ಉಕ್ರೇನ್ ಪ್ರಯಾಣಿಕ ರೈಲುಗಳ ಮೇಲೆ ರಷ್ಯಾ ಡ್ರೋನ್ ದಾಳಿ 
ವಿದೇಶ

ಉಕ್ರೇನ್ ಪ್ರಯಾಣಿಕ ರೈಲುಗಳ ಮೇಲೆ ರಷ್ಯಾ ಡ್ರೋನ್ ದಾಳಿ; 13 ಮಂದಿ ಸಾವು

ರಷ್ಯಾದ ಡ್ರೋನ್ ಎರಡು ರೈಲುಗಳಿಗೆ ಅಪ್ಪಳಿಸಿದ ಪರಿಣಾಮ ಕನಿಷ್ಠ 13 ಮಂದಿ ಸಾವನ್ನಪ್ಪಿದ್ದಾರೆ. ಇದು "ಭೀಕರ ದಾಳಿ". ಡಿನಿಪ್ರೊದಲ್ಲಿ ಪ್ರಯಾಣಿಕ ರೈಲುಗಳ ಮೇಲೆ ದಾಳಿ ನಡೆದಿದೆ.

ಡಿನಿಪ್ರೊ: ಮಧ್ಯ ಉಕ್ರೇನ್‌ನ ನಿಲ್ದಾಣವೊಂದರ ಮೇಲೆ ಗುರುವಾರ ರಷ್ಯಾ ನಡೆಸಿದ ಜೆಟ್ ಚಾಲಿತ ಡ್ರೋನ್ ದಾಳಿಯಲ್ಲಿ 13 ಮಂದಿ ಮೃತಪಟ್ಟಿದ್ದಾರೆ ಮತ್ತು 10 ಮಂದಿ ಗಾಯಗೊಂಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ರಷ್ಯಾದ ಡ್ರೋನ್ ಎರಡು ರೈಲುಗಳಿಗೆ ಅಪ್ಪಳಿಸಿದ ಪರಿಣಾಮ ಕನಿಷ್ಠ 13 ಮಂದಿ ಸಾವನ್ನಪ್ಪಿದ್ದಾರೆ. ಇದು "ಭೀಕರ ದಾಳಿ". ಡಿನಿಪ್ರೊದಲ್ಲಿ ಪ್ರಯಾಣಿಕ ರೈಲುಗಳ ಮೇಲೆ ದಾಳಿ ನಡೆದಿದೆ ಎಂದು ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ಅವರು 'ಎಕ್ಸ್' (X)ನಲ್ಲಿ ಪೋಸ್ಟ್ ಮಾಡಿದ್ದಾರೆ.

"ಡಿನಿಪ್ರೊ ರೈಲು ನಿಲ್ದಾಣದ ಮೇಲೆ ರಷ್ಯಾ ನಡೆಸಿದ ಭೀಕರ ದಾಳಿ ಇದಾಗಿದೆ. ಸಾಮಾನ್ಯ ಪ್ರಯಾಣಿಕ ರೈಲು ಮತ್ತು ನಿಗದಿತ ಪ್ರಯಾಣಿಕ ರೈಲು ನಿಂತಿದ್ದ ಪ್ಲಾಟ್‌ಫಾರ್ಮ್‌ನ ಮೇಲೆ ರಷ್ಯನ್ನರು ಡ್ರೋನ್ ದಾಳಿ ನಡೆಸಿದ್ದಾರೆ. ದುರದೃಷ್ಟವಶಾತ್, ಸದ್ಯದ ಮಾಹಿತಿಯ ಪ್ರಕಾರ 13 ಮಂದಿ ಸಾವನ್ನಪ್ಪಿರುವುದು ಖಚಿತಪಟ್ಟಿದೆ. ಮೃತರ ಕುಟುಂಬಗಳು ಮತ್ತು ಆಪ್ತರಿಗೆ ನನ್ನ ಸಂತಾಪಗಳು. ಇನ್ನೂ ಹತ್ತು ಮಂದಿ ಗಾಯಗೊಂಡಿದ್ದಾರೆ. ಘಟನಾ ಸ್ಥಳದಲ್ಲಿ ಅಗತ್ಯ ತುರ್ತು ಸೇವೆಗಳು ಕಾರ್ಯನಿರ್ವಹಿಸುತ್ತಿವೆ" ಎಂದು ಝೆಲೆನ್ಸ್ಕಿ ತಿಳಿಸಿದ್ದಾರೆ.

"ರಷ್ಯಾದ ಕೆಲವು ಪ್ರಭಾವಿ ಉದ್ಯಮಿಗಳು(ಒಲಿಗಾರ್ಕ್‌ಗಳು) ಮತ್ತು ಇಂಧನ ವಲಯದ ಮೇಲಿನ ನಿರ್ಬಂಧಗಳನ್ನು ಸಡಿಲಿಸಿದ ನಂತರ, ಉದ್ವಿಗ್ನತೆಯನ್ನು ತಗ್ಗಿಸುವ ಬದಲು ರಷ್ಯಾ ನಮ್ಮ ಜನರ ಮೇಲೆ ಎಷ್ಟು ಭಯೋತ್ಪಾದಕ ದಾಳಿಗಳನ್ನು ನಡೆಸಿದೆ? ರಷ್ಯಾದ ಈ ಆಕ್ರಮಣಕಾರಿ ವರ್ತನೆಗೆ ಅಮೆರಿಕ ಮತ್ತು ಯುರೋಪ್ ನ್ಯಾಯಯುತ ಹಾಗೂ ನಿರ್ಣಾಯಕ ಕ್ರಮ ಕೈಗೊಳ್ಳಬೇಕು ಎಂದು ಉಕ್ರೇನ್ ಯಾವಾಗಲೂ ಹೇಳುತ್ತಿರುವುದಕ್ಕೆ ಇದೇ ಕಾರಣಕ್ಕೆ. ರಷ್ಯಾದ ಈ ಯುದ್ಧ ಮುಂದುವರಿಯುವವರೆಗೂ ಮಾಸ್ಕೋ ಮತ್ತು ಅದರ ಯುದ್ಧ ಯಂತ್ರದ ಮೇಲಿನ ನಿರ್ಬಂಧಗಳನ್ನು ಸಡಿಲಿಸಬಾರದು. ಯುರೋಪಿಯನ್ ಒಕ್ಕೂಟ (EU), ಅಮೆರಿಕ ಮತ್ತು ಜಿ7 (G7) ರಾಷ್ಟ್ರಗಳು ಈಗ ಹೊಸ ಹಾಗೂ ಕಠಿಣ ನಿರ್ಬಂಧಗಳನ್ನು ವಿಧಿಸಬೇಕಾದ ಸಮಯ ಬಂದಿದೆ. ಈ ರೀತಿಯಲ್ಲಿ ಸಹಾಯ ಮಾಡಲು ಮುಂದೆ ಬಂದಿರುವ ಎಲ್ಲರಿಗೂ ನಾನು ಧನ್ಯವಾದ ಅರ್ಪಿಸುತ್ತೇನೆ" ಎಂದು ಝೆಲೆನ್ಸ್ಕಿ 'ಎಕ್ಸ್'ನಲ್ಲಿ ಬರೆದುಕೊಂಡಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ರಾಜ್ಯದ ಜನತೆಗೆ ಬಿಗ್ ಶಾಕ್: ನಂದಿನ ಹಾಲಿನ ದರ ಲೀಟರ್‌ಗೆ ಬರೋಬ್ಬರಿ 8 ರೂ. ಹೆಚ್ಚಳ; ನವೆಂಬರ್‌ 1 ರಿಂದಲೇ ಜಾರಿ!

ಸ್ಟಿಂಗ್ ಆಪರೇಷನ್ ಕೇವಲ ಕಟ್ಟು ಕಥೆ: ಮಾಜಿ ಸಿಎಂ ಸಿದ್ದರಾಮಯ್ಯಗೆ ಸಿಸಿಬಿ ಕ್ಲೀನ್ ಚಿಟ್!

ನವ ಬೆಂಗಳೂರು ನಿರ್ಮಾಣದತ್ತ ಡಿಕೆಶಿ ದೃಢ ಹೆಜ್ಜೆ: ₹1 ಲಕ್ಷ ಕೋಟಿ ಯೋಜನೆ; ಟನಲ್ ರೋಡ್ ಸೇರಿ 500 ಕಿ.ಮೀ ಹೊಸ ರಸ್ತೆ ನಿರ್ಮಾಣ!

'ನಿಮ್ಮನ್ನೆಲ್ಲ ತುಂಡು ತುಂಡಾಗಿ ಕತ್ತರಿಸಿ ಹಾಕ್ತೇನೆ'; ಬೆಟ್ಟಿಂಗ್ ಆಪರೇಟರ್‌`ಗಳಿಗೆ ಗ್ಯಾಂಗ್‌ಸ್ಟರ್ Lawrence Bishnoi ಬೆದರಿಕೆ, ಆಡಿಯೋ ವೈರಲ್!

ಬಿಜೆಪಿಗೆ ಅಷ್ಟು ವಿಶ್ವಾಸವಿದ್ದರೆ, ಸಂಸತ್ತನ್ನು ವಿಸರ್ಜಿಸಿ ಬ್ಯಾಲೆಟ್ ಪೇಪರ್ ಮೂಲಕ ಚುನಾವಣೆ ಎದುರಿಸಲಿ: ಖರ್ಗೆ