ಅಮೆರಿಕದಲ್ಲಿ ಭಾರಿ ಸದ್ದು ಮಾಡುತ್ತಿರುವ ಹನುಮಂತನ ಪ್ರತಿಮೆ ವಿವಾದ Online Desk
ವಿದೇಶ

ಚುನಾವಣೆಯಲ್ಲಿ ಗೆದ್ದರೆ ಹನುಮಾನ್ ಪ್ರತಿಮೆ ಕೆಡವುತ್ತೇವೆ; ಶುಗರ್‌ಲ್ಯಾಂಡ್‌ನ ಹನುಮಂತನ ವಿಗ್ರಹದ ವಿರುದ್ಧ ಯೂಟ್ಯೂಬರ್ ವಿವಾದಾತ್ಮಕ ಪೋಸ್ಟ್

ಅಮೆರಿಕದ ಟೆಕ್ಸಾಸ್‌ನಲ್ಲಿ ನವೆಂಬರ್‌ನಲ್ಲಿ ನಡೆಯಲಿರುವ ಮಧ್ಯಂತರ ಚುನಾವಣೆಯ ಹೊಸ್ತಿಲಿನಲ್ಲಿ, ಸಂಪ್ರಾದಾಯವಾದಿ ಯೂಟ್ಯೂಬರ್ ಒಬ್ಬರು ನೀಡಿದ ಪ್ರಚೋದನಾಕಾರಿ ಹೇಳಿಕೆ ಭಾರಿ ವಿವಾದ ಹಾಗೂ ಧಾರ್ಮಿಕ ದ್ವೇಷದ ಕಿಚ್ಚು ಹೊತ್ತಿಸಿದೆ. ಆ ಕುರಿತ ವರದಿ ಇಲ್ಲಿದೆ:

ಟೆಕ್ಸಾಸ್‌ (ಅಮೆರಿಕ): ಚುನಾವಣೆಯಲ್ಲಿ ಗೆದ್ದರೆ ಒಳ್ಳೆಯ ಕೆಲಸ ಮಾಡುತ್ತೇವೆ ಅನ್ನೋ ನಾಯಕರ ನಡುವೆಯೇ ಇಲ್ಲೊಬ್ಬ ಕಪಟಿ, "ನಾವು ಚುನಾವಣೆಯಲ್ಲಿ ಗೆದ್ದರೆ, ಹನುಮಾನ್‌ ವಿಗ್ರಹ ಕೆಡವುತ್ತೇವೆ" ಅನ್ನೋ ಮೂಲಕ ಧಾರ್ಮಿಕ ದ್ವೇಷದ ಕಿಡಿ ಹೊತ್ತಿಸಿದ್ದಾನೆ. ಅಮೆರಿಕದ ಮುಂಬರುವ ಮಧ್ಯಂತರ ಚುನಾವಣೆಯ ಹಿನ್ನೆಲೆಯಲ್ಲಿ, ಟೆಕ್ಸಾಸ್‌ನ ಹೂಸ್ಟನ್ ಹೊರವಲಯದ ಶುಗರ್‌ಲ್ಯಾಂಡ್‌ನಲ್ಲಿರುವ ಶ್ರೀ ಅಷ್ಟಲಕ್ಷ್ಮಿ ದೇವಾಲಯದ ಆವರಣದಲ್ಲಿರುವ 90 ಅಡಿ ಎತ್ತರದ ಭಗವಾನ್ ಹನುಮಂತನ ವಿಗ್ರಹದ (ಸ್ಟ್ಯಾಚು ಆಫ್ ಯೂನಿಯನ್) ವಿರುದ್ಧ ಯೂಟ್ಯೂಬರ್ ದ್ವೇಷದ ಕಿಡಿ ಹೊತ್ತಿಸಿದ್ದಾನೆ. ಆ ಕುರಿತ ವರದಿ ಇಲ್ಲಿದೆ:

ಯೂಟ್ಯೂಬರ್ ಬೆದರಿಕೆ

ಟೆಕ್ಸಾಸ್‌ನ ಶುಗರ್ ಲ್ಯಾಂಡ್‌ನಲ್ಲಿರುವ ಶ್ರೀ ಅಷ್ಟಲಕ್ಷ್ಮಿ ದೇವಸ್ಥಾನದ ಆವರಣದಲ್ಲಿ ಒಕ್ಕೂಟದ ಪ್ರತಿಮೆ ಎಂದು ಕರೆಯಲಾಗುವ 90 ಅಡಿ ಎತ್ತರದ ಹನುಮಂತನ ಪ್ರತಿಮೆಯನ್ನು 2024 ರ ಆಗಸ್ಟ್‌ನಲ್ಲಿ ಲೋಕಾರ್ಪಣೆ ಮಾಡಲಾಗಿತ್ತು. ಅಂದಿನಿಂದಲೂ ಸ್ಥಳೀಯ ಕೆಲವು ಸಂಪ್ರದಾಯವಾದಿಗಳಿಂದ ಟೀಕೆಗಳು ವ್ಯಕ್ತವಾಗುತ್ತಿದ್ದವು. ಅದರಂತೆ, ಇತ್ತೀಚೆಗೆ ಮೇಕ್ ಅಮೆರಿಕ ಗ್ರೇಟ್ ಅಗೇನ್ ಮೂವ್‌ಮೆಂಟ್‌ನ ಸಕ್ರಿಯ ಕಾರ್ಯಕರ್ತನೂ ಆಗಿರುವ ಅಮೆರಿಕದ ಸಂಪ್ರದಾಯವಾದಿ ಯೂಟ್ಯೂಬರ್ ಜೆಸ್ಸಿ ಹ್ಯೂಸ್, ಎಕ್ಸ್‌ ಖಾತೆಯಲ್ಲಿ ಶುಗರ್‌ಲ್ಯಾಂಡ್‌ನಲ್ಲಿರುವ ಶ್ರೀ ಅಷ್ಟಲಕ್ಷ್ಮಿ ದೇವಾಲಯದ 90 ಅಡಿ ಎತ್ತರದ ಹನುಮಾನ್ ವಿಗ್ರಹದ ಫೋಟೋವನ್ನು ಹಂಚಿಕೊಂಡಿದ್ದ. ಅದರೊಂದಿಗೆ, "ಮೂಲಕ, ನಾವು ಗೆದ್ದಾಗ ಇದನ್ನು ನಾವು ಕೆಡವಿ ಹಾಕುತ್ತೇವೆ" (Btw, when we win, we are tearing this down) ಎಂದು ಬರೆದುಕೊಂಡಿದ್ದಾನೆ. ಏತನ್ಮಧ್ಯೆ, ಯೂಟ್ಯೂಬರ್‌ನ ಈ ವಿವಾದಾತ್ಮಕ ಮತ್ತು ಜನಾಂಗೀಯ ದ್ವೇಷದ ಪೋಸ್ಟ್‌ಗೆ ಅಮೆರಿಕದಲ್ಲಿರುವ ಹಿಂದೂ-ಅಮೆರಿಕನ್ ಸಮುದಾಯ ಹಾಗೂ ಹಿಂದೂ ಸಂಘಟನೆಗಳಿಂದ ತೀವ್ರ ಆಕ್ರೋಶ ವ್ಯಕ್ತವಾಗಿದೆ.

ಮುಂದುವರೆದು, ಅಮೆರಿಕ ಸೇನೆಯ ಮಾಜಿ ಯೋಧ ಹಾಗೂ ಹಿಂದೂ-ಅಮೆರಿಕನ್ ಸಮುದಾಯದ ಮುಖಂಡರಾದ ರುಚಿರ್ ಬಕ್ಷಿ ಅವರು ಈ ದ್ವೇಷದ ಪೋಸ್ಟ್‌ಗೆ ತೀವ್ರವಾಗಿ ಪ್ರತಿಕ್ರಿಯಿಸಿ, "ನನ್ನ ಧರ್ಮದ ಮೇಲೆಯೇ ದಾಳಿ ಮಾಡುವಂತಹ ದೇಶಕ್ಕಾಗಿ ನಾನು ಯುದ್ಧಕ್ಕೆ ಹೋಗಿರಲಿಲ್ಲ" ಎಂದು ಹೇಳುವ ಮೂಲಕ ತಮ್ಮ ಧಾರ್ಮಿಕ ಸ್ವಾತಂತ್ರ್ಯದ ಪರವಾಗಿ ಬ್ಯಾಟಿಂಗ್ ಮಾಡಿದ್ದಾರೆ.

ಇನ್ನು, ಈ ಹನುಮಾನ್ ವಿಗ್ರಹವನ್ನು ಆಗಸ್ಟ್ 2024 ರಲ್ಲಿ ಅನಾವರಣಗೊಳಿಸಲಾಗಿತ್ತು. ಅಮೆರಿಕದ ಕೆಲವು ಕ್ರಿಶ್ಚಿಯನ್ ಸಂಪ್ರದಾಯವಾದಿಗಳು ಇದನ್ನು "ಅನ್-ಕ್ರಿಶ್ಚಿಯನ್" ಮತ್ತು "ಥರ್ಡ್ ವರ್ಲ್ಡ್ ಇನ್ವೇಷನ್" (ಮೂರನೇ ಜಗತ್ತಿನ ಆಕ್ರಮಣ) ಎಂದು ಜನಾಂಗೀಯವಾಗಿ ಬಿಂಬಿಸಲು ಯತ್ನಿಸುತ್ತಿದ್ದಾರೆ. ಅದರಲ್ಲೂ, ನವೆಂಬರ್ ತಿಂಗಳಲ್ಲಿ ನಡೆಯಲಿರುವ ಅಮೆರಿಕದ ಮಧ್ಯಂತ ಚುನಾವಣಾ ಅಂಗಳದಲ್ಲಿ ಟೆಕ್ಸಾಸ್‌ನ ಸುಮಾರು 5 ಲಕ್ಷಕ್ಕೂ ಅಧಿಕ ಇರುವ ಭಾರತೀಯ-ಅಮೆರಿಕನ್ ಮತದಾರರನ್ನು ಸೆಳೆಯಲು ರಾಜಕೀಯ ಪಕ್ಷಗಳು ಯತ್ನಿಸುತ್ತಿರುವ ಮಧ್ಯೆಯೇ ಈ ಧಾರ್ಮಿಕ ದ್ವೇಷದ ಕಿಡಿ ದೊಡ್ಡ ಚರ್ಚೆಗೆ ಕಾರಣವಾಗಿದೆ. ಅದರಲ್ಲೂ, ಇತ್ತೀಚೆಗೆ ರಿಪಬ್ಲಿಕನ್ ನಾಯಕ ಬೊ ಫ್ರೆಂಚ್ ಅವರು ದಕ್ಷಿಣ ಏಷ್ಯಾ ಮೂಲದ ವಿದ್ಯಾರ್ಥಿಗಳ ಬಗ್ಗೆ ನೀಡಿದ್ದ ವಿವಾದಾತ್ಮಕ ಹೇಳಿಕೆಯನ್ನು ಹಕೀಮ್ ಜೆಫ್ರಿಸ್, ಜಾನ್ ಕಾರ್ನಿನ್ ಸೇರಿದಂತೆ ಹಲವು ಹಿರಿಯ ರಾಜಕಾರಣಿಗಳು ಟೀಕಿಸಿದ್ದರು. ಈಗ ಹನುಮಾನ್ ಪ್ರತಿಮೆಯ ವಿವಾದವೂ ಚುನಾವಣಾ ರಣರಂಗದಲ್ಲಿ ಪ್ರಮುಖ ವಿಚಾರವಾಗಿ ಚರ್ಚೆಗೆ ಬರುತ್ತಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಜಾಗತಿಕ ವ್ಯವಸ್ಥೆ ಒತ್ತಡದಲ್ಲಿದೆ, ಬಹುಪಕ್ಷೀಯತೆಗೆ ಸುಧಾರಣೆ ಅಗತ್ಯ: ವಿಶ್ವಸಂಸ್ಥೆಯಲ್ಲಿ ಜೈಶಂಕರ್ ಕರೆ

ಸಾಂಪ್ರದಾಯಿಕ ಮಾಧ್ಯಮಗಳಿಗೆ ಸೆಡ್ಡು ಹೊಡೆದ ಅಮೆರಿಕಾ ಅಧ್ಯಕ್ಷ; ಶ್ವೇತಭವನದಿಂದ 24/7 ‘ಟ್ರಂಪ್ ಟಿವಿ’ ಸ್ಟ್ರೀಮಿಂಗ್ ಆರಂಭ..!

ಕಸ್ತೂರಿರಂಗನ್ ವರದಿ ಗದ್ದಲ: ಮೇಲ್ಮನೆಯಲ್ಲಿ ಸತತ 10 ಗಂಟೆಗಳ ಮಹಾ ಚರ್ಚೆ; ಸರ್ಕಾರದ ನಿಲುವೇನು..?

ರಾಜ್ಯದ ಹಲವೆಡೆ ವರುಣನ ಆರ್ಭಟ: ಬೆಂಗಳೂರು ಸೇರಿ ಪ್ರಮುಖ ಜಿಲ್ಲೆಗಳಿಗೆ yellow ಅಲರ್ಟ್ ಘೋಷಣೆ!

ಕಸ್ತೂರಿರಂಗನ್ ವರದಿ ವಿವಾದ: ವಿಧಾನಸಭೆಯಲ್ಲಿ ಭಾರೀ ಹೈಡ್ರಾಮಾ, ಕಾಂಗ್ರೆಸ್-ಬಿಜೆಪಿ ವಾಕ್ಸಮರ..!