ಮಲೈಕಾ ಚಿತ್ರೆ ಮತ್ತು ನವಮ್ ಕೌಲ್ 
ವಿದೇಶ

ನ್ಯೂಯಾರ್ಕ್‌: ರೈಲಿಗೆ ಸಿಲುಕಿ ಭಾರತ ಮೂಲದ ಮಹಿಳೆ-ಮತ್ತಾಕೆಯ ಸ್ನೇಹಿತ ಸಾವು!

ಮೃತರನ್ನು ನ್ಯೂಜೆರ್ಸಿಯ ಡೇಟನ್ ನಿವಾಸಿ ಮಲೈಕಾ ಚಿತ್ರೆ ಮತ್ತು ಸೆಯರ್‌ವಿಲ್ಲೆ ನಿವಾಸಿ ನವಮ್ ಕೌಲ್ ಎಂದು ಗುರುತಿಸಲಾಗಿದೆ. ಇಬ್ಬರಿಗೂ 24 ವರ್ಷ ವಯಸ್ಸಾಗಿತ್ತು.

ವಾಷಿಂಗ್ಟನ್: ನ್ಯೂಯಾರ್ಕ್‌ನ ಸಬ್‌ವೇ ರೈಲು ನಿಲ್ದಾಣದಲ್ಲಿ ಭಾರತ ಮೂಲದ ಮಹಿಳೆ ಮತ್ತು ಅವರ ನೇಪಾಳಿ-ಅಮೆರಿಕನ್ ಸ್ನೇಹಿತ ರೈಲಿಗೆ ಸಿಲುಕಿ ಮೃತಪಟ್ಟಿದ್ದಾರೆ. ಒಬ್ಬರು ರೈಲು ಹಳಿ ಮೇಲೆ ಬಿದ್ದಿದ್ದಾರೆ. ಅವರನ್ನು ರಕ್ಷಿಸಲು ಪ್ಲಾಟ್‌ಫಾರ್ಮ್‌ನಿಂದ ಕೆಳಗೆ ಇಳಿದ ಮತ್ತೊಬ್ಬರೂ ರೈಲಿಗೆ ಸಿಲುಕಿ ಮೃತಪಟ್ಟಿದ್ದಾರೆ.

ಮೃತರನ್ನು ನ್ಯೂಜೆರ್ಸಿಯ ಡೇಟನ್ ನಿವಾಸಿ ಮಲೈಕಾ ಚಿತ್ರೆ ಮತ್ತು ಸೆಯರ್‌ವಿಲ್ಲೆ ನಿವಾಸಿ ನವಮ್ ಕೌಲ್ ಎಂದು ಗುರುತಿಸಲಾಗಿದೆ. ಇಬ್ಬರಿಗೂ 24 ವರ್ಷ ವಯಸ್ಸಾಗಿತ್ತು. ಹಳಿಗೆ ಯಾರು ಮೊದಲು ಬಿದ್ದದ್ದರು ಎಂಬುದು ದೃಢಪಟ್ಟಿಲ್ಲ. ಸ್ಥಳದಲ್ಲೇ ಇಬ್ಬರೂ ಮೃತಪಟ್ಟಿದ್ದಾರೆ.

ಕೌಲ್, 2020ರಿಂದ 2024ರವರೆಗೆ ನ್ಯೂ ಬ್ರನ್ಸ್‌ವಿಕ್‌ನಲ್ಲಿರುವ ರಟ್ಜರ್ಸ್ ಬಿಸಿನೆಸ್ ಸ್ಕೂಲ್‌ನಲ್ಲಿ ವ್ಯಾಸಂಗ ಮಾಡಿದ್ದರು. ಆದರೆ, ಪದವಿ ಪೂರೈಸಲು ಸಾಧ್ಯವಾಗಿರಲಿಲ್ಲ.

ಚಿತ್ರೆ ಅವರು, 2024ರಲ್ಲಿ ರಟ್ಜರ್ಸ್-ನ್ಯೂ ಬ್ರನ್ಸ್‌ವಿಕ್ ಸ್ಕೂಲ್ ಆಫ್ ಆರ್ಟ್ಸ್ ಅಂಡ್ ಸೈನ್ಸ್‌ನಿಂದ ವಿಜ್ಞಾನ ವಿಷಯದಲ್ಲಿ ಪದವಿ ಪಡೆದಿದ್ದಾರೆ.

ರೈಲು ಸಮಯಕ್ಕೆ ಸರಿಯಾಗಿ ನಿಲ್ಲಲು ಸಾಧ್ಯವಾಗದಿದ್ದರಿಂದ, ಭಾನುವಾರ ನಸುಕಿನ ಜಾವ 3:14ಕ್ಕೆ ಅಪಘಾತದ ಬಗ್ಗೆ ತಮಗೆ ಮಾಹಿತಿ ಲಭಿಸಿತು ಎಂದು ಪೊಲೀಸರು ತಿಳಿಸಿದ್ದಾರೆ. ಘಟನೆಯ ಸಮಯದಲ್ಲಿ ಸುಮಾರು 100 ಪ್ರಯಾಣಿಕರು ರೈಲಿನಲ್ಲಿದ್ದರು ಮತ್ತು ಅವರನ್ನು ಪ್ಲಾಟ್‌ಫಾರ್ಮ್‌ಗೆ ಸುರಕ್ಷಿತವಾಗಿ ಸ್ಥಳಾಂತರಿಸಲಾಯಿತು ಎಂದು ಪೊಲೀಸರು ತಿಳಿಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಭಾರತೀಯ ನೌಕಾಪಡೆಯ ನೌಕೆಗೆ ಪಾಕಿಸ್ತಾನದ ಹಡಗು ಡಿಕ್ಕಿ; ಇಸ್ಲಾಮಾಬಾದ್‌ನ ಉನ್ನತ ರಾಯಭಾರಿಗೆ ವಿದೇಶಾಂಗ ಸಚಿವಾಲಯ ಸಮನ್ಸ್

‘ಮಹತ್ವದ ಒಪ್ಪಂದದಿಂದ ಹೆಚ್ಚಿನ ಉದ್ಯೋಗ, ಆದಾಯ’: ಭಾರತದೊಂದಿಗಿನ ಮುಕ್ತ ವ್ಯಾಪಾರ ಒಪ್ಪಂದಕ್ಕೆ ನ್ಯೂಜಿಲೆಂಡ್ ಸಂಸತ್ ಅನುಮೋದನೆ

ಬಿಜೆಪಿ ಶಾಸಕ ಚೆನ್ನಬಸಪ್ಪರನ್ನು ಹೆಗಲ ಮೇಲೆ ಹೊತ್ತು ಕುಣಿದ ಪೊಲೀಸರು; ವಿಡಿಯೋ ವೈರಲ್ ಬೆನ್ನಲ್ಲೇ ಇಬ್ಬರು ಸಿಬ್ಬಂದಿ ಎತ್ತಗಂಡಿ!

ಸಂಪುಟದಲ್ಲಿ ಮಹಿಳಾ ಮಂತ್ರಿ ಇಲ್ಲದಿರುವುದು ನನ್ನ ತಪ್ಪು: ಅಮೆರಿಕ ಕಂಪನಿಗಳಿಗೆ ಕೇಂದ್ರ ಸರ್ಕಾರ ಸರೆಂಡರ್; ಸುರ್ಜೇವಾಲಾ

ರಷ್ಯಾದಿಂದ ಕಚ್ಚಾ ತೈಲ ಆಮದು: ಭಾರತ ಸೇರಿ ಇತರ ದೇಶಗಳ ಮೇಲೆ ಶೇ.100ರಷ್ಟು ಸುಂಕ ಮಸೂದೆಗೆ ಅಮೆರಿಕ ಸಂಸತ್ತಿನಲ್ಲಿ ಮುನ್ನಡೆ