ಮತ ಕಳ್ಳತನ'ದ ಆರೋಪಗಳು!

ರಾಹುಲ್ ಗಾಂಧಿ ಪದೇ ಪದೇ ಬಿಜೆಪಿ ಮತ್ತು ಚುನಾವಣಾ ಅಧಿಕಾರಿಗಳ ವಿರುದ್ಧ ಚುನಾವಣಾ ಅಕ್ರಮಗಳ ಆರೋಪಗಳನ್ನು ಮಾಡುತ್ತಾ ವೋಟ್ ಚೋರಿಯಾಗಿದೆ ಎಂದು ಆರೋಪಿಸಿದ್ದಾರೆ. ಅವರ ಈ ಆರೋಪಗಳು ರಾಜಕೀಯ ವಿವಾದಕ್ಕೆ ಎಡೆಮಾಡಿಕೊಟ್ಟಿವೆ. ಇನ್ನು ಆಡಳಿತರೂಢ ಪಕ್ಷ ಇದಕ್ಕೆ ಸಾಕ್ಷ್ಯ ನೀಡುವಂತೆ ಒತ್ತಾಯಿಸಿವೆ. ಇದಕ್ಕೆ ರಾಹುಲ್ ಗಾಂಧಿ ಮತಗಳ್ಳನ ಆಗಿದೆ ಅಂತ ನನಗೆ ಬಲವಾಗಿ ಅನಿಸುತ್ತಿದೆ ಎಂದು ಕಾರ್ಯಕ್ರಮವೊಂದರಲ್ಲಿ ಹೇಳಿದ್ದರು. ಇದೇ ವಿಚಾರವಾಗಿ ರೆನೀ ಲಿನ್ ಅವರು, ರಾಹುಲ್ ಗಾಂಧಿ ಕಾಲೆಳೆದಿದ್ದಾರೆ ಎನ್ನಲಾಗಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಟೈಗರ್ ಶ್ರಾಫ್‌ ಮೇಲೆ ಶೂಟ್ ಔಟ್ ಕೇಸ್: ಮೂವರು ಆರೋಪಿಗಳಲ್ಲಿ ಯಾರೊಬ್ಬರೂ ಅಪ್ರಾಪ್ತರಲ್ಲ- ಡಿಸಿಪಿ ರಾಜ್ ತಿಲಕ್ ರೋಷನ್ ಸ್ಪಷ್ಟನೆ

ಕೆಂಪುಕೋಟೆ ಮೇಲೆ ಮುತ್ತು ಚೆಲ್ಲಿತ್ತಲೇ ಪರಾಕ್: ಕಾರ್ಣಿಕೋತ್ಸವದಲ್ಲಿ ಗೊರವಯ್ಯನ ಭವಿಷ್ಯ!

Flydubai: ಒಬ್ಬ ಪ್ಲಂಬರ್‌ ವಿಮಾನ ಲ್ಯಾಂಡ್ ಮಾಡಲು ಸಾಧ್ಯವೇ?; ಮತ್ತಷ್ಟು ವಿವರ ಬಿಚ್ಚಿಟ್ಟ ಕ್ಯಾಪ್ಟನ್ ಸ್ಮಿತ್ ಮಚ್ಚಾರ್!

ಮೊದಲು ವೈಭವ್​ ಸೂರ್ಯವಂಶಿಯನ್ನು ತಂಡದಿಂದ ಕೈಬಿಡಿ; ಇದು ಆಘಾತಕಾರಿ, ಆದ್ರೆ..: ಮಾಜಿ ಕ್ರಿಕೆಟಿಗನ ಅಚ್ಚರಿ ಹೇಳಿಕೆ!

ಮಣಿಪುರದಲ್ಲಿ ಮತ್ತೆ ಹಿಂಸಾಚಾರ: ಉಗ್ರರಿಂದ ಮೂವರ ಹತ್ಯೆ; ಭುಗಿಲೆದ್ದ ಆಕ್ರೋಶ, ಸಿಎಂ ನಿವಾಸದ ಹೊರಗೆ ಪ್ರತಿಭಟನೆ!