ಡೊನಾಲ್ಡ್ ಟ್ರಂಪ್ 
ವಿದೇಶ

ಮಾಧ್ಯಮಗಳಿಗೆ ಪ್ರವೇಶ ನಿರ್ಬಂಧಿಸುವ ಹಕ್ಕು ಯಾವುದೇ ಸರ್ಕಾರಕ್ಕೆ ಇಲ್ಲ: ಟ್ರಂಪ್ ವಿರುದ್ಧ ಒಂದಾದ ಅಮೆರಿಕದ ಮಾಧ್ಯಮಗಳು!

CNN, MS NOW ಮತ್ತು Politio ಮಾಧ್ಯಮ ಸಂಸ್ಥೆಗಳಿಗೆ ಪ್ರವೇಶ ನಿರಾಕರಿಸಿದ ಡೊನಾಲ್ಡ್ ಟ್ರಂಪ್ ಆಡಳಿತದ ಕ್ರಮವನ್ನು ಖಂಡಿಸಿ ಶ್ವೇತ ಭವನದ ಟಿವಿ ಚಾನೆಲ್ ಸೇರಿದಂತೆ ಬಹುತೇಕ ಸುದ್ದಿಸಂಸ್ಥೆಗಳು ಹೇಳಿಕೆ ಬಿಡುಗಡೆ ಮಾಡುವ ಮೂಲಕ ಒಗ್ಗಟ್ಟು ಪ್ರದರ್ಶಿಸಿವೆ.

ವಾಷಿಂಗ್ಟನ್: ಮೂರು ಮಾಧ್ಯಮಗಳಿಗೆ ಶ್ವೇತ ಭವನಕ್ಕೆ ಪ್ರವೇಶವನ್ನು ನಿರಾಕರಿಸಿದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ವಿರುದ್ಧ ಇದೀಗ ಅಮೆರಿಕದ ಬಹುತೇಕ ಮಾಧ್ಯಮಗಳು ತಿರುಗಿಬಿದ್ದಿವೆ.

CNN, MS NOW ಮತ್ತು Politio ಮಾಧ್ಯಮ ಸಂಸ್ಥೆಗಳಿಗೆ ಪ್ರವೇಶ ನಿರಾಕರಿಸಿದ ಡೊನಾಲ್ಡ್ ಟ್ರಂಪ್ ಆಡಳಿತದ ಕ್ರಮವನ್ನು ಖಂಡಿಸಿ ಶ್ವೇತ ಭವನದ ಟಿವಿ ಚಾನೆಲ್ ಗಳ ಸದಸ್ಯರು ಸೇರಿದಂತೆ ಬಹುತೇಕ ಸುದ್ದಿಸಂಸ್ಥೆಗಳು ಹೇಳಿಕೆ ಬಿಡುಗಡೆ ಮಾಡುವ ಮೂಲಕ ಒಗ್ಗಟ್ಟು ಪ್ರದರ್ಶಿಸಿವೆ.

ವಿಮರ್ಶಾತ್ಮಕ ವರದಿಯ ಮೇಲೆ ಮಾಧ್ಯಮಗಳಿಗೆ ಪ್ರವೇಶ ನಿರ್ಬಂಧಿಸುವ ಹಕ್ಕು ಯಾವುದೇ ಸರ್ಕಾರಕ್ಕೆ ಇಲ್ಲ ಎಂದು ಎಚ್ಚರಿಸಿವೆ. ಸುಳ್ಳು ಸುದ್ದಿಯನ್ನು ಪ್ರಸಾರ ಮಾಡಿದ್ದಕ್ಕೆ ಶಿಕ್ಷೆಯಾಗಿ ಈ ಮಾಧ್ಯಮ ಸಂಸ್ಥೆಗಳನ್ನು ಅಧ್ಯಕ್ಷೀಯ ಭವನದಿಂದ ನಿಷೇಧಿಸುತ್ತಿರುವುದಾಗಿ ಡೊನಾಲ್ಡ್ ಟ್ರಂಪ್ ಶುಕ್ರವಾರ ಹೇಳಿದ್ದರು.

ಡೊನಾಲ್ಡ್ ಟ್ರಂಪ್ ಆಡಳಿತದ ವಿರುದ್ಧ ಮೊಕದ್ದಮೆ ಹೂಡುವುದಾಗಿ CNN ಹೇಳಿದ್ದರೆ, ABC ನ್ಯೂಸ್, CBS ನ್ಯೂಸ್, ಫಾಕ್ಸ್ ನ್ಯೂಸ್ ಮೀಡಿಯಾ ಮತ್ತು NBC ನ್ಯೂಸ್ ಸೇರಿದಂತೆ ಅನೇಕ ಮಾಧ್ಯಮ ಸಂಸ್ಥೆಗಳು ಶ್ವೇತ ಭವನಕ್ಕೆ ಮಾಧ್ಯಮಗಳ ಪ್ರವೇಶವನ್ನು ಸಮರ್ಥಿಸಿಕೊಂಡಿದ್ದು, ಸುದ್ದಿ ಸಂಸ್ಥೆಗಳ ಮೇಲಿನ ನಿಷೇಧಕ್ಕೆ ಪ್ರತಿಭವನೆ ವ್ಯಕ್ತಪಡಿಸಿವೆ.

ಸಾರ್ವಜನಿಕರು ತಮ್ಮ ಸರ್ಕಾರದ ಬಗ್ಗೆ ನಿಖರವಾದ, ಸ್ವತಂತ್ರ ಮಾಹಿತಿಯನ್ನು ಪಡೆಯುವಲ್ಲಿ ಪ್ರಮುಖ ಆಸಕ್ತಿಯನ್ನು ಹೊಂದಿದ್ದಾರೆ. ಯಾವುದೇ ಆಡಳಿತವು ಸುದ್ದಿ ಸಂಸ್ಥೆಯನ್ನು ನಿರ್ಬಂಧಿಸಬಾರದು ಏಕೆಂದರೆ ಅದು ಅದರ ವರದಿ ಮಾಡುವಿಕೆಯನ್ನು ಆಕ್ಷೇಪಿಸುತ್ತದೆ" ಎಂದು ಅನೇಕ ಮಾಧ್ಯಮಗಳು ಜಂಟಿ ಹೇಳಿಕೆಯಲ್ಲಿ ತಿಳಿಸಿವೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಸೌಜನ್ಯ ಕೇಸ್‌ ಮರು ತನಿಖೆಗೆ ಸುಪ್ರೀಂ ಆದೇಶ: ಶ್ರೀ ಕ್ಷೇತ್ರ ಧರ್ಮಸ್ಥಳ ಹೇಳಿದ್ದು ಏನು?

ಬೆಳಗಾವಿ: 6 ಮಂದಿ ಸಾವಿನ ಪ್ರಕರಣಕ್ಕೆ ದೊಡ್ಡ ಟ್ವಿಸ್ಟ್; ವ್ಯಕ್ತಿ ಕೈಯಲ್ಲಿ ಬಕೆಟ್; CCTVಯಲ್ಲಿ ಸಿಕ್ತು ಸ್ಫೋಟಕ ತಿರುವು!

ಮಾಗಡಿ: ಚಕ್ರಬಾವಿ ಮರುಳಸಿದ್ದೇಶ್ವರ ಜಂಗಮ ಮಠದ ಸ್ವಾಮೀಜಿ ಲಿಂಗೈಕ್ಯ

ಏಷ್ಯನ್ ಗೇಮ್ಸ್ 2026: ಎರಡನೇ ದಿನ ನಾಲ್ಕು ಪದಕ ಗೆದ್ದ ಭಾರತ, MMA ಸ್ಪರ್ಧೆಯಲ್ಲಿ ಕಂಚು ಗೆದ್ದು, ಇತಿಹಾಸ ಬರೆದ ಸುಚಿಕಾ ತರಿಯಾಲ್!

ರಾಮ ಮಂದಿರದಲ್ಲಿ ಕಳ್ಳತನದ 105 ಘಟನೆ ಸಿಸಿಟಿವಿಯಲ್ಲಿ ಪತ್ತೆ: ಸುಪ್ರೀಂ ಕೋರ್ಟ್‌ಗೆ ಎಸ್‌ಐಟಿ ಮಾಹಿತಿ