ಕತ್ರಿನಾ ಕೈಫ್, ಸಲ್ಮಾನ್ ಖಾನ್ ಮತ್ತು ಆರ್ ಜೆ ಇಜಾಜ್ 
ವಿದೇಶ

ನಟಿ ಕತ್ರಿನಾ ಕೈಫ್ ಬಾಡಿ ಶೇಮಿಂಗ್; Salman Khan ಕ್ಲಾಸ್ ಬೆನ್ನಲ್ಲೇ ಕ್ಷಮೆ ಕೋರಿದ ಪಾಕಿಸ್ತಾನ RJ! Video

ಬಿಗ್‌ಬಾಸ್ ಸೀಸನ್ 20ರ ‘ವೀಕೆಂಡ್ ಕಾ ವಾರ್’ ಸಂಚಿಕೆಯಲ್ಲಿ ನಿರೂಪಕ ಹಾಗೂ ಬಾಲಿವುಡ್ ನಟ ಸಲ್ಮಾನ್ ಖಾನ್, ನಟಿ ಕತ್ರಿನಾ ಕೈಫ್ ಅವರ ದೇಹದ ಬಗ್ಗೆ ಟೀಕೆ ಮಾಡಿದ್ದ ಟ್ರೋಲರ್‌ಗಳ ವಿರುದ್ಧ ತೀವ್ರವಾಗಿ ಆಕ್ರೋಶ ವ್ಯಕ್ತಪಡಿಸಿದ್ದರು.

ಮುಂಬೈ: ದೇಶಾದ್ಯಂತ ಭಾರಿ ಸುದ್ದಿಗೆ ಗ್ರಾಸವಾಗಿದ್ದ ಬಾಲಿವುಡ್ ನಟಿ ಕತ್ರಿನಾ ಕೈಫ್ ಗೆ ಬಾಡಿ ಶೇಮಿಂಗ್ ಮಾಡಿ ಆಕ್ರೋಶಕ್ಕೆ ತುತ್ತಾಗಿದ್ದ ಪಾಕಿಸ್ತಾನ ಮೂಲದ ಆರ್ ಜೆ ಡಾ. ಇಜಾಜ್ ವಾರಿಸ್ ಕೊನೆಗೂ ಕ್ಷಮೆ ಕೇಳಿದ್ದಾರೆ.

ಹೌದು.. ಬಿಗ್‌ಬಾಸ್ ಸೀಸನ್ 20ರ ‘ವೀಕೆಂಡ್ ಕಾ ವಾರ್’ ಸಂಚಿಕೆಯಲ್ಲಿ ನಿರೂಪಕ ಹಾಗೂ ಬಾಲಿವುಡ್ ನಟ ಸಲ್ಮಾನ್ ಖಾನ್, ನಟಿ ಕತ್ರಿನಾ ಕೈಫ್ ಅವರ ದೇಹದ ಬಗ್ಗೆ ಟೀಕೆ ಮಾಡಿದ್ದ ಟ್ರೋಲರ್‌ಗಳ ವಿರುದ್ಧ ತೀವ್ರವಾಗಿ ಆಕ್ರೋಶ ವ್ಯಕ್ತಪಡಿಸಿದ್ದರು.

ಸಲ್ಮಾನ್ ಖಾನ್ ಅವರ ಮಾತಿನ ಬಳಿಕ ಕತ್ರಿನಾ ಅವರನ್ನು ಟ್ರೋಲ್ ಮಾಡಿದ್ದ ಪಾಕಿಸ್ತಾನಿ ರೇಡಿಯೋ ಜಾಕಿ (RJ) ಡಾ. ಇಜಾಜ್ ವಾರಿಸ್ ಸಾಮಾಜಿಕ ಜಾಲತಾಣದಲ್ಲಿ ಸಾರ್ವಜನಿಕವಾಗಿ ಕ್ಷಮೆಯಾಚಿಸಿದ್ದಾರೆ.

ಅಂಬಾನಿ ಕುಟುಂಬದ ಗಣೇಶ ಚತುರ್ಥಿ ಆಚರಣೆಯಲ್ಲಿ ಕತ್ರಿನಾ ಕೈಫ್ ಕಾಣಿಸಿಕೊಂಡ ಬಳಿಕ, ಅವರ ಗರ್ಭಧಾರಣೆಯ ನಂತರದ ತೂಕ ಹೆಚ್ಚಳದ ಕುರಿತು ಡಾ. ಇಜಾಜ್ ವಾರಿಸ್ ಸಾಮಾಜಿಕ ಜಾಲತಾಣದಲ್ಲಿ ಟೀಕೆ ಮಾಡಿದ್ದರು. ಇದಕ್ಕೆ ವ್ಯಾಪಕ ವಿರೋಧ ವ್ಯಕ್ತವಾಗಿತ್ತು. ಪಾಕಿಸ್ತಾನಿ ನಟ ಅಲಿ ಜಫರ್ ಕೂಡ ಅವರ ಹೇಳಿಕೆಗಳನ್ನು ಖಂಡಿಸಿ ಕತ್ರಿನಾ ಪರ ನಿಂತಿದ್ದರು.

ಸಲ್ಮಾನ್ ಖಾನ್ ಬಿಗ್‌ಬಾಸ್ ವೇದಿಕೆಯಲ್ಲಿ ಕತ್ರಿನಾ ಅವರ ದೇಹದ ಬಗ್ಗೆ ಟೀಕೆ ಮಾಡುವವರನ್ನು ಪ್ರಶ್ನಿಸಿದ್ದರು. “ಗರ್ಭಿಣಿಯಾದ ಬಳಿಕ ಎಲ್ಲರೂ ತೂಕ ಹೆಚ್ಚಿಸಿಕೊಳ್ಳುತ್ತಾರೆ” ಎಂದು ಹೇಳಿದ ಅವರು, ಇತ್ತೀಚೆಗಷ್ಟೇ ತಾಯಿಯಾಗಿರುವ ಕತ್ರಿನಾ ಅವರ ತೂಕ ಹಾಗೂ ನೋಟದ ಬಗ್ಗೆ ಜನರು ಏಕೆ ಕಾಮೆಂಟ್ ಮಾಡಬೇಕು? ಎಂದು ಖಾರವಾಗಿ ಪ್ರಶ್ನಿಸಿದರು.

ಅಲ್ಲದೆ ಕತ್ರಿನಾ ಮತ್ತೆ ಸಿನಿಮಾಗಳಿಗೆ ಮರಳಿದಾಗ ಫಿಟ್ ಆಗುತ್ತಾರೆ ಎಂದು ಹೇಳಿದ ಸಲ್ಮಾನ್, ಸದ್ಯ ಅವರು ತಮ್ಮ ಕುಟುಂಬದೊಂದಿಗೆ ಸಮಯ ಕಳೆಯಲು ಅವಕಾಶ ನೀಡಬೇಕು ಎಂದು ಹೇಳಿದರು.

ಅನಾಮಧೇಯ ಖಾತೆಗಳ ಹಿಂದೆ ಅಡಗಿ ಇತರರನ್ನು ಟ್ರೋಲ್ ಮಾಡುವವರನ್ನೂ ಸಲ್ಮಾನ್ ಖಾನ್ ತರಾಟೆಗೆ ತೆಗೆದುಕೊಂಡಿದ್ದರು. “ನಿಮ್ಮದೇ ಮುಖ ನೋಡಿ ನಿಮಗೆ ಅಷ್ಟು ಬೇಸರವೇ? ಹಾಗಿದ್ದರೆ ಮತ್ತೊಬ್ಬರ ನೋಟ ಮತ್ತು ತೂಕದ ಬಗ್ಗೆ ಏಕೆ ಕಾಮೆಂಟ್ ಮಾಡುತ್ತೀರಿ?” ಎಂಬ ರೀತಿಯಲ್ಲಿ ಅವರು ಟ್ರೋಲರ್‌ಗಳನ್ನು ಪ್ರಶ್ನಿಸಿದ್ದರು.

ಸಲ್ಮಾನ್ ಕ್ಲಾಸ್ ಬೆನ್ನಲ್ಲೇ ಕ್ಷಮೆಯಾಚಿಸಿದ ಆರ್‌ಜೆ

ಸಲ್ಮಾನ್ ಖಾನ್ ಬಿಗ್‌ಬಾಸ್‌ನಲ್ಲಿ ತಮ್ಮ ಬಗ್ಗೆ ಮಾತನಾಡಿದ್ದನ್ನು ನೋಡಿದ ಬಳಿಕ ತಾವು ಮಾಡಿದ ಕಾಮೆಂಟ್‌ಗಳ ಬಗ್ಗೆ ಯೋಚಿಸಿದ್ದು, ತಪ್ಪಾಗಿದೆ ಎಂದು ಅರಿವಾಯಿತು ಎಂದು ಡಾ. ಇಜಾಜ್ ವಾರಿಸ್ ಹೇಳಿದ್ದಾರೆ.

ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ಹಂಚಿಕೊಂಡಿರುವ ಅವರು, ಕತ್ರಿನಾ ಕೈಫ್‌ಗೆ ಕ್ಷಮೆಯಾಚಿಸಿದ್ದಾರೆ. “ನನ್ನ ಮಾತುಗಳಿಂದ ಕತ್ರಿನಾ ಹಾಗೂ ಅವರ ಅಭಿಮಾನಿಗಳಿಗೆ ನೋವಾಗಿದ್ದರೆ ಹೃದಯಪೂರ್ವಕವಾಗಿ ಕ್ಷಮೆ ಕೇಳುತ್ತೇನೆ. ಬಾಡಿ ಶೇಮಿಂಗ್ ನನ್ನ ಉದ್ದೇಶವಾಗಿರಲಿಲ್ಲ. ಸಲ್ಮಾನ್ ಖಾನ್ ಹಾಗೂ ನನ್ನ ಮಾತುಗಳಿಂದ ಬೇಸರಗೊಂಡ ಎಲ್ಲರಲ್ಲೂ ಕ್ಷಮೆ ಕೇಳುತ್ತೇನೆ” ಎಂದು ಹೇಳಿದ್ದಾರೆ.

ಅಲ್ಲದೆ ತಾವು ಸಲ್ಮಾನ್ ಹಾಗೂ ಕತ್ರಿನಾ ಇಬ್ಬರ ದೊಡ್ಡ ಅಭಿಮಾನಿಯಾಗಿದ್ದು, ವಿಡಿಯೋ ಮಾಡುವಾಗ ತಮಾಷೆಯಾಗಿ ಕೆಲವು ಮಾತುಗಳನ್ನು ಹೇಳಿದ್ದಾಗಿ ಅವರು ತಿಳಿಸಿದ್ದಾರೆ. ಆದರೆ ತಮ್ಮ ಮಾತುಗಳಿಂದ ಹಲವರಿಗೆ ನೋವಾಗಿದೆ ಎಂಬುದನ್ನು ಒಪ್ಪಿಕೊಂಡಿದ್ದಾರೆ.

“ನನ್ನ ಉದ್ದೇಶ ಬಾಡಿ ಶೇಮಿಂಗ್ ಆಗಿರಲಿಲ್ಲ. ಆದರೆ ನನ್ನ ಮಾತುಗಳು ನೋವುಂಟು ಮಾಡಿರಬಹುದು. ಅದಕ್ಕಾಗಿ ನಿಜವಾಗಿಯೂ ವಿಷಾದಿಸುತ್ತೇನೆ” ಎಂದು ಆರ್‌ಜೆ ಹೇಳಿದ್ದಾರೆ.

ಖಡಕ್ ತಿರುಗೇಟು ಕೊಟ್ಟಿದ್ದ ಕತ್ರಿನಾ

ಇನ್ನು ತಮ್ಮ ವಿರುದ್ಧ ವಿಶ್ವದಾದ್ಯಂತ ಜನರು ಟೀಕೆ ಮಾಡುತ್ತಿದ್ದರಿಂದ ಮನಸ್ಸಿಗೆ ಭಾರವಾಗಿತ್ತು ಎಂದಿರುವ ಅವರು, ಟೀಕೆಯಿಂದ ತಾವು ಹೆದರುವುದಿಲ್ಲ ಎಂದೂ ಹೇಳಿದ್ದಾರೆ. ಕತ್ರಿನಾ ಅವರನ್ನು “ಭಾರತದ ಸೂಪರ್‌ಸ್ಟಾರ್” ಎಂದು ಕರೆದಿದ್ದಾರೆ. ಬಳಿಕ ತಮ್ಮ ಪೋಸ್ಟ್‌ನ ಕಾಮೆಂಟ್ ಆಯ್ಕೆಯನ್ನು ಕೂಡ ಆಫ್ ಮಾಡಿದ್ದಾರೆ.

ಕತ್ರಿನಾ ಕೈಫ್ ಮತ್ತು ವಿಕ್ಕಿ ಕೌಶಲ್ ದಂಪತಿಗೆ ಕಳೆದ ನವೆಂಬರ್‌ನಲ್ಲಿ ಪುತ್ರ ವಿಹಾನ್ ಕೌಶಲ್ ಜನಿಸಿದ್ದರು. ಮಗುವಿನ ಜನನದ ಬಳಿಕ ಕತ್ರಿನಾ ಅವರ ದೇಹದ ಬದಲಾವಣೆ ಕುರಿತು ಸಾಮಾಜಿಕ ಜಾಲತಾಣದಲ್ಲಿ ನಡೆದ ಟೀಕೆ ಇದೀಗ ಬಿಗ್‌ಬಾಸ್ ವೇದಿಕೆಯಲ್ಲಿ ಚರ್ಚೆಗೆ ಗ್ರಾಸವಾಗಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

IIT Bombay ವಿದ್ಯಾರ್ಥಿ ನಕಲು ಮಾಡಿದ್ದನ್ನು ತಡೆದಿದ್ದೇ ತಪ್ಪಾ? ಪ್ರೊಫೆಸರ್ ವಿರುದ್ಧ ಪ್ರತಿಭಟನೆ; ಯಾರು ಈ ಪ್ರೊ. Suryanarayana Doolla?

Bihar horror: ಕೋಚಿಂಗ್‌ ಸೆಂಟರ್`ನಿಂದ ಮರಳುತ್ತಿದ್ದ ಅಪ್ರಾಪ್ತ ಜೋಡಿ ಅಡ್ಡಗಟ್ಟಿದ ಗುಂಪು, ಲೈಂಗಿಕ ಕಿರುಕುಳ

ಧರ್ಮಸ್ಥಳ ಸೌಜನ್ಯಾ ಅತ್ಯಾಚಾರ-ಕೊಲೆ ಪ್ರಕರಣಕ್ಕೆ ಬಿಗ್ ಟ್ವಿಸ್ಟ್; ಮರುತನಿಖೆಗೆ ಸುಪ್ರೀಂ ಕೋರ್ಟ್ ಆದೇಶ..!

TMC ಹೆಸರು-ಚಿಹ್ನೆ ಫ್ರೀಜ್; ಚುನಾವಣಾ ಆಯೋಗದ ನಿರ್ಧಾರಕ್ಕೆ ಮಮತಾ ಬ್ಯಾನರ್ಜಿ ಆಕ್ಷೇಪ, ತುರ್ತು ವಿಚಾರಣೆಗೆ ಸುಪ್ರೀಂ ಒಪ್ಪಿಗೆ..!

ಭೂಮಿಯನ್ನು ಸುತ್ತುತ್ತಿರುವ ಆಯುಧಗಳು: ಭಾರತದ ಮುಂದಿರುವ ಸವಾಲುಗಳೇನು? (ಜಾಗತಿಕ ಜಗಲಿ)