ಬ್ರಹ್ಮಾಂಡ ಪುರಾಣ

ಅಷ್ಟಾದಶ ಪುರಾಣಗಳಲ್ಲಿ ಬ್ರಹ್ಮಾಂಡ ಪುರಾಣ ಅತ್ಯಂತ ಮಹತ್ವವಾದ ಪುರಾಣ. ಇದರ ಕರ್ತೃ ವೇದವ್ಯಾಸರು. ಇದರಲ್ಲಿ ಈ ಬ್ರಹ್ಮಾಂಡ ನಿರ್ಮಾಣದ ...
ಬ್ರಹ್ಮಾಂಡ ಪುರಾಣ
Updated on: 

ಅಷ್ಟಾದಶ ಪುರಾಣಗಳಲ್ಲಿ ಬ್ರಹ್ಮಾಂಡ ಪುರಾಣ ಅತ್ಯಂತ ಮಹತ್ವವಾದ ಪುರಾಣ. ಇದರ ಕರ್ತೃ ವೇದವ್ಯಾಸರು. ಇದರಲ್ಲಿ ಈ ಬ್ರಹ್ಮಾಂಡ ನಿರ್ಮಾಣದ ರಹಸ್ಯ ವಿವರಿಸಲಾಗಿದೆ. ಬ್ರಹ್ಮನಿಂದ ನಿರ್ಮಾಣಗೊಂಡು ಬೃಹತ್ ಸ್ವರ್ಣಯುಕ್ತ ಅಂಡದಿಂದ ರಚಿತವಾದದ್ದು. ಈ ಪಂಚಭೂತಾತ್ಮಕ ಪ್ರಪಂಚ. ಅದುವೇ ಅನಂತವಾದ ಈ ವಿಶ್ವ. ಇದನ್ನು ನಾವು ಖಗೋಳಶಾಸ್ತ್ರದಲ್ಲಿ ಕ್ಷೀರಪಥವೆಂತಲೂ, ಪಾಶ್ಚಿಮಾತ್ಯರು ಗೆಲಾಕ್ಸಿ ಅಂತಲೂ ಕರೆದರು.  ಬ್ರಹ್ಮಾಂಡ ಪುರಾಣದಲ್ಲಿ ಅಂಡದಿಂದ ಪಿಂಡ, ಪಿಂಡದಿಂದ ಬ್ರಹ್ಮಾಂಡ ಹೇಗೆ ನಿರ್ಮಾಣವಾಯಿತು ಎಂಬ ಸಂಪೂರ್ಣ ವಿವರಣೆ ಇದೆ. ಸೃಷ್ಟಿಕರ್ತ ಬ್ರಹ್ಮನು ಈ ವಿಶ್ವವು ಒಂದು ಸುವ್ಯವಸ್ಥೆಗೆ ಒಳಪಟ್ಟು ಹೇಗೆ ಕೋಟಿ ಕೋಟಿ ಯುಗಗಳಿಂದ ನಡೆಯುತ್ತಿದೆ ಎಂಬುದನ್ನೂ, ವಿಶ್ವ ಮೂಲತತ್ವದ ದಿವ್ಯ ದರ್ಶನವನ್ನೂ ಪ್ರಕಾಶಪಡಿಸಿರುತ್ತಾನೆ.
ವಿಶ್ವದ ಸಕಲ ವ್ಯವಹಾರಗಳು ಮೂಲದಲ್ಲಿ ಬ್ರಹ್ಮ ನಿರ್ಮಿತ ಬೃಹತ್ ಬಂಗಾರದ ಅಂಡದಿಂದ ಪ್ರಾರಂಭಗೊಂಡು ಹೇಗೆ ಅಂತ್ಯವಾಗುತ್ತದೆ ಎಂಬುದರ ಉಲ್ಲೇಖವಿದೆ. ಗ್ರಹ, ನಕ್ಷತ್ರ, ಧೂಮಕೇತುಗಳ ಧಾತು, ಪರಿಭ್ರಮಣಗಳಂಥ ಸಕಲ ವಿಷಯಗಳೂ ಸವಿಸ್ತಾರವಾಗಿ ಉಲ್ಲೇಖಿತವಾಗಿದೆ. ಇದು ದೈವಘೋಷಿತವೂ, ಶ್ರುತಿಸಿದ್ಧವೂ ಆದ ವಿಚಾರವೂ ಆಗಿದೆ ಎಂಬುದು ನಮ್ಮ ಪೂರ್ವಿಕರ ನಿಲುವು. ಇದರಲ್ಲಿ ವ್ಯೂಮ ಸಂಬಂಧಿತ ಸಕಲ ವಿಚಾರಗಳು ಅಡಕವಾಗಿದೆ. ಅನಂತಕಾಲದ ವಿವರಣೆ, ಯುಗಗಳು, ಕಲ್ವ, ಮನ್ವಂತರ ಮತ್ತು ಪರ ಇವುಗಳ ವರ್ಣನೆ ಇದೆ.
ಈ ಪುರಾಣದಲ್ಲಿ ವಿಶ್ವದ ಶಾಶ್ವತ ಸತ್ಯ ಮತ್ತು ತತ್ವ ಯಾವುದು ಎಂಬುದರ ವಿವರಣೆ ಇದೆ. ನಾವು ಇಂದು ಯಾವುದನ್ನು ಭಾರತ, ಭರತ ಖಂಡ, ಭರತ ವರ್ಷ, ಜಂಬೂದ್ವೀಪವೆಂದು ಭೌಗೋಳಿಕವಾಗಿ ಗುರುತಿಸಿರುವೆವೋ ಆ ಜಂಬೂದ್ವೀಪದ ಸಂಪೂರ್ಣ ವರ್ಣನೆ, ಸಪ್ತದ್ವೀಪಗಳ ವರ್ಣನೆ, ಸಪ್ತ ಸಮುದ್ರಗಳ ವರ್ಣನೆ ಇಲ್ಲಿದೆ.
ಇದರಲ್ಲಿ ಭರತ, ಪೃಥು ಮತ್ತು ಅಗ್ನಿ ಚಕ್ರವರ್ತಿಗಳ ವಂಶಾವಳಿಯ ವರ್ಣನೆಯುಂಟು. ಇದರಲ್ಲಿ ರಾಮಾಯಣವನ್ನು, ಅಧ್ಯಾತ್ಮ ರಾಮಾಯಣವನ್ನಾಗಿ ಏಳು ಕಾಂಡಗಳಲ್ಲಿ ವಿಭಾಗಿಸಿ ಶ್ರೀರಾಮಾವತಾರದ ಉದ್ದೇಶ, ಮಾನವನಾಗಿ ಅವತರಿಸಿದ ಶ್ರೀವಿಷ್ಣು ಲೋಕೋದ್ಧಾರಕ್ಕಾಗಿ ದೈವತ್ವ ಮರೆತು ಸಾಧಾರಣ ಮಾನವನಂತೆ ಬದುಕಿ ಉನ್ನತ ಆದರ್ಶಗಳನ್ನು ಪರಿಪಾಲಿಸಿ, ಮರ್ಯಾದ ಪುರುಷೋತ್ತಮನೆನಿಸಿಕೊಂಡವರ ವರ್ಣನೆ ಇದೆ.
ಇದರಲ್ಲಿ ಶ್ರೀಕೃಷ್ಣಾವತಾರದ ದಿವ್ಯ ಸಂದೇಶ, ಮಹಾತ್ಕಾರ್ಯಗಳ ಜಾಜ್ವಲ್ಯ ವರ್ಣನೆಯ ಜತೆಗೆ ರಾಧಾಕೃಷ್ಣರ ಪ್ರೇಮಕತ್ವದ ಭಕ್ತಿ- ರಮ್ಯತೆಗಳ ಗೂಢಾರ್ಥವೇನು, ಅದರಿಂದ ದೈವತ್ವಕ್ಕೆ ಏರುವ ಸೋಪಾನ ಯಾವುದು ಎಂಬುದರ ವಿವರಣೆ ಹುದುಗಿದೆ.

- ವಿ. ಕೇಶವಮೂರ್ತಿ

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com