ಅಷ್ಠಾಂಗ ಶನಿ

ಅಷ್ಠಾಂಗ ಶನಿ
Updated on: 

ಬ್ರಹ್ಮಾಂಡದಲ್ಲಿ ಸೂರ್ಯನಿಂದ 900 ಮಿಲಿಯನ್ ಕಿಲೋಮೀಟರ್ ವರೆಗೆ ವಿಸ್ತಾರಗೊಂಡ ಸೌರ ಮಂಡಲದಲ್ಲಿ 11 ಗ್ರಹಗಳು, ಹಲವು ಗ್ರಹಗಳನ್ನು ಪ್ರದಕ್ಷಿಣೆ ಮಾಡುವ 63ರಿಂದ 64 ಉಪಗ್ರಹಗಳು (ಚಂದಿರಗಳು) ಹಾಗೂ ಪೃಥ್ವಿ ಮೇಲಿನ ಆತ್ಮದ ಭೌತಿಕ ಗುಣಗಳಿಗೂ ಅವಿನಾಭಾವ ಸಂಬಂಧವಿದೆ.
ಸೂರ್ಯನಿಂದ 1,427 ಮಿಲಿಯನ್ ಕಿ.ಮೀ. ದೂರದಲ್ಲಿ 16 ಚಂದಿರಗಳನ್ನು ಹೊಂದಿರುವ ಶನಿಗ್ರಹದ ನಭೋಪ್ರಭಾವ ಪೃಥ್ವಿಯ ಮೇಲ್ಮೈಯ ಆತ್ಮದ ಭೌತಿಕಕಾಯ (ಮುಕ್ಕೋಟಿ ಜೀವರಾಶಿ)ಗಳ ಮೇಲೆ ಬಿದ್ದಾಗ ಸಂಭವಿಸುವ ಭೌತಿಕ ಅಂತರ್ ಗ್ರಹಣಗಳನ್ನು ವಿಜ್ಞಾನವಲ್ಲದ ಮನೋವೈಜ್ಞಾನಿಕ ಶಾಸ್ತ್ರದಿಂದ ಭೇದಿಸಿ 2013ರ ಆಷಾಢ ಮಾಸದಲ್ಲಿ ಜನಿಸುವ ಮಕ್ಕಳ ಅಷ್ಟಾಂಗ ಶನಿ ಪ್ರಭಾವಗಳನ್ನು ತಿಳಿಸಲಾಗಿದೆ.

ಆಷಾಢ ಹುಣ್ಣಿಮೆ
ಆಷಾಢ ಹುಣ್ಣಿಮೆ ಜು.22ರ ರವಿಕಾಲದಲ್ಲಿ ಸೂರ್ಯ ಕಟಕ ರಾಶಿಯಿಂದ ಸಿಂಹ ರಾಶಿಗೆ ಪ್ರವೇಶ ಹೊಂದುವ ಕಾಲಮಾನವಾದ್ದರಿಂದ ದೆಸೆಗ್ರಹ ರವಿ, ಉಚ್ಚ ಗ್ರಹ ಶುಕ್ರ ಮತ್ತು ಯಾವುದೇ ನೀಚಗ್ರಹ ಇರುವುದಿಲ್ಲ.
ಇದರಿಂದ ಅಂದು ಜನಿಸಿದ ಮಕ್ಕಳಿಗೆ ಯಾವುದೇ ಗ್ರಹ ದೋಷಗಳು ಜೀವನವಿಡೀ ಬರಲಾರವು. ಜ್ಞಾನ, ಬಲ, ಐಶ್ವರ್ಯ, ಶಕ್ತಿ, ಸಾಹಸ, ಪರಾಕ್ರಮ, ಬುದ್ಧಿಬಲ ಮತ್ತು ತೇಜಸ್ಸು ತಾವಾಗಿಯೇ ವೃದ್ಧಿಸುತ್ತವೆ. ದೇಹ ಬೆಳೆದಂತೆಲ್ಲ ಅಧಿಕ ಜ್ಞಾಪಕಶಕ್ತಿ, ಅಹಂಭಾವ, ಸ್ವೇಚ್ಛಾಚಾರ ವೃದ್ಧಿಸುತ್ತದೆ.
ಸಂಸ್ಕೃತಿ, ಸಮಾಜ, ರಾಜಕೀಯ ಮತ್ತು ಧರ್ಮಾಚರಣೆಯಲ್ಲಿ ಆಸಕ್ತಿ ಇದ್ದು, ಅಧಿಕ ಆಯುಸ್ಸು, ಕ್ರೀಡೆ, ಕಲೆ ಮತ್ತು ವಿಜ್ಞಾನದಲ್ಲಿ ಪ್ರಗತಿ ಸಾಧನೆ ಸಾಧ್ಯ.
ಅಂದು ಪ್ರಾತಃಕಾಲ ಜನಿಸಿದ ಹೆಣ್ಣು ಮಗುವಿನಲ್ಲಿ ಸಿಂಹಿಣಿ ಗುಣಗಳು ತಾವಾಗಿಯೇ ವೃದ್ಧಿಸುತ್ತವೆ. ಶನಿಯು ಅಷ್ಟಾಂಗ ಯೋಗದಲ್ಲಿ ರಾಜಯೋಗ ಮತ್ತು ಶುಕ್ರದೆಸೆ ತರುತ್ತಾನೆ. ಜೀವನದಲ್ಲಿ ಯಾವುದೇ ಅಪಘಾತ ಸಂಭವಿಸಲಾರವು. ಆಗಸ್ಟ್ 29ರಂದು ಪ್ರಾತಃಕಾಲ ನವಗ್ರಹಗಳಿಗೆ ಅಭಿಷೇಕ ಮಾಡಿಸಿ.

ಆಷಾಢ ಅಮವಾಸ್ಯೆ
ಆಷಾಢದ ಅಮವಾಸ್ಯೆ ಜುಲೈ 8 ಮತ್ತು ಆಗಸ್ಟ್ 6ರಂದು ಸೂರ್ಯ ಸಿಂಹರಾಶಿಯಲ್ಲಿಯೇ ಸಂಚರಿಸುವುದರಿಂದ, ಕಾಲಗಣನಾಚಕ್ರವು ಗುರು ಮತ್ತು ಶುಕ್ರಗ್ರಹಗಳಿಗೆ ಆಷಾಢ ಅಮವಾಸ್ಯೆಗಳು ಪ್ರಿಯಕರ ದಿನಗಳಾಗಿರುತ್ತವೆ.
ಈ ವೇಳೆ ಜನಿಸಿದ ಮಕ್ಕಳಲ್ಲಿ 6-11-11 ವರ್ಷಗಳಲ್ಲಿ ಗುರು ಮತ್ತು ಶುಕ್ರ ದೆಸೆಗಳು ಮರುಕಳಿಸುತ್ತಲೇ ಇರುತ್ತವೆ. ಅವರ ದೇಹವೇ ಅಷ್ಟಾಂಗ ಯೋಗ ಮಂದಿರವಾಗಿ ಶನಿಯು ನಭೋ ಪ್ರಭಾವ ಹೆಚ್ಚಿನದಾಗಿರುತ್ತವೆ.
ಇಂಥ ದೆಸೆಗಳನ್ನು ಸದ್ವಿನಿಯೋಗ ಮಾಡಿಕೊಂಡರೆ ಎಲ್ಲಾ ಕ್ಷೇತ್ರಗಳಲ್ಲೂ ಪ್ರಪಂಚದ ಮಹಾನ್ ವ್ಯಕ್ತಿ ಆಗುವುದರಲ್ಲಿ ಸಂಶಯವೇ ಇಲ್ಲ. ಜೀವನ ಮಧ್ಯಭಾಗದಲ್ಲಿ ಆಕಸ್ಮಿಕ ಅದೃಷ್ಟಗಳು, ದೆಸೆ ಗ್ರಹಗಳು ರವಿ ಮತ್ತು ಚಂದ್ರ ಆಗಿರುವುದರಿಂದ ಶರೀರದಲ್ಲಿ ದೈವ ಶಕ್ತಿಯೊಂದು ಅಡಕವಾಗಿರುತ್ತದೆ. ಅದೇ ಶಕ್ತಿಯು ಮುಂದಿನ ಭವಿಷ್ಯದಲ್ಲಿ ಅದೃಷ್ಟ ತರಲಿದೆ.
ಅಷ್ಟಮದಲ್ಲಿ ಶನಿ ಸಂಚರಿಸಿದರೆ ಬ್ರಹ್ಮಚರ್ಯ, ಸನ್ಯಾಸಯೋಗ, ದೈವಜ್ಞರಾಗಿ ಪರಿವರ್ತನೆಗೊಳ್ಳುತ್ತಾರೆ. ಕಲಾ ಪ್ರಪಂಚದಲ್ಲಿ ಸಾಧನೆ ಮತ್ತು ಸಮಾಜ ಸುಧಾರಣೆಯಲ್ಲಿ ಸೇವೆ. ಮಾರ್ಚಿ 21 ಮತ್ತು ಸೆಪ್ಟೆಂಬರ್ 23ರಂದು ಪ್ರತಿ ವರ್ಷವೂ ಮಗುವಿಗೆ ಪ್ರಾತಃಕಾಲ ಸೂರ್ಯದರ್ಶನ ಮಾಡಿಸಿ.

ಆಷಾಢ ಕ್ಷೀಣ- ವೃದ್ಧಿ ಚಂದ್ರ
ಆಷಾಢದ ಕ್ಷೀಣ ಮತ್ತು ವೃದ್ಧಿ ಚಂದ್ರಕಾಲ ಮಾನದಲ್ಲಿ ರವಿಯ ನಭೋಪ್ರಭಾವ ಪೃಥ್ವಿಯ ಮೇಲೆ ಹೆಚ್ಚಿನದಾಗಿ ಎರಕ ಹೊಯ್ಯುತ್ತಿರುತ್ತವೆ. ಏಕೆಂದರೆ ಸಿಂಹರಾಶಿ ಪ್ರಮುಖ 52 ನಕ್ಷತ್ರಗಳಿಂದ ಸಂಯೋಜನೆಗೊಂಡ ತಾರಾಮಂಡಲ.  12 ತಾರೆಗಳು ಪ್ರಭಾವ ತಾರೆಗಳಾಗಿದ್ದು, 21ನೇ ತಾರೆಯು ಜ್ಯೋತಿಷ್ಯ ಶಾಸ್ತ್ರದಲ್ಲಿ ಪ್ರಾಮುಖ್ಯ ಪಡೆದಿರುತ್ತದೆ. ಏಕೆಂದರೆ 21ನೇ ತಾರೆ ಪೃಥ್ವಿಗೆ ಹತ್ತಿರವಾಗಿದ್ದು, ಮೂರು ನಕ್ಷತ್ರಗಳನ್ನು ಹೊಂದಿದೆ. ಈ ನಕ್ಷತ್ರದಿಂದ ಎರಕ ಹೊಯ್ಯುವ ನಭೋ ಪ್ರಭಾವ ಶನಿಗ್ರಹದ ಎಲ್ಲಾ ಚಂದಿರಗಳ ಮೇಲೆ ಹಾದು ಅಂತರ್ ಗ್ರಹಣ ಉಂಟಾಗಿ ಪೃಥ್ವಿಯ ಮೇಲೆ ಬೀಳುತ್ತದೆ.
ಇದರಿಂದ ರವಿ ಮತ್ತು ಶನಿಯ ಪ್ರಭಾವ ಹೆಚ್ಚಾಗಿರುತ್ತದೆ. ಈ ನಕ್ಷತ್ರಕ್ಕೆ ಟ್ರೈಪರ್ಸ್ ಅಥವಾ ಸುಕ್‌ಸಾನ್ ಎಂದು ಕರೆಯಲಾಗಿದೆ. ಈ ವೇಳೆ ಹಗಲು ಜನಿಸಿದ ಗಂಡು ಮಗುವಿಗೆ ರಾಜ ಪಟ್ಟಾಭಿಷೇಕ ಮತ್ತು ರಾತ್ರಿ ಜನಿಸಿದ ಹೆಣ್ಣು ಮಗುವಿಗೆ ರಾಣಿ ಪಟ್ಟಾಭಿಷೇಕ ಪ್ರಾಪ್ತಿ.
ಸಾಗರ ಮತ್ತು ಬಾಹ್ಯ ಸಂಶೋಧನೆ, ಜಲಕ್ರೀಡೆಯಲ್ಲಿ ಪ್ರಗತಿ, ಅಧಿಕ ಜ್ಞಾಪಕ ಶಕ್ತಿ, ಬುದ್ಧಿ ಬ್ರಹ್ಮಾಂಡ, ಆರನೇ ಸೆನ್ಸ್ ಇರುತ್ತದೆ. ಸಕಲ ಕಲಾವಲ್ಲಭನಾಗಿ ವಿಜೃಂಭಣೆ, ವಿದೇಶ ವಾಸ್ತವ್ಯ, ವಿಜ್ಞಾನ ಮತ್ತು ತಂತ್ರಜ್ಞಾನದಲ್ಲಿ ವಿಶೇಷ. ಡಿಸೆಂಬರ್ 24ರಂದು ಪ್ರಾತಃಕಾಲ ಸ್ನಾನ ಮಾಡಿಸುವಾಗ ಸೂರ್ಯನ ಕಿರಣಗಳು ಮಗುವಿನ ಮೇಲೆ ಬೀಳಲಿ. ಮಾಹಿತಿಗಾಗಿ ಮೊ. 99456 05618 ಸಂಪರ್ಕಿಸಿ.

- ವಿ. ನಾರಾಯಣಶೆಟ್ಟಿ ಪದ್ಮಶಾಲಿ

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com