ಗುರು ಗಮನ

ನವಗ್ರಹಗಳು ರಾಶಿಯಿಂದ ರಾಶಿಗೆ ಬದಲಾಗುವುದರ ಮೂಲಕ ಜಗತ್ತಿನ ಮೇಲೆ...
ಗುರು ಗಮನ
Updated on: 

ಗ್ರಹಾಧೀನಂ ಜಗತ್ಸರ್ವಂ ಗ್ರಹಾಧೀನಂ ನರಾವರಃ ಕಾಲಜ್ಞಾನಂ ಗ್ರಹಾಧೀನಂ ಗ್ರಹಾಃ ಕರ್ಮಫಲಪ್ರದಾಃ॥

ಅಂದರೆ ನವಗ್ರಹಗಳು ರಾಶಿಯಿಂದ ರಾಶಿಗೆ ಬದಲಾಗುವುದರ ಮೂಲಕ ಜಗತ್ತಿನ ಮೇಲೆ ಕಾಲಕ್ಕೆ ತಕ್ಕಂತೆ ಪ್ರಭಾವ ಬೀರುತ್ತಲೇ ಇರುತ್ತವೆ. ಇದೀಗ 2013, ಮೇ 31ರ ಬೆಳಗ್ಗೆ 6.49ಕ್ಕೆ ಗುರುವು ವೃಷಭ ರಾಶಿಯಿಂದ ಮಿಥುನ ರಾಶಿಯನ್ನು ಪ್ರವೇಶ ಮಾಡುತ್ತಾನೆ. ಈ ಸಂದರ್ಭದಲ್ಲಿ ಪ್ರತಿಯೊಬ್ಬರ ರಾಶಿಯಲ್ಲೂ ಬದಲಾವಣೆ ಉಂಟಾಗುತ್ತದೆ.

ಮೇಷ
ತೃತೀಯ ಗುರುವಿನಿಂದಾಗಿ ಬಂಧುಗಳ ವಿರೋಧ, ಅಕಾರಣ ಕಲಹ, ಕಾರ್ಯನಾಶ, ಪದಭ್ರಷ್ಟತೆಯ ಭಯ, ಸ್ಥಿತಿನಾಶ, ಅನಾರೋಗ್ಯ, ಸಹೋದರರಲ್ಲಿ ಭಿನ್ನಾಭಿಪ್ರಾಯ ಹಾಗೂ ಅಶಾಂತಿ, ಕೆಲಸ ಕಾರ್ಯಗಳಲ್ಲಿ ಅಡಚಣೆ.

ವೃಷಭ
ದ್ವಿತೀಯ ಗುರು, ಇದರ ಫಲ ಹೇರಳ. ಧನಲಾಭ, ಪುತ್ರ ಸಂತಾನದ ಸಂತಸ ಹಲವರಿಗೆ. ಗೃಹದಲ್ಲಿ ವಿವಾಹಾದಿ ಮಂಗಳ ಕಾರ್ಯ ಜರುಗಲಿದೆ. ವಿದ್ಯೆಯಲ್ಲಿ ಯಶಸ್ಸು ಹಾಗೂ ಕೀರ್ತಿ, ನೂತನ ಉದ್ಯೋಗ ಲಾಭ, ಶತ್ರು ರಹಿತ, ಭಯಾ, ಸುಖ.

ಮಿಥುನ
ಜನ್ಮಸ್ಥ ಗುರುವಿನಿಂದಾಗಿ ಬುದ್ಧಿನಾಶ, ಧನನಾಶ, ಸ್ಥಾನಭ್ರಷ್ಟ, ಬಹುಜನರ ಕಲಹಕ್ಕೆ ಒಳಗಾಗುವುದು, ಸ್ಥಾನನಾಶ, ಮಹಾಭೀತಿ ಪ್ರಸಂಗಗಳು. ಧನ- ಧಾನ್ಯನಾಶ, ಆರೋಗ್ಯಕ್ಕೆ ಕುಂದು ಮತ್ತು ದುಃಖಕರ ಪ್ರಸಂಗಗಳು ಎದುರಾಗುತ್ತದೆ.

ಕಟಕ
ವ್ಯಯ ಗುರುವಿನ ಪರಿಣಾಮ ಕೈಗೊಂಡ ಕೆಲಸ ಕಾರ್ಯಗಳಲ್ಲಿ ಅಪಯಶಸ್ಸು, ಪ್ರಯಾಣದಲ್ಲಿ ಪ್ರತಿಕೂಲ ಪ್ರಸಂಗ, ದಾರಿದ್ರ್ಯ, ಧನನಷ್ಟ, ದುಃಖ, ಶತ್ರುಭಯ ಕಾಡುತ್ತದೆ. ವಿವೇಚನಾ ಹೀನತೆಯಿಂದ ನಷ್ಟ ಸಂಭವ.

ಸಿಂಹ
ಏಕಾದಶ ಲಾಭ ಸ್ಥಾನ ಗುರುವಿನಿಂದಾಗಿ ಧನಲಾಭ, ಯಶ- ಕೀರ್ತಿಲಾಭ, ಸರ್ವಕಾರ್ಯಜಯ, ಸೌಖ್ಯ, ಶತ್ರುನಾಶ, ಧನ- ಧಾನ್ಯ ಲಾಭ, ಹಲವರಿಗೆ ಪುತ್ರ ಸಂತಾನದ ಸಂತಸ, ನಿವೇಶನ, ಗೃಹ ಖರೀದಿಗೆ ಗುರುಕೃಪೆ.

ಕನ್ಯಾ
ದಶಮ ಗುರುವಿನಿಂದ ಧನ- ಧಾನ್ಯನಾಶ, ಪರಸ್ಥಳವಾಸ, ವೃಥಾ ಸಂಚಾರ, ನೃಪಚೋರಾಗ್ನಿ ಭಯ, ಬಂಧು-ಬಳಗದವರ ವಿರೋಧ ಎದುರಿಸಬೇಕಾದೀತು. ಆರ್ಥಿಕ ಸಂಕಷ್ಟಗಳು.

ತುಲಾ
ನವಮ ಭಾಗ್ಯಕ್ಕಿಂತ ಗುರುವಿನ ಸಂಪತ್ತು ಗಳಿಕೆ, ಆರ್ಥಿಕಾಭಿವೃದ್ಧಿ, ಧನ- ಧಾನ್ಯಲಾಭ, ನೂತನ ನಿವೇಶನ, ವಾಹನ ಖರೀದಿಯ ಯೋಗ, ಸುಖ ಭೋಜನ, ಅವಿವಾಹಿತರಿಗೆ ವಿವಾಹ ಯೋಗ, ಸುಖ ಮನೋಲ್ಲಾಸ.

ವೃಶ್ಚಿಕ
ಗುರುವು ಅಷ್ಟಮಕ್ಕೆ ಬರುವುದರಿಂದ ಮನಸ್ತಾಪ, ಅನಾರೋಗ್ಯ, ಭಯ, ಧನಚಿಂತೆ, ಚಿತ್ತಕ್ಕೆ ಸುಖವಿರದು, ಬಂಧನಾದಿ ಕೋರ್ಟು ಪ್ರಸಂಗಗಳಲ್ಲಿ ನಷ್ಟ. ಉದ್ಯೋಗದಲ್ಲಿ ಹಾನಿ, ದುಷ್ಟರ ಸಹವಾಸ, ಮನಸ್ಸಿಗೆ ನಾನಾ ಚಿಂತೆ.

ಧನಸ್ಸು
ಸಪ್ತಮಕ್ಕೆ ಬರುವುದರಿಂದ ಧನಲಾಭ, ಪುಷ್ಪಹಾರಾದಿಗಳಿಂದ ಸನ್ಮಾನ, ಉತ್ತಮವಾದ ಮಾತುಗಾರಿಕೆ, ಕಾರ್ಯದಲ್ಲಿ ಜಯ, ಗೃಹದಲ್ಲಿ ಶುಭ ಕಾರ್ಯಗಳು ನಡೆಯುತ್ತವೆ. ಉದ್ಯೋಗ ವ್ಯವಹಾರಗಳಲ್ಲಿ ಪ್ರಗತಿ. ಪದೋನ್ನತಿ, ಕುಟುಂಬದಲ್ಲಿ ಸೌಖ್ಯ.

ಮಕರ
ಷಷ್ಠ ಗುರುವಿನ ಫಲಸ್ವರೂಪವಾಗಿ ಗೃಹ ಸುಖಹಾನಿ, ಮನಃಶಾಂತಿ ಇಲ್ಲದಿರುವಿಕೆ, ಶತ್ರುಗಳ ಉಪಟಳ, ಸಾಲ ಮಾಡಬೇಕಾದ ಪರಿಸ್ಥಿತಿ, ಸಾಲಗಾರರ ತಗಾದೆ, ಕಾರ್ಯಗಳು ಕುಂಟುತ್ತವೆ. ಅನಾರೋಗ್ಯ, ಸ್ತ್ರೀ ಸುಖವಿಲ್ಲ.

ಕುಂಭ
ನಿಮಗೆ ಪಂಚಮಗುರು ಶುಭದಾಯಕನಾಗಿದ್ದು ಧನ- ಧಾನ್ಯ ಲಾಭ, ವಾಹನ, ವಸ್ತ್ರಾಭರಣ ಪ್ರಾಪ್ತಿ, ಮನೆಯಲ್ಲಿ ವಿವಾಹಾದಿ ಶುಭ ಕಾರ್ಯಗಳು ನಡೆಯುವಿಕೆ. ಯತ್ನ ಕಾರ್ಯಸಿದ್ಧಿ, ಮನೋತ್ಸಾಹ, ಗೃಹ, ನಿವೇಶನ ಹೊಂದುವ ಯೋಗ, ಹಲವರಿಗೆ ಉದ್ಯೋಗದಲ್ಲಿ ಭಡ್ತಿ ದೊರೆತೀತು.

ಮೀನ
ಚತುರ್ಥ ಗುರುವಿನ ಫಲವಾಗಿ, ಚಿತ್ತಚಾಂಚಲ್ಯ, ಧನವ್ಯಯ, ಶತ್ರುಜನದಿಂದ ತೊಂದರೆ, ವ್ಯಾಪಾರ ವ್ಯವಹಾರಗಳಲ್ಲಿ ಸಾಧಾರಣ ಲಾಭ, ಉದ್ಯೋಗಿಗಳಿಗೆ ಮೇಲಧಿಕಾರಿಗಳ ಕಿರುಕುಳ, ವೃಥಾ ಸಂಚಾರಗಳು, ಕುಟುಂಬದಲ್ಲಿ ಅಹಿತಕರ ಘಟನೆಗಳು.

ಮೇಷ, ಕಟಕ, ಕನ್ಯಾ, ವೃಶ್ಚಿಕ, ಮಕರ ಹಾಗೂ ಮೀನ ರಾಶಿಯವರು ಗುರುಗ್ರಹದ ಪ್ರೀತ್ಯರ್ಥ ಕಡಲೆ, ಹಳದಿ ವಸ್ತ್ರದಾನ, ಗುರುವಾರ ಉಪವಾಸ ಮಾಡಬೇಕು. ಗುರುಚರಿತ್ರೆ ಪಾರಾಯಣ ಮಾಡಬೇಕು.
ಓಂ ಗ್ರಾಂ ಗ್ರೀಂ ಬ್ರೌಂ ಸಹ ಗುರವೇ ನಮಃ॥ ಎಂಬ ಗುರುಮೂಲಮಂತ್ರವನ್ನು 16, 000 ಸಂಖ್ಯೆಯಷ್ಟು ಜಪಿಸುವುದರಿಂದ ಗುರುಶಾಂತಿಯಾಗುತ್ತದೆ.

-ವಿ. ಕೇಶವಮೂರ್ತಿ ಮೈಸೂರು

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com