ಗ್ರಹಚಾರ ಸಮಾಚಾರ

ಜಾತಕದಲ್ಲಿ ಯಾವ ಗ್ರಹಗಳು ಯಾವ ಸ್ಥಳದಲ್ಲಿ ಇರುತ್ತದೆಯೋ ಅದರ ಮೇಲೆ ಮುನಷ್ಯನ ಕಾರ್ಯ ಚಟುವಟಿಕೆಗಳೂ ನಡೆಯುತ್ತಿರುತ್ತವೆ...
ಗ್ರಹಚಾರ ಸಮಾಚಾರ
Updated on: 

ಜಾತಕದಲ್ಲಿ ಯಾವ ಗ್ರಹಗಳು ಯಾವ ಸ್ಥಳದಲ್ಲಿ ಇರುತ್ತದೆಯೋ ಅದರ ಮೇಲೆ ಮುನಷ್ಯನ ಕಾರ್ಯ ಚಟುವಟಿಕೆಗಳೂ ನಡೆಯುತ್ತಿರುತ್ತವೆ. ಹೀಗಾಗಿ ಗ್ರಹಗಳ ಪ್ರಭಾವ ಒಂದಲ್ಲಾ ಒಂದು ರೀತಿ ಸದಾ ನಮ್ಮ ಮೇಲೆ ಬೀರುತ್ತಲೇ ಇರುತ್ತದೆ.
ಶುಭ ಗ್ರಹರು ಗ್ರಹಗಳ ಒಳ್ಳೆಯ ಸ್ಥಾನದಲ್ಲಿ ಇರುವುದು, ಭಾವಗಳು ಬಲದಿಂದ ಕೂಡಿ ಅಥವಾ ಶುಭ ಗ್ರಹಯುಕ್ತರಾಗಿ ಇದ್ದರೆ ಆರೋಗ್ಯ, ಸಮಾಜದಲ್ಲಿ ಸನ್ಮಾನ, ಹಣಕಾಸಿನ ಲಾಭ, ಮಿತ್ರರಿಂದ ಸಹಾಯ, ಕೈ ಹಿಡಿದ ಕೆಲಸದಲ್ಲಿ ಸಫಲತೆ, ಕಾರ್ಯದಲ್ಲಿ ಯಶಸ್ಸು, ಇತ್ಯಾದಿ ಒಳ್ಳೆಯ ಫಲಗಳು ಸಿಗುತ್ತವೆ.
ಗ್ರಹಗಳು ದೋಷದಿಂದ ಕೂಡಿದ್ದರೆ ಬಲಹೀನರಾಗಿ, ಕೆಟ್ಟ ಸ್ಥಾನದಲ್ಲಿ ಇದ್ದರೆ, ಭಾವಗಳು ಬಲಹೀನರಾಗಿ ಅಥವಾ ದೋಷದಿಂದ ಕೂಡಿದ್ದರೆ ಇದು ಅಶುಭ ಫಲ ನೀಡುತ್ತದೆ. ಅವುಗಳಿಂದಾಗಿ ಮರಣ, ರೋಗ, ಬಂಧುಗಳಿಗೆ ಅಪಾಯ, ಮನೆಗೆ ತೊಂದರೆ, ಅಧಿಕಾರ ಕಳೆದುಕೊಳ್ಳುವುದು, ಮನೆಯಲ್ಲಿ ಕಳ್ಳತನವಾಗುವುದು, ಹೆಸರಿಗೆ ಕಳಂಕ ಬರುವಂಥ ಸಂದರ್ಭಗಳು ಬರುತ್ತವೆ.
ಪಾಪಗ್ರಹದಿಂದ ಅಶುಭ ಕರ್ಮಗಳನ್ನು ನೀಡುವವನು ಬಲಹೀನನಾದರೆ ದೋಷ ಅನುಭವಕ್ಕೆ ಬರುವುದು. ಪಂಚಮ ದ್ವಿತೀಯ ಮತ್ತು ದಶಮ ಮೂರರಲ್ಲಿಯೂ ಪಾಪಗ್ರಹಗಳಿದ್ದರೆ ಅದರಿಂದ ಉಂಟಾಗುವ ದೋಷಗಳಿಂದ ಮಾನಸಿಕ, ವಾಚಿಕ ಮತ್ತು ಕರ್ಮ ಈ ಮೂರು ಕೆಟ್ಟದ್ದು ಆಗಿರುವುದರಿಂದ ವಿಪತ್ತು ಸಂಭವಿಸುತ್ತವೆ.
ಕರ್ಮ ಸ್ಥಾನದಲ್ಲಿ ಶುಭಗ್ರಹನಿದ್ದು, ಪಂಚಮ ಮತ್ತು ದ್ವಿತೀಯದಲ್ಲಿ ಅಶುಭ ಗ್ರಹಗಳಿದ್ದರೆ ಮಾಡುವ ಕೆಲಸದಲ್ಲಿ ಮನಸ್ಸು ಇರುವುದಿಲ್ಲ. ಹಾಗೂ ಅವಾಚ್ಯ ಮಾತುಗಳನ್ನು ಆಡುವುದರಿಂದ ಪಾಪ ಫಲ ಅನುಭವಿಸಬೇಕಾಗುತ್ತದೆ. ಪಂಚಮದಲ್ಲಿ ಪಾಪಗ್ರಹರು ಇದ್ದು, ದ್ವಿತೀಯ ಮತ್ತು ದಶಮದಲ್ಲಿ ಶುಭ ಗ್ರಹರು ಇದ್ದರೆ ತಾನು ಮಾಡುವ ಕರ್ಮದಲ್ಲಿ ಶ್ರದ್ಧೆ ಇಲ್ಲದಿರುವುದರಿಂದ ಕರ್ಮವು ತಾಮಸವಾಗುತ್ತದೆ.

- ಮೂಲ್ಕಿ ಹರಿಶ್ಚಂದ್ರ ಪಿ. ಸಾಲಿಯಾನ್

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com