ಸಾಂದರ್ಭಿಕ ಚಿತ್ರ online desk
ವಿದೇಶ

ನೇಪಾಳದ ಭೀಕರ ಪ್ರವಾಹ ಮಾಸುವ ಮುನ್ನವೇ ಟಿಬೆಟ್​ನಲ್ಲಿ 7.0 ತೀವ್ರತೆಯ ಪ್ರಬಲ ಭೂಕಂಪ: 2 ಬಾರಿ ಕಂಪಿಸಿದ ಭೂಮಿ!

ಸ್ಥಳೀಯ ಕಾಲಮಾನ ರಾತ್ರಿ 10.33ರ ಸುಮಾರಿಗೆ ನಾಗ್ಚು ನಗರದ ಬಾಕ್ವೆನ್ ಕೌಂಟಿಯಲ್ಲಿ ಭಾರೀ ಭೂಕಂಪ ಸಂಭವಿಸಿದ್ದು, 45 ನಿಮಿಷದಲ್ಲಿ ಎರಡು ಬಾರಿ ಭೂಮಿ ಕಂಪಿಸಿದೆ.

ಲಾಸಾ: ನೇಪಾಳ ಮತ್ತು ಚೀನಾ ಗಡಿಯಲ್ಲಿ ಹಠಾತ್ ಸಂಭವಿಸಿದ ಭೀಕರ ಪ್ರವಾಹ ಮಾಸುವ ಮುನ್ನವೇ ಟಿಬೆಟ್​ನ ಸ್ವಾಯತ್ತ ಪ್ರದೇಶದಲ್ಲಿ ಗುರುವಾರ ಭಾರೀ ಭೂಕಂಪ ಸಂಭವಿಸಿದ್ದು, ರಿಕ್ಟರ್ ಮಾಪಕದಲ್ಲಿ 7.0 ತೀವ್ರತೆ ದಾಖಲಾಗಿದೆ ಎಂದು 'ಚೀನಾ ಭೂಕಂಪ ಜಾಲಗಳ ಕೇಂದ್ರ' (CENC) ತಿಳಿಸಿದೆ.

ಸ್ಥಳೀಯ ಕಾಲಮಾನ ರಾತ್ರಿ 10.33ರ ಸುಮಾರಿಗೆ ನಾಗ್ಚು ನಗರದ ಬಾಕ್ವೆನ್ ಕೌಂಟಿಯಲ್ಲಿ ಭಾರೀ ಭೂಕಂಪ ಸಂಭವಿಸಿದ್ದು, 45 ನಿಮಿಷದಲ್ಲಿ ಎರಡು ಬಾರಿ ಭೂಮಿ ಕಂಪಿಸಿದೆ. ಈ ಭೂಕಂಪದಿಂದಾಗಿ, ತಕ್ಷಣಕ್ಕೆ ಯಾವುದೇ ಸಾವು-ನೋವು ಅಥವಾ ಹಾನಿಯ ಬಗ್ಗೆ ಇನ್ನೂ ವರದಿಗಳು ಬಂದಿಲ್ಲ.

ಭೂಕಂಪದ ಕೇಂದ್ರಬಿಂದುವನ್ನು ಉತ್ತರ ಅಕ್ಷಾಂಶ 32.40 ಡಿಗ್ರಿ ಮತ್ತು ಪೂರ್ವ ರೇಖಾಂಶ 93.79 ಡಿಗ್ರಿಯಲ್ಲಿ ಗುರುತಿಸಲಾಗಿದೆ.

ಈ ಭೂಕಂಪವು 10 ಕಿಲೋಮೀಟರ್ ಆಳದಲ್ಲಿ ಸಂಭವಿಸಿದೆ ಎಂದು ಸರ್ಕಾರಿ ಸ್ವಾಮ್ಯದ 'ಸಿನ್ಹುವಾ' ಸುದ್ದಿ ಸಂಸ್ಥೆ ವರದಿ ಮಾಡಿದೆ.

ಟಿಬೆಟಿಯನ್ ಪ್ರಸ್ಥಭೂಮಿಯು ಪ್ರಬಲ ಭೂಕಂಪಗಳಿಗೆ ತುತ್ತಾಗುವ ಸಾಧ್ಯತೆ ಹೆಚ್ಚಿರುವ ಪ್ರದೇಶವಾಗಿದೆ. ಏಕೆಂದರೆ ಇದು ಯುರೇಷಿಯನ್ ಮತ್ತು ಇಂಡಿಯನ್ ಟೆಕ್ಟೋನಿಕ್ ಫಲಕಗಳು(ಭೂಫಲಕಗಳು) ಸಂಧಿಸುವ ಸ್ಥಳದಲ್ಲಿ ನೆಲೆಗೊಂಡಿದೆ.

ರಾಷ್ಟ್ರೀಯ ಭೂಕಂಪಶಾಸ್ತ್ರ ಕೇಂದ್ರದ ಮಾಹಿತಿ ಪ್ರಕಾರ, ಗುರುವಾರ ರಾತ್ರಿ ಭಾರತೀಯ ಕಾಲಮಾನ ಸುಮಾರು 8:03 ರ ಸುಮಾರಿಗೆ ಟಿಬೆಟ್‌ನಲ್ಲಿ 7.0 ತೀವ್ರತೆಯ ಭೂಕಂಪ ಸಂಭವಿಸಿದೆ ಎಂದು ತಿಳಿಸಿದೆ.

ನೇಪಾಳ-ಚೀನಾ ಪರ್ವತಮಯ ಗಡಿಯಲ್ಲಿ ಸಂಭವಿಸಿದ ಭೀಕರ ಪ್ರವಾಹ ಮತ್ತು ಭೂಕುಸಿತಗಳಲ್ಲಿ 1,400 ಕ್ಕೂ ಹೆಚ್ಚು ಜನರು ಸಾವನ್ನಪ್ಪಿ, ಸಾವಿರಾರು ಜನರು ಕಾಣೆಯಾದ ಕೆಲವು ವಾರಗಳ ಈ ಭೂಕಂಪ ಸಂಭವಿಸಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಇಸ್ರೇಲ್ ಸ್ವಾತಂತ್ರ್ಯ ದಿನಾಚರಣೆಯ ಮುಖ್ಯ ಅತಿಥಿಗಳಾಗಿ ಪ್ರಧಾನಿ ಮೋದಿ, ಸ್ಮಿತ್‌ ಮಚ್ಚಾರ್‌ಗೆ ನೆತನ್ಯಾಹು ಆಹ್ವಾನ!

‘ನನಗೆ ಎಕ್ಸ್‌ಪೋಸಿಂಗ್ ಅಥವಾ ಮೈ ತೋರಿಸೋದು ಇಷ್ಟ ಇಲ್ಲ’: 'ಪೆದ್ದಿ' ಜಾನ್ವಿ ಕಪೂರ್ ಬಗ್ಗೆ ರಶ್ಮಿಕಾ ಹೇಳಿದ್ದೇನು?

ಈದ್ ಮಿಲಾದ್​​ಗೆ ಅನುಮತಿ ಪಡೆಯಲಾಗಿತ್ತೆ? ಪ್ರಿಯಾಂಕ್ ಖರ್ಗೆಗೆ RSS, ಹಿಂದೂ ಅಂದ್ರೆ ಅಲರ್ಜಿ: ಯತ್ನಾಳ್ ಕಿಡಿ

ಫ್ರಾನ್ಸ್ ಹಿಂಸಾಚಾರ - ಭಾರತದ ಪ್ರತಿಭಟನೆಗೆ ಲಿಂಕ್; ರಾಹುಲ್ ಗಾಂಧಿ 'ದೇಶದ್ರೋಹಿ': BJP ಕಿಡಿ

ರಾಜ್ಯದ ಖಾಸಗಿ ಆಸ್ಪತ್ರೆಗಳ ಬಿಲ್ ಗೆ ಅಂಕುಶ: ಚಿಕಿತ್ಸಾ ದರ ಪಟ್ಟಿ ಪ್ರದರ್ಶನ ಕಡ್ಡಾಯ!