ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ online desk
ವಿದೇಶ

ರಷ್ಯಾ ಸಂಸತ್ ಚುನಾವಣೆ: 355ಕ್ಕೂ ಹೆಚ್ಚು ಸ್ಥಾನ ಗೆದ್ದ ಪುಟಿನ್ ಪಕ್ಷ; ಹೊಸ ಇತಿಹಾಸ ಸೃಷ್ಟಿ!

ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರ ಯುನೈಟೆಡ್ ರಷ್ಯಾ ಪಕ್ಷ ಶೇ.57.83 ರಷ್ಟು ಮತಗಳನ್ನು ಪಡೆದುಕೊಂಡಿದೆ ಎಂದು ರಷ್ಯಾ ಕೇಂದ್ರ ಚುನಾವಣಾ ಆಯೋಗ ತಿಳಿಸಿದೆ.

ಮಾಸ್ಕೋ: ಉಕ್ರೇನ್‌ ವಿರುದ್ಧ ಪೂರ್ಣ ಪ್ರಮಾಣದ ಯುದ್ಧ ಪ್ರಾರಂಭವಾದ ನಂತರ ನಡೆದ ಮೊದಲ ಸಂಸತ್ ಚುನಾವಣೆಯಲ್ಲಿ ರಷ್ಯಾದ ಆಡಳಿತಾರೂಢ ಯುನೈಟೆಡ್ ರಷ್ಯಾ ಪಕ್ಷ ಭರ್ಜರಿ ಗೆಲುವು ಸಾಧಿಸಿದೆ.

ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರ ಯುನೈಟೆಡ್ ರಷ್ಯಾ ಪಕ್ಷ ಶೇ.57.83 ರಷ್ಟು ಮತಗಳನ್ನು ಪಡೆದುಕೊಂಡಿದೆ ಎಂದು ರಷ್ಯಾ ಕೇಂದ್ರ ಚುನಾವಣಾ ಆಯೋಗ ತಿಳಿಸಿದೆ.

ಇದುವರೆಗೆ ಶೇ. 90 ರಷ್ಟು ಮತಗಳ ಎಣಿಕೆಯಾಗಿದ್ದು, ಆಡಳಿತರೂಢ ಪಕ್ಷವು ಸುಮಾರು ಶೇ. 58 ರಷ್ಟು ಬೆಂಬಲ ಪಡೆದಿದೆ ಎಂದು ರಷ್ಯಾ ಕೇಂದ್ರ ಚುನಾವಣಾ ಆಯೋಗವನ್ನು ಉಲ್ಲೇಖಿಸಿ ರಾಜ್ಯ ಸುದ್ದಿವಾಹಿನಿಗಳು ವರದಿ ಮಾಡಿವೆ.

ಕಮ್ಯುನಿಸ್ಟ್ ಪಕ್ಷವು ಶೇ. 13.84 ನೊಂದಿಗೆ ಎರಡನೇ ಸ್ಥಾನದಲ್ಲಿದ್ದು, ನಂತರ ರಾಷ್ಟ್ರೀಯವಾದಿ ಲಿಬರಲ್ ಡೆಮಾಕ್ರಟಿಕ್ ಪಕ್ಷವು ಶೇ. 8.9 ರಷ್ಟು ಮತಗಳೊಂದಿಗೆ ಮೂರನೇ ಸ್ಥಾನದಲ್ಲಿದೆ.

ಪುಟಿನ್ ಅವರು ಈ ಚುನಾವಣೆಯನ್ನು ರಷ್ಯಾದಲ್ಲಿ ಕರೆಯಲಾಗುವ “ವಿಶೇಷ ಮಿಲಿಟರಿ ಕಾರ್ಯಾಚರಣೆ”ಗೆ ಸಾರ್ವಜನಿಕರ ಬೆಂಬಲವನ್ನು ಅಳೆಯುವ ಜನಾಭಿಪ್ರಾಯ ಸಂಗ್ರಹದಂತೆ ಬಿಂಬಿಸಿದ್ದರು. ಪುಟಿನ್ ಮತ್ತು ಕ್ರೆಮ್ಲಿನ್‌ನ ಯುದ್ಧ ನೀತಿಯನ್ನು ಬೆಂಬಲಿಸುವ ಪಕ್ಷಗಳಿಗೆ ಮಾತ್ರ ಸ್ಪರ್ಧಿಸಲು ಅನುಮತಿ ನೀಡಲಾಗಿತ್ತು ಹಾಗೂ ಪ್ರಮುಖ ವಿರೋಧ ಪಕ್ಷಗಳನ್ನು ಚುನಾವಣೆಯಿಂದ ದೂರವಿಡಲಾಗಿತ್ತು.

ಪ್ರಾಥಮಿಕ ಫಲಿತಾಂಶಗಳ ಪ್ರಕಾರ, 450 ಸ್ಥಾನಗಳಿರುವ ಡುಮಾ(ರಷ್ಯಾದ ಸಂಸತ್ತಿನ ಕೆಳಮನೆ) ಸಭೆಯಲ್ಲಿ ಯುನೈಟೆಡ್ ರಷ್ಯಾ ಪಕ್ಷವು 355 ಸ್ಥಾನಗಳನ್ನು ಪಡೆಯಲಿದೆ ಎಂದು ಚುನಾವಣಾ ಆಯೋಗದ ಮುಖ್ಯಸ್ಥೆ ಎಲ್ಲಾ ಪಂಫಿಲೋವಾ ತಿಳಿಸಿದ್ದಾರೆ. ಇದು ಪಕ್ಷವು ಪ್ರಸ್ತುತ ಹೊಂದಿರುವ ಸ್ಥಾನಗಳಿಗಿಂತ ಸುಮಾರು 20 ಸ್ಥಾನಗಳು ಹೆಚ್ಚಾಗಿದ್ದು, ತನ್ನ ಇತಿಹಾಸದಲ್ಲೇ ಅತ್ಯಂತ ದೊಡ್ಡ ಜಯವನ್ನು ದಾಖಲಿಸಿದೆ.

ಇದಕ್ಕೂ ಮುನ್ನ 2024 ರ ಮಾರ್ಚ್‌ನಲ್ಲಿ ನಡೆದಿದ್ದ ರಷ್ಯಾ ಅಧ್ಯಕ್ಷೀಯ ಚುನಾವಣೆಯಲ್ಲಿ ವ್ಲಾಡಿಮಿರ್ ಪುಟಿನ್ ಅವರು ಶೇ.87.17 ರಷ್ಟು ದಾಖಲೆ ಮತಗಳನ್ನು ಪಡೆದು ಭರ್ಜರಿ ಜಯ ದಾಖಲಿಸಿದ್ದರು. ಆ ಮೂಲಕ ಅವರು ಐದನೇ ಅವಧಿಗೆ ರಷ್ಯಾದ ಅಧ್ಯಕ್ಷರಾಗಿ ಅಧಿಕಾರ ಚುಕ್ಕಾಣಿ ಹಿಡಿದಿದ್ದರು

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ರಾಮ ಮಂದಿರದಲ್ಲಿ ಕಳ್ಳತನದ 105 ಘಟನೆ ಸಿಸಿಟಿವಿಯಲ್ಲಿ ಪತ್ತೆ: ಸುಪ್ರೀಂ ಕೋರ್ಟ್‌ಗೆ ಎಸ್‌ಐಟಿ ಮಾಹಿತಿ

KPSC ಪಶು ವೈದ್ಯಾಧಿಕಾರಿಗಳ ನೇಮಕಾತಿ ಹಗರಣ: ಅಲೋಕ್ ಕುಮಾರ್ ನೇತೃತ್ವದಲ್ಲಿ SIT ರಚನೆ; ಹೈಕೋರ್ಟ್​​ನಿಂದ ಮಹತ್ವದ ಆದೇಶ

Video: ಮಿಲ್ಕ್ ಟ್ಯಾಂಕರ್ ಪಲ್ಟಿ; ಹೆದ್ದಾರಿಯಲ್ಲಿ ಹಾಲಿನ ಹೊಳೆ, ಕ್ಯಾನ್​ ಹಿಡಿದು ಮುಗಿಬಿದ್ದ ಜನ!

Bihar horror: ಅಪ್ರಾಪ್ತ ಜೋಡಿ ಅಡ್ಡಗಟ್ಟಿ ಲೈಂಗಿಕ ಕಿರುಕುಳ; ಆಂಧಭಕ್ತರೇ ಹೊಣೆ- ರಾಹುಲ್ ಗಾಂಧಿ

46 ಕೋಟಿ ರೂ ಮೌಲ್ಯದ ಚೆಕ್ ವಂಚನೆ ಪ್ರಕರಣ: ಹಿರಿಯ ನಟಿ ಅಂಬಿಕಾ ವಿರುದ್ಧ ಸಹೋದರಿ ದೂರು ದಾಖಲು