

ಸೂರ್ಯನ ಸುತ್ತಲೂ ಗ್ರಹಗಳು, ಗ್ರಹಗಳ ಸುತ್ತಲೂ ಉಪಗ್ರಹಗಳು ಹೊಂದಿರುವ ಚಲನಾಸಿದ್ಧಾಂತಕ್ಕೆ 'ಬಾಹ್ಯ ಶಕ್ತಿ' ಯಾವುದು? ಎಂಬುದು ಸಾರ್ವಕಾಲಿಕ ಯಕ್ಷಪ್ರಶ್ನೆ. ಯಾವುದೇ ಬಾಹ್ಯಶಕ್ತಿಯು ನಭೋಮಂಡಲದಲ್ಲಿ ಕಾಲನಿರ್ಣಯಕ್ಕೆ ಚಾಚುತಪ್ಪದೆ ಸ್ಪಂದಿಸಲೇಬೇಕು (ನ್ಯೂಟನ್ ಚಲನಸಿದ್ಧಾಂತ).
ಸೂರ್ಯನಿಂದ 1,427 ಮಿಲಿಯನ್ ಕಿ.ಮೀ. ದೂರದಲ್ಲಿ ಪೃಥ್ವಿಗಿಂತ 1,000 ಪಟ್ಟು ಅಧಿಕ ಗುರುತ್ವಾಕರ್ಷಣ ಶಕ್ತಿ ಇರುವ, ನಭೋಮಂಡಲದಲ್ಲಿಯೇ ಕಟ್ಟಕಡೆಯ ಶನಿಗ್ರಹ ಸೂರ್ಯನನ್ನು 2,945 ವರ್ಷಗಳಲ್ಲಿ ಒಂದು ಸುತ್ತು ಸುತ್ತುತ್ತದೆ. ಆದರೆ 149.6 ಮಿಲಿಯನ್ ಕಿ.ಮೀ. ದೂರದಲ್ಲಿರುವ ಪೃಥ್ವಿಯು ಕೇವಲ 365 ದಿನಗಳಲ್ಲಿ ಒಂದು ಸುತ್ತು ಸುತ್ತುತ್ತದೆ. ಬ್ರಹ್ಮಾಂಡದ ಬಾಹ್ಯ ಪ್ರಚಂಚದ ಸೃಷ್ಟಿ ಪಂಚಭೂತಗಳಾದ ಅಗ್ನಿ, ವಾಯು, ಜಲ, ಬೆಳಕು ಮತ್ತು ಗುರುತ್ವಾಕರ್ಷಣ ಶಕ್ತಿಗಳ ಅಂತರ್ ಗ್ರಹಣಗಳಿಂದಲೇ ರಚನೆಗೊಂಡಿದೆ ಎಂದು ಹೇಳಬಹುದು. ಇದರಿಂದ ಪೃಥ್ವಿಯ ಮೇಲೆ ಆತ್ಮವನ್ನು ಹೊಂದಿರುವ ಭೌತಿಕ ಕಾಯಗಳು ಪಂಚಭೂತಗಳ ಅಂತರ್ ಗ್ರಹಣಗಳಿಂದಲೇ ಸೃಷ್ಟಿಗೊಂಡಿವೆ ಎಂದು ಹೇಳಬಹುದು. ಇದುವೇ ಎರಡನೇ ಬಾಹ್ಯಶಕ್ತಿ. ಆದರೆ, ಮೂರನೇ ಬಾಹ್ಯ ಶಕ್ತಿ ಚಿದಂಬರ ರಹಸ್ಯವಾಗಿಯೇ ಉಳಿದಿದೆ. ಅದುವೇ ದೈವಶಕ್ತಿ.
ಬ್ರಹ್ಮಾಂಡದಲ್ಲಿ ಶನಿ ಜೀವಂತ ಗ್ರಹ. ಶನಿಗ್ರಹದ ಭೌತಿಕ ಗುಣಗಳಿಗೂ ಪೃಥ್ವಿಯ ಮೇಲ್ಮೈ ಆತ್ಮದ ಭೌತಿಕ ಗುಣಗಳಿಗೂ ಅವಿಭಾಜ್ಯ ಸಂಬಂಧಗಳಿರುವುದು ಸತ್ಯ. ಗ್ರಹಗಳ ಚಲನಾಸಿದ್ಧಾಂತದಲ್ಲಿ ಶನಿ ಮತ್ತು ಪೃಥ್ವಿಯ ಮಧ್ಯ ಯಾವುದಾದರೊಂದು ಗ್ರಹ ಅಡ್ಡ ಬಂದಾಗ ಅವುಗಳ ನೆರಳು ಪೃಥ್ವಿಯ ಮೇಲೆ ಬಿದ್ದಾಗ ಭೌತಿಕಕಾಯಗಳಲ್ಲಿ ದೋಷಗಳು ಸಂಭವಿಸುತ್ತವೆ. ಇಂಥ ದೋಷಗಳು ನಕ್ಷತ್ರ ಮಂಡಲದಲ್ಲಿ ಸೂರ್ಯನು ಹಾದುಹೋಗುವ ಕಾಲಮಾನವನ್ನು ಅವಲಂಬಿಸಿರುತ್ತವೆ. ಗುರುಗ್ರಹದ ನೆರಳು ಬಿದ್ದರೆ 14, 7, 5, 3 ವರ್ಷಗಳು, ಮಂಗಳನ ನೆರಳುಬಿದ್ದರೆ 3, 2, 1 ವರ್ಷಗಳು ಮತ್ತು 6 ತಿಂಗಳು ಮಾತ್ರ ಶನಿದೋಷಗಳು ಬರುತ್ತವೆ. ಶನಿದೋಷಕ್ಕೆ ಕೆಲವು ಪರಿಹಾರಗಳು (ಸೋಲಾರ್ ಟ್ರೀಟ್ಮೆಂಟ್) ಇಲ್ಲಿವೆ...
ಸೋಲಾರ್ ಮೂನ್
ಅಮಾವಾಸ್ಯೆಯಿಂದ ಪೌರ್ಣಮಿ, ಪೌರ್ಣಮಿಯಿಂದ ಅಮಾವಾಸ್ಯೆಯ ದಿನಗಳಲ್ಲಿ ಸೂರ್ಯ ಮತ್ತು ಚಂದಿರ ಹತ್ತಿರ ಹತ್ತಿರ ಬರುವ ದಿನಗಳನ್ನು ಗುರುತಿಸುವುದು (ಹಗಲು ಮಾತ್ರ). ಸೂರ್ಯ ಮತ್ತು ಚಂದಿರನು ಪೃಥ್ವಿಯ ಕಡೆ ಎರಕ ಹೊಯ್ಯುವ ನಭೋಕಿರಣಗಳ ಸಂಯೋಗದಿಂದ ಅಂತರ್ ಗ್ರಹಣಸಂಭವಿಸಿ ಪೃಥ್ವಿಯ ಭೌತಿಕ ಗುಣಗಳ ಮೇಲೆ ಪ್ರಭಾವ ಬೀರುವುದು.
10 ವರ್ಷಗಳಿಂದ ಇಂಥ ಕಾಲಮಾನದಲ್ಲಿ ಪಶು, ಪಕ್ಷಿ, ಮನುಕುಲ ಮತ್ತು ಸಸ್ಯರಾಶಿಯ ಮೇಲೆ ಆಗುತ್ತಿರುವ ನಭೋಪ್ರಭಾವಗಳನ್ನು ತಿಳಿಯಲಾಗಿದೆ. ಇಂಥ ಕಾಲಮಾನಗಳಲ್ಲಿ ಸೂರ್ಯ ಮತ್ತು ಚಂದಿರನನ್ನು ಏಕ ಕಾಲದಲ್ಲಿ ಹಲವು ನಿಮಿಷಗಳು ತದೇಕ ಚಿತ್ತದಿಂದ ದೃಷ್ಟಿಸಿ ಪ್ರಾರ್ಥಿಸಿದರೆ ಮಾನವನ ಎಲ್ಲಾ ಅಂಗಾಂಗಳಲ್ಲಿ ಸಂಚಲನ ಉಂಟಾಗುತ್ತದೆ. ದೈವಾಂಶ ಸಂಭೂತರು, ಬ್ರಹ್ಮಚರ್ಯ ಆಚರಿಸುವರು, ಬ್ರಹ್ಮ ಜ್ಞಾನಿಗಳು, ಸಂಶೋಧಕರು, ನಾವಿಕರು, ಸಾಗರ ಸಂಶೋಧಕರು, ಜಗದ್ಗುರುಗಳು ಯೋಗ ಆಚರಿಸುವವರು, ಲೇಖಕರು ಮತ್ತು ಅನ್ವೇಷಣಕಾರರು ಈ ಪ್ರಯೋಗವನ್ನು ಮಾಡಿದರೆ ಉತ್ತಮ ಪ್ರತಿಫಲ ಸಂಭವಿಸುತ್ತದೆ.
ಸೋಲಾರ್ ವಾಟರ್
ಶುದ್ಧವಾದ ತಾಮ್ರ ಮತ್ತು ಸ್ಟೀಲ್ ಪಾತ್ರೆಯಲ್ಲಿ ಶುದ್ಧವಾದ ನೀರನ್ನು ಕುದಿಸುವುದು ನಂತರ ಒಂದು ಶುದ್ಧವಾದ ತಾಮ್ರದ ಪಾತ್ರೆಯಲ್ಲಿ ಜೇನುತುಪ್ಪ ಸವರಿ ಕುದಿಯುವ ನೀರನ್ನು ಸೇರಿಸಿ, ಪೌರ್ಣಮಿಯ ಮಧ್ಯಾಹ್ನ ಬಿಸಿಲಿನಲ್ಲಿ ಸೂರ್ಯನ ಕಿರಣಗಳು ಸರಿಯಾಗಿ ಬೀಳುವಂತೆ ಇಡುವುದು. ನಂತರ ಈ ನೀರನ್ನು ಶೇಖರಿಸಿ, ಪ್ರಾತಃಕಾಲ, ಮಧ್ಯಾಹ್ನ ಮತ್ತು ಸಂಜೆ ಇದನ್ನು ಕುಡಿಯುತ್ತಾ ಬಂದರೆ ಅಧಿಕ ಜ್ಞಾಪಕಶಕ್ತಿ, ಶರೀರಿಕ ರೋಗಗಳು ದೂರ ಸರಿಯುತ್ತವೆ.
ಸೋಲಾರ್ ನಭೋ
ನಿತ್ಯ ಸೂರ್ಯ ಉದಯದ ಸಮಯದಲ್ಲಿ ನಿರ್ಮಲ ವಾತಾವರಣದಲ್ಲಿ ಮಾಡುವ ನಡಿಗೆಯಿಂದ ದೇಹದ ಎಲ್ಲಾ ಭಾಗಗಳಿಗೆ ಸೂರ್ಯನ ನಭೋಪ್ರಭಾವ ಎರಕ ಹೊಯ್ಯುವುದು, ಹಲವು ಸಲ ಸೂರ್ಯನನ್ನು ಬರೀ ಕಣ್ಣಿನಿಂದ ನೋಡುವುದು. ಅದೇ ಸಮಯದಲ್ಲಿ ಚಂದ್ರನು ಆಕಾಶದಲ್ಲಿ ಕಾಣಿಸಿಕೊಂಡರೆ ಚಂದ್ರನನ್ನು ಹಲವು ಸಲ ನೋಡಬೇಕು.
ಹೀಗೆ ಪ್ರಾಕೃತಿಕವಾಗಿಯೇ ಶನಿದೋಷವನ್ನು ನಿವಾರಿಸಿಕೊಳ್ಳಬಹುದು. ಮಾಹಿತಿಗೆ ಮೊ. 9945605618.
ಸೋಲಾರ್ ಪ್ಲೇಟ್
5ರಿಂದ 9 ದಿನಗಳ ಕಾಲ ಪ್ರಾತಃಕಾಲ 8-15 ರಿಂದ 9-45 ರವರೆಗಿನ ಕಾಲಮಾನದಲ್ಲಿ ಸಂಧ್ಯಾವಂದನೆ ಮುಗಿಸಿದ ನಂತರ ಒಂದು ಸ್ಟೀಲ್ ಅಥವಾ ಹಿತ್ತಾಳೆ ಪ್ಲೇಟ್ಗೆ ಕೊಬ್ಬರಿ ಎಣ್ಣೆ ಸವರಿ ಐದಾರು ಕ್ಯಾಂಡಲ್ಗಳನ್ನು ಬೆಳಗಿಸಬೇಕು. ನಂತರ ಅಲ್ಪ ಅರಿಶಿನ ನೀರು ಸೇರಿಸಿ, ಒಂದು ನಿಮಿಷ ಉರಿಯುವ ಮೊಂಬತ್ತಿಯ ಪ್ರಕಾಶವನ್ನು ತದೇಕ ಚಿತ್ತದಿಂದ ದೃಷ್ಟಿಸುವುದು. ನಂತರ ಹೊರಗಿನ ಸೂರ್ಯನನ್ನು ನಮಸ್ಕರಿಸಿ, ಆತನ ಸುತ್ತಲು ಕೆಂಪು ಬಣ್ಣ ಸೃಷ್ಟಿ ಆಗುವವರೆಗೂ ನೋಡಿ. ತಕ್ಷಣ ದೇವರ ಕೋಣೆಯಲ್ಲಿರುವ ದೀಪಗಳನ್ನು ನೋಡಿದಾಗ ಕಂಡರಿಯದ ಕೆಂಪು ಬಣ್ಣಕ್ಕೆ ತಿರುಗುತ್ತವೆ. ತದೇಕ ಚಿತ್ತದಿಂದ ಹಲವು ಸೆಕೆಂಡ್ಗಳ ಕಾಲ ನೋಡುವುದು. ಇದರಿಂದ ಸೂರ್ಯನ ನಭೋಪ್ರಭಾವ ನಮ್ಮ ಶರೀರದಲ್ಲಿ ಎರಕ ಹೊಯ್ಯುತ್ತದೆ. ಇದರಿಂದ ನಿವಾಸದಲ್ಲಿ ಶಾಂತಿ ವಾತಾವರಣ ದೃಷ್ಟಿದೋಷಗಳು ಮತ್ತು ಪಂಚೇಂದ್ರಿಯ ಶುದ್ಧೀಕರಣ ಸಾಧ್ಯ. 18ರಿಂದ 20 ವರ್ಷದವರು ಈ ಪ್ರಯೋಗ ಮಾಡಬಾರದು.
ಸೋಲಾರ್ ಇಕ್ವಿನಾಕ್ಸ್
ಮಾರ್ಚಿ 21, ಸೆಪ್ಟಂಬರ್ 23, ಆಗಸ್ಟ್ 29, ಮೇ 19, ಫೆಬ್ರವರಿ 14, ಜುಲೈ 21, ಡಿಸೆಂಬರ್ 24 ರಂದು ಪ್ರಾತಃಕಾಲ ಸಾಗರ, ಸಮುದ್ರ ಮತ್ತು ನದಿಸ್ನಾನಗಳನ್ನು ಮಾಡಿ ಉದಯಿಸುವ ಸೂರ್ಯನನ್ನು ಐದು ನಿಮಿಷನೋಡಿ ಪ್ರಾರ್ಥಿಸಿದರೆ, ಆಕಸ್ಮಿಕ ಅದೃಷ್ಟ, ಗೃಹ ನಿರ್ಮಾಣ, ವಾಹನ ಖರೀದಿ, ಚರಾಚರ ಆಸ್ತಿಗಳ ದ್ವಿಗುಣ, ವಿದೇಶ ವ್ಯಾಪಾರದಲ್ಲಿ ಉತ್ತಮ ಲಾಭ ಲೋಹ ಮತ್ತು ದಿನಸಿ ವ್ಯಾಪಾರಸ್ಥರಿಗೆ ಅಧಿಕ ಲಾಭ, ಸಾಂಸಾರಿಕ ಬಾಧೆಗಳಿಂದ ದೂರ, ಚಿತ್ರನಿರ್ಮಾಪಕರು, ಬಂಡವಾಳ ಹೂಡಿಕೆದಾರರು, ಭೂಮಿ ಖರೀದಿಸುವವರು, ರಾಜಕೀಯ ಪ್ರಮುಖರಿಗೆ ಉತ್ತಮ ಪ್ರತಿಫಲ ನೀಡುತ್ತದೆ.
-ವಿ. ನಾರಾಯಣ ಶೆಟ್ಟಿ ಪದ್ಮಸಾಲಿ