ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು 
ವಿದೇಶ

ವಿಶ್ವಸಂಸ್ಥೆಯಲ್ಲಿ ನೆತನ್ಯಾಹುಗೆ ಬಿಗ್ ಶಾಕ್: ಭಾಷಣ ಬಹಿಷ್ಕರಿಸಿ ಹೊರನಡೆದ ಹತ್ತಾರು ದೇಶಗಳ ಪ್ರತಿನಿಧಿಗಳು,"ನೈತಿಕ ಹೇಡಿಗಳು" ಎಂದು ಕರೆದ ಇಸ್ರೇಲ್ ಪ್ರಧಾನಿ..!

ಗಾಜಾ ಮತ್ತು ಲೆಬನಾನ್‌ನಲ್ಲಿ ಇಸ್ರೇಲ್ ನಡೆಸುತ್ತಿರುವ ಭೀಕರ ಮಿಲಿಟರಿ ದಾಳಿ ಹಾಗೂ ನಾಗರಿಕರ ಹತ್ಯೆಯನ್ನು ವಿರೋಧಿಸಿ ಅಂತರರಾಷ್ಟ್ರೀಯ ಸಮುದಾಯದ ಪ್ರತಿನಿಧಿಗಳು ಈ ಪ್ರತಿಭಟನೆ ನಡೆಸಿದರು.

ನ್ಯೂಯಾರ್ಕ್: ವಿಶ್ವಸಂಸ್ಥೆಯ ಸಾಮಾನ್ಯ ಸಭೆಯಲ್ಲಿ (UNGA) ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರಿಗೆ ತೀವ್ರ ಮುಖಭಂಗ ಉಂಟಾಗಿದೆ.

ಸೆಪ್ಟೆಂಬರ್ 24ರಂದು ನ್ಯೂಯಾರ್ಕ್‌ನಲ್ಲಿ ನಡೆದ ವಿಶ್ವಸಂಸ್ಥೆಯ 81ನೇ ಅಧಿವೇಶನದಲ್ಲಿ, ನೆತನ್ಯಾಹು ಅವರು ಭಾಷಣ ಮಾಡಲು ಪೋಡಿಯಂ ಕಡೆಗೆ ಹೆಜ್ಜೆ ಇಡುತ್ತಿದ್ದಂತೆ ಹತ್ತಾರು ದೇಶಗಳ ರಾಜತಾಂತ್ರಿಕ ಪ್ರತಿನಿಧಿಗಳು ಒಟ್ಟಾಗಿ ಸಭಾಂಗಣದಿಂದ ಹೊರನಡೆದು ತಮ್ಮ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಗಾಜಾ ಮತ್ತು ಲೆಬನಾನ್‌ನಲ್ಲಿ ಇಸ್ರೇಲ್ ನಡೆಸುತ್ತಿರುವ ಭೀಕರ ಮಿಲಿಟರಿ ದಾಳಿ ಹಾಗೂ ನಾಗರಿಕರ ಹತ್ಯೆಯನ್ನು ವಿರೋಧಿಸಿ ಅಂತರರಾಷ್ಟ್ರೀಯ ಸಮುದಾಯದ ಪ್ರತಿನಿಧಿಗಳು ಈ ಪ್ರತಿಭಟನೆ ನಡೆಸಿದರು.

ವಿವಿಧ ದೇಶಗಳ ರಾಜತಾಂತ್ರಿಕರು ಸಭೆಯಿಂದ ಹೊರಹೋಗುತ್ತಿದ್ದಂತೆ ಇಡೀ ಸಭಾಂಗಣದಲ್ಲಿ ಕೂಗಾಟ, ಚೀರಾಟ ಮತ್ತು ಪರ-ವಿರೋಧದ ಘೋಷಣೆಗಳು ಮೊಳಗಿದವು. ಪರಿಸ್ಥಿತಿಯನ್ನು ನಿಯಂತ್ರಿಸಲು ಅಧ್ಯಕ್ಷರು ಪದೇ ಪದೇ ಶಿಸ್ತು ಕಾಪಾಡುವಂತೆ ಮನವಿ ಮಾಡಬೇಕಾಯಿತು.

ಪ್ರತಿನಿಧಿಗಳ ಈ ದಿಢೀರ್ ಬಹಿಷ್ಕಾರದಿಂದ ಅರ್ಧದಷ್ಟು ಖಾಲಿಯಾಗಿದ್ದ ಸಭಾಂಗಣವನ್ನು ಉದ್ದೇಶಿಸಿ ಮಾತನಾಡಿದ ಇಸ್ರೇಲ್ ಪ್ರಧಾನಿ ನೆತನ್ಯಾಹು, ತೀವ್ರ ಆಕ್ರೋಶ ಹೊರಹಾಕಿದರು.

ಭಾಷಣದ ಆರಂಭದಲ್ಲೇ ಕಿಡಿಕಾರಿದ ಅವರು, "ನನ್ನ ಭಾಷಣ ಆರಂಭಿಸುವ ಮುನ್ನ ಒಂದು ಸಣ್ಣ ಪ್ರಕಟಣೆ: ಈ ಸಭಾಂಗಣದಲ್ಲಿ ಇನ್ನೂ ಯಾರಾದರೂ ನೈತಿಕ ಹೇಡಿಗಳು ಉಳಿದಿದ್ದರೆ, ದಯವಿಟ್ಟು ಈಗಲೇ ಹೊರಗೆ ಹೋಗಬಹುದು ಎಂದು ನೇರವಾಗಿಯೇ ಹೇಳಿದರು.

ಇಸ್ರೇಲ್ ಮಾಡುತ್ತಿರುವುದು ಜನಾಂಗೀಯ ಹತ್ಯೆಯಲ್ಲ, ಬದಲಿಗೆ ಇರಾನ್ ಮತ್ತು ಅದರ ಬೆಂಬಲಿತ ಉಗ್ರಗಾಮಿ ಸಂಘಟನೆಗಳ ವಿರುದ್ಧದ ಆತ್ಮರಕ್ಷಣೆ. ನಾವು ನಾಗರಿಕರನ್ನು ರಕ್ಷಿಸಲು ಅಸಂಖ್ಯಾತ ಕ್ರಮಗಳನ್ನು ಕೈಗೊಂಡಿದ್ದೇವೆ ಎಂದು ತಮ್ಮ ಮಿಲಿಟರಿ ದಾಳಿಯನ್ನು ಸಮರ್ಥಿಸಿಕೊಂಡರು.

ಇಸ್ರೇಲ್ ಇಂದು ಇಡೀ ವಿಶ್ವಕ್ಕೆ ಕಂಟಕವಾಗಿರುವ ಭಯೋತ್ಪಾದನೆಯ ವಿರುದ್ಧ ಹೋರಾಡುತ್ತಿದೆ. ಇಂದು ಸಭೆಯಿಂದ ಹೊರನಡೆದ ದೇಶಗಳನ್ನು ಸಹ ಇಸ್ರೇಲ್‌ನ ಹೋರಾಟವೇ ರಕ್ಷಿಸುತ್ತಿದೆ ಎಂದು ವಾದಿಸಿದರು.

ಇದೇ ವೇಳೆ ಪ್ಯಾಲೇಸ್ಟಿನಿಯನ್ ದೇಶಕ್ಕೆ ಪಾಶ್ಚಿಮಾತ್ಯ ರಾಷ್ಟ್ರಗಳು ಮಾನ್ಯತೆ ನೀಡಿರುವುದನ್ನು "ಅಪಮಾನದ ಸಂಕೇತ" ಎಂದು ಕರೆದ ಅವರು, ಇಸ್ರೇಲ್ ವಿರುದ್ಧ ಜಾಗತಿಕ ಮಟ್ಟದಲ್ಲಿ ಕೇಳಿಬರುತ್ತಿರುವ ಯುದ್ಧ ಅಪರಾಧದ ಆರೋಪಗಳನ್ನು ಸಂಪೂರ್ಣವಾಗಿ ತಳ್ಳಿಹಾಕಿದರು.

ಕಳೆದ ವರ್ಷವೂ (2025) ವಿಶ್ವಸಂಸ್ಥೆಯ ಸಾಮಾನ್ಯ ಸಭೆಯಲ್ಲಿ ನೆತನ್ಯಾಹು ಭಾಷಣ ಮಾಡಲು ಬಂದಾಗ 50ಕ್ಕೂ ಹೆಚ್ಚು ದೇಶಗಳ 100ಕ್ಕೂ ಅಧಿಕ ಪ್ರತಿನಿಧಿಗಳು ಸಭೆಯನ್ನು ಬಹಿಷ್ಕರಿಸಿ ಹೊರನಡೆದಿದ್ದರು.

ಈ ಬಾರಿಯೂ ಅದೇ ಇತಿಹಾಸ ಮರುಕಳಿಸಿದ್ದು, ಇಸ್ರೇಲ್‌ನ ಮಿಲಿಟರಿ ನೀತಿಯ ವಿರುದ್ಧ ಜಾಗತಿಕ ಮಟ್ಟದಲ್ಲಿ ತೀವ್ರ ಅಸಮಾಧಾನ ಇರುವುದನ್ನು ಈ ಘಟನೆ ಸಾಬೀತುಪಡಿಸಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಸಂಘರ್ಷ ಅಂತ್ಯಕ್ಕೆ ಇರಾನ್ 7 ದಿನಗಳ ಯೋಜನೆ ಪ್ರಸ್ತಾಪ: ಹಾರ್ಮುಜ್ ಜಲಸಂಧಿ ಮತ್ತೆ ಮುಕ್ತ

ವಿಶ್ವಸಂಸ್ಥೆಯಲ್ಲಿ Pak ಪ್ರಧಾನಿಗೆ ಮುಖಭಂಗ: ಭಯೋತ್ಪಾದನೆ ಕುರಿತ ಪ್ರಶ್ನೆ ಎದುರಿಸಲಾಗದೆ ತಲೆತಗ್ಗಿಸಿ ನಡೆದ ಶೆಹಬಾಜ್ ಷರೀಫ್..! Video

ಶ್ವೇತಭವನದಲ್ಲಿ ಚೀನಾ ಅಧ್ಯಕ್ಷರಿಗೆ ಅದ್ಧೂರಿ ಸ್ವಾಗತ: ಕ್ಸಿ ಜಿನ್‌ಪಿಂಗ್‌ ಜೊತೆಗಿನ ಹಳೆಯ ನಂಟು ಸ್ಮರಿಸಿ, ‘ನಮ್ಮದು ನಿಜಕ್ಕೂ ಅದ್ಭುತ ಸ್ನೇಹ’ ಎಂದ ಟ್ರಂಪ್‌..!

'ಮೋದಿ, ಶಾ, ಜ್ಞಾನೇಶ್ ಕುಮಾರ್ ದೇಶದ್ರೋಹಿಗಳು'; ನೂರಕ್ಕೆ ನೂರರಷ್ಟು ಎಲ್ಲಾ ಚುನಾವಣೆಗಳಲ್ಲೂ ಅಕ್ರಮ; ಸಂಚುಕೋರರಿಗೆ ಶಿಕ್ಷೆಯಾಗಬೇಕು: ರಾಹುಲ್ ಗಾಂಧಿ

'ಎನ್‌ಕೌಂಟರ್'ನಲ್ಲಿ ನನ್ನನ್ನು ಕೊಲ್ಲಬಹುದು: ಜೀವ ಭಯದಲ್ಲಿ ಸೋನಂ ವಾಂಗ್‌ಚುಕ್!