ಬ್ರಿಟನ್‌ಗೆ ಎದುರಾಯ್ತು ಬಹುದೊಡ್ಡ ರಾಜಕೀಯ ಸಂಕಷ್ಟ AI Image
ವಿದೇಶ

ನಾಲ್ಕು ತುಂಡಾಗುತ್ತಾ ಗ್ರೇಟ್ ಬ್ರಿಟನ್ ಸಾಮ್ರಾಜ್ಯ? ಯುಕೆ ವಿಭಜನೆಗೆ ಮೂರು ಪ್ರಾಂತ್ಯಗಳ ಜಂಟಿ ಪ್ಲಾನ್!

ಸ್ಕಾಟ್‌ಲ್ಯಾಂಡ್‌ನ ಜಾನ್ ಸ್ವಿನ್ನಿ, ವೇಲ್ಸ್‌ನ ರಾನ್ ಅಪ್ ಐಯೋರ್ವರ್ತ್ ಮತ್ತು ಉತ್ತರ ಐರ್ಲೆಂಡ್‌ನ ಮಿಚೆಲ್ ಒ'ನೀಲ್ ಅವರು ಒಟ್ಟಾಗಿ, ತಮ್ಮ ದೇಶಗಳ ಸ್ವಾತಂತ್ರ್ಯಕ್ಕಾಗಿ ಜಂಟಿ ಹೋರಾಟದ ಒಪ್ಪಂದಕ್ಕೆ ಸಹಿ ಹಾಕಲಿದ್ದಾರೆ ಎನ್ನಲಾಗಿದೆ. ಆ ಕುರಿತ ವರದಿ ಇಲ್ಲಿದೆ:

ಲಂಡನ್ (ಯುನೈಟೆಡ್ ಕಿಂಗ್‌ಡಮ್): ಶತಮಾನಗಳ ಕಾಲ ಪ್ರಪಂಚದ 80ಕ್ಕೂ ಅಧಿಕ ದೇಶಗಳನ್ನ ಆಳ್ವಿಕೆ ಮಾಡಿದ್ದ ಯುನೈಟೆಡ್ ಕಿಂಗ್‌ಡಮ್ ಇದೀಗ ನಾಲ್ಕು ಪೀಸ್ ಆಗುವತ್ತಾ ಸಾಗಿದೆ! ಹೌದು, ತನ್ನ ಇತಿಹಾಸದಲ್ಲೇ ಯುನೈಟೆಡ್ ಕಿಂಗ್‌ಡಮ್ ಪ್ರಸ್ತುತ ದೊಡ್ಡ ರಾಜಕೀಯ ಬಿಕ್ಕಟ್ಟನ್ನು ಎದುರಿಸುತ್ತಿದ್ದು, ಇದರ ಪರಿಣಾಮ ವಿಭಜನೆಯ ಭೀತಿ ಎದುರಾಗಿದೆ. ಅದರಂತೆ, ದೇಶದ ಮೂರು ಪ್ರಮುಖ ಪ್ರಾಂತ್ಯಗಳಾದ ಸ್ಕಾಟ್‌ಲ್ಯಾಂಡ್, ವೇಲ್ಸ್ ಮತ್ತು ಉತ್ತರ ಐರ್ಲೆಂಡ್ ಪ್ರಾಂತ್ಯಗಳಲ್ಲಿ ಸ್ವಾತಂತ್ರ್ಯದ ಕಿಚ್ಚು ಜೋರಾಗಿದೆ. ಆ ಕುರಿತ ವರದಿ ಇಲ್ಲಿದೆ:

ವಿಭಜನೆಯತ್ತ ಯುನೈಟೆಡ್ ಕಿಂಗ್‌ಡಮ್?

1999ರಲ್ಲಿ ಬ್ರಿಟನ್‌ನಲ್ಲಿ ಅಧಿಕಾರ ವಿಕೇಂದ್ರೀಕರಣ ಪ್ರಕ್ರಿಯೆ ಆರಂಭವಾದ ನಂತರ, ಸ್ಕಾಟ್‌ಲ್ಯಾಂಡ್‌ನ ಪ್ರಥಮ ಸಚಿವ ಜಾನ್ ಸ್ವಿನ್ನಿ, ವೇಲ್ಸ್‌ನ ಪ್ರಥಮ ಸಚಿವ ರಾನ್ ಅಪ್ ಐಯೋರ್ವರ್ತ್ ಮತ್ತು ಉತ್ತರ ಐರ್ಲೆಂಡ್‌ನ ಪ್ರಥಮ ಸಚಿವೆ ಮಿಚೆಲ್ ಒ'ನೀಲ್ ಅವರು ಒಟ್ಟಾಗಿ ಕಾರ್ಡಿಫ್‌ನಲ್ಲಿ ಸಭೆ ನಡೆಸುತ್ತಿದ್ದು, ತಮ್ಮ ದೇಶಗಳ ಸ್ವಾತಂತ್ರ್ಯಕ್ಕಾಗಿ ಜಂಟಿ ಹೋರಾಟದ ಒಪ್ಪಂದಕ್ಕೆ ಸಹಿ ಹಾಕಲಿದ್ದಾರೆ ಎನ್ನಲಾಗಿದೆ.

ಈ ಪ್ರಾಂತ್ಯಗಳ ನಿಲುವೇನು?

  • ಸ್ಕಾಟ್‌ಲ್ಯಾಂಡ್: ಸ್ಕಾಟಿಷ್ ನ್ಯಾಷನಲ್ ಪಾರ್ಟಿ ಎರಡನೇ ಬಾರಿಗೆ ಸ್ವಾತಂತ್ರ್ಯ ಜನಾಭಿಪ್ರಾಯ ಸಂಗ್ರಹಣೆಗೆ ತೀವ್ರ ಒತ್ತಡ ಹೇರುತ್ತಿದೆ. (2014ರ ಮೊದಲ ಜನಾಭಿಪ್ರಾಯದಲ್ಲಿ ಸ್ಕಾಟ್‌ಲ್ಯಾಂಡ್ ಯುಕೆಯಲ್ಲೇ ಉಳಿಯಲು ನಿರ್ಧರಿಸಿತ್ತು).

  • ಉತ್ತರ ಐರ್ಲೆಂಡ್: ಇಲ್ಲಿನ ಪ್ರಮುಖ ಪಕ್ಷವಾದ ಸಿನ್ ಫೇನ್, ಉತ್ತರ ಐರ್ಲೆಂಡ್ ಪ್ರಾಂತ್ಯವನ್ನು ಯುಕೆ ಇಂದ ಮುಕ್ತಗೊಳಿಸಿ ಪಕ್ಕದಲ್ಲೇ ಇರುವ ಐರ್ಲೆಂಡ್ ಗಣರಾಜ್ಯದೊಂದಿಗೆ ವಿಲೀನಗೊಳಿಸಿ ಯುನೈಟೆಡ್ ಐರ್ಲೆಂಡ್ ಮಾಡಲು ದೀರ್ಘಕಾಲದ ಹೋರಾಟ ನಡೆಸುತ್ತಿದೆ.

  • ವೇಲ್ಸ್: ವೇಲ್ಸ್‌ನ ಪ್ರಮುಖ ಪಕ್ಷವಾದ ಪ್ಲೈಡ್ ಕಮ್ರು ಸದ್ಯಕ್ಕೆ ತಕ್ಷಣದ ಜನಾಭಿಪ್ರಾಯವನ್ನು ಕೋರದಿದ್ದರೂ, ಭವಿಷ್ಯದಲ್ಲಿ ಬ್ರಿಟನ್‌ನಿಂದ ಮುಕ್ತವಾಗಿ ಐರೋಪ್ಯ ಒಕ್ಕೂಟಕ್ಕೆ ಮರುಸೇರ್ಪಡೆಯಾಗುವ ಗುರಿ ಹೊಂದಿದೆ.

ಏತನ್ಮಧ್ಯೆ, ಬ್ರಿಟನ್ ಪ್ರಧಾನಿ ಆಂಡಿ ಬರ್ನ್‌ಹ್ಯಾಮ್ ಅವರು ಈ ಪ್ರತ್ಯೇಕತಾವಾದಿ ನಾಯಕರ ಒತ್ತಡವನ್ನು ತಳ್ಳಿಹಾಕಿ, ಮುಂದಿನ ಸಾರ್ವತ್ರಿಕ ಚುನಾವಣೆಯವರೆಗೆ ಸ್ಕಾಟ್‌ಲ್ಯಾಂಡ್‌ನ ಎರಡನೇ ಸ್ವಾತಂತ್ರ್ಯ ಜನಮತಸಂಗ್ರಹಕ್ಕೆ ಅವಕಾಶವೇ ಇಲ್ಲ ಎಂದು ಅವರು ಕಟ್ಟುನಿಟ್ಟಾಗಿ ಹೇಳಿದ್ದಾರೆ. ಮತ್ತೊಂದೆಡೆ, ಇತ್ತೀಚೆಗೆ, ಡಬ್ಲಿನ್‌ಗೆ ಭೇಟಿ ನೀಡಿದ್ದ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ಐರ್ಲೆಂಡ್ ಪುನರೇಕೀಕರಣದ ಹೋರಾಟವನ್ನು ಬಹಿರಂಗವಾಗಿ ಬೆಂಬಲಿಸಿ, "ಐರ್ಲೆಂಡ್ ಒಂದಾಗುವುದನ್ನು ನೋಡಲು ನಾನು ಇಷ್ಟಪಡುತ್ತೇನೆ, ಅದು ಅದ್ಭುತವಾದ ವಿಷಯ" ಎಂದು ಹೇಳುವ ಮೂಲಕ ಬ್ರಿಟನ್ ಸರ್ಕಾರಕ್ಕೆ ಮುಜುಗರ ಉಂಟುಮಾಡಿದ್ದಾನೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

'ಯಾರನ್ನೂ ಸ್ಟಾಪ್ ಮಾಡೋಕೆ ಆಗಲ್ಲ, ಯಾವ ದಾಖಲೆ ಬೇಕಾದ್ರೂ ಬಿಡುಗಡೆ ಮಾಡಿಕೊಳ್ಳಲಿ: ಡಿ ಕೆ ಶಿವಕುಮಾರ್; Video

ಅಧಿಕಾರ ಅನ್ನೋದು ವಿಷವಿದ್ದಂತೆ, ಮುಡಾ ವಿರುದ್ಧ ದೂರು ಕೊಟ್ಟಿದ್ದೇ ಕಾಂಗ್ರೆಸ್‌ನವರು: ಮತ್ತೆ ಸ್ವಪಕ್ಷೀಯರ ವಿರುದ್ಧ ಗುಡುಗಿದ ರಾಜಣ್ಣ

ಸಿದ್ದರಾಮಯ್ಯ ಮನೆ ಗೃಹಪ್ರವೇಶ: ಪತ್ನಿಯಿಂದ ಗೋ ಪೂಜೆ, ಲಕ್ಷ್ಮಿ ಫೋಟೊ ಹಿಡಿದು ನಿಂತ ಯತೀಂದ್ರ; ಸಾಮಾಜಿಕ ಮಾಧ್ಯಮಗಳಲ್ಲಿ ಭಾರಿ ಚರ್ಚೆ

ನಾಯಕತ್ವ ಎಂದರೆ ತೊಂದರೆ ಬಂದಾಗ ಓಡಿಹೋಗುವುದಲ್ಲ: Biggboss ವೇದಿಕೆ ಮೇಲೆ ಸೇತುಪತಿ ಹೇಳಿಕೆ ಬೆನ್ನಲ್ಲೇ ಭುಗಿಲೆದ್ದ ಆಕ್ರೋಶ!

'ಯುದ್ಧ ಆರಂಭಕ್ಕೆ ವಿಜಯದಶಮಿ ಪ್ರಶಸ್ತ ಕಾಲ, ಮಾಧ್ಯಮದವರಿಗೆ ಒಳ್ಳೆಯ ಆಹಾರ ನೀಡುತ್ತೇನೆ': HD ಕುಮಾರಸ್ವಾಮಿ