ಪಥ ಬದಲಿಸಿದ ರಾಹು, ಕೇತು

ಹಿಮ್ಮುಖ ಚಲನೆ ಹೊಂದಿರುವ ರಾಹು ತುಲಾರಾಶಿಯನ್ನು ಬಿಟ್ಟು ಕನ್ಯಾರಾಶಿಗೆ ಹಾಗೂ ಕೇತು ಮೇಷದಿಂದ ಮೀನ ರಾಶಿ ಪ್ರವೇಶಿಸಿವೆ. ಈ ವೇಳೆ ಪ್ರತಿ ರಾಶಿಯ ಮೇಲೂ ತಮ್ಮದೇ ಪ್ರಭಾವ ಬೀರುತ್ತವೆ...
ಪ್ರತಿಯೊಂದು ಗ್ರಹಗಳೂ ಚಲನೆ ಹೊಂದಿರುವುದರಿಂದ ಒಂದು ರಾಶಿಯನ್ನು ಬಿಟ್ಟು ಇನ್ನೊಂದು ರಾಶಿಗೆ ಪಾದ ಬೆಳೆಸುತ್ತವೆ. ಹೀಗೆ ಹೋಗುವಾಗ ಜಾತಕನ ಮೇಲೆ ತಮ್ಮದೇ ಪ್ರಭಾವ ಬೀರುತ್ತವೆ. ಪ್ರಸ್ತುತ ಹಿಮ್ಮುಖ ಚಲನೆ ಹೊಂದಿರುವ ರಾಹು ತುಲಾರಾಶಿಯನ್ನು ಬಿಟ್ಟು ಕನ್ಯಾರಾಶಿಗೆ ಹಾಗೂ ಕೇತು ಮೇಷದಿಂದ ಮೀನ ರಾಶಿ ಪ್ರವೇಶಿಸಿವೆ. ರಾಶಿಯಿಂದ ರಾಶಿಗೆ ಚಲಿಸಲು 1 ವರ್ಷ 6 ತಿಂಗಳ ಅವಧಿಯನ್ನು ಹೊಂದಿರುವ ಈ ಎರಡು ಗ್ರಹಗಳು ಈ ಸಂದರ್ಭದಲ್ಲಿ ಪ್ರತಿ ರಾಶಿಯ ಮೇಲೂ ತಮ್ಮದೇ ಪ್ರಭಾವ ಬೀರುತ್ತವೆ.
ಮೇಷ
ಆರನೇ ಮನೆಯಲ್ಲಿ ರಾಹು 12ರಲ್ಲಿ ಕೇತು ಇರುತ್ತದೆ. ರಾಹು ಕನ್ಯಾ ರಾಶಿಯಲ್ಲಿ ಬಲಿಷ್ಠನಾಗಿರುವುದರಿಂದ ಹಣಕಾಸಿನ ಅನುಕೂಲ. ಮನೆ, ಆಸ್ತಿ ಖರೀದಿ. ಮಕ್ಕಳಿಗೆ ಒಳ್ಳೆಯದಾಗುತ್ತದೆ.
ವೃಷಭ
5ರಲ್ಲಿ ರಾಹು 11ರಲ್ಲಿ ಕೇತು ಬುದ್ಧಿ ಶಕ್ತಿ, ವಿದ್ಯೆ, ಆಚಾರ ವಿಚಾರ, ಧರ್ಮದ ಹಾದಿ, ದೇವರ ದಯೆ, ಕೆಲಸ ಕಾರ್ಯಗಳಲ್ಲಿ ಜಯ. ಏಕಾದಶ ಕೇತುವಿನಿಂದ ಎಲ್ಲ ರೀತಿಯಿಂದ ಅನುಕೂಲ.
ಮಿಥುನ
4ರಲ್ಲಿ ರಾಹು 10ರಲ್ಲಿ ಕೇತು ಇರುತ್ತದೆ. ಇವರು ವ್ಯಾಪಾರ ವ್ಯವಹಾರದಲ್ಲಿ ಬಹಳ ಜಾಗ್ರತೆಯಿಂದ ಇರಬೇಕು. ಬುದ್ಧಿಯಲ್ಲಿ ಚಂಚಲ ಇರುತ್ತದೆ. ಜನರಿಂದ ಅಪವಾದಗಳು ಬರುತ್ತವೆ. ಕೇತು ಇವರನ್ನು ಪಾರಮಾರ್ಥಿಕ ಜ್ಞಾನವನ್ನು ಸಂಪಾದಿಸುವ ದಾರಿಗೆ ಕೊಂಡುಹೋಗುತ್ತದೆ.
ಕರ್ಕಾಟಕ
ಮೂರರಲ್ಲಿ ರಾಹು 9ರಲ್ಲಿ ಕೇತು ಬರುತ್ತದೆ. ಇವರಿಗೆ ವಿವಿಧ ಮೂಲಗಳಿಂದ ಲಾಭವಿದೆ. ಧೈರ್ಯ, ವಿದೇಶಕ್ಕೆ ಹೋಗುವ ಸಾಧ್ಯತೆ ಇದೆ. ನವಮದ ಕೇತು ಜಾತಕನಿಗೆ ಉತ್ತಮ ಯೋಗ ಕೊಡುತ್ತಾನೆ.
ಸಿಂಹ
2ನೇ ಮನೆಯಲ್ಲಿ ರಾಹು 8ನೇ ಮನೆಯಲ್ಲಿ ಕೇತು ಬರುತ್ತದೆ. ಇವರಿಗೆ ಅನುಕೂಲಕ್ಕಿಂತ ಅನನುಕೂಲವೇ ಹೆಚ್ಚು. ಸಂಪಾದನೆ ಇದ್ದರೂ ಹಣ ಉಳಿಯುವುದಿಲ್ಲ. ಹಲವು ಸಮಸ್ಯೆ ಎದುರಾಗುತ್ತದೆ. 8ನೇ ಕೇತುವಿನಿಂದ ಕೌಟುಂಬಿಕ ಸೇರಿದಂತೆ ಹಲವು ತೊಂದರೆ ಇರುತ್ತದೆ.
ಕನ್ಯಾ
1ನೇ ಮನೆಯಲ್ಲಿ ರಾಹು 7ನೇ ಮನೆಯಲ್ಲಿ ಕೇತು ಬರುತ್ತದೆ. 1ನೇ ರಾಹುವಿನಿಂದ ಕಾರ್ಯಗಳಲ್ಲಿ ಅಡೆತಡೆಯಾಗುತ್ತದೆ. ಅನಾರೋಗ್ಯದಿಂದ ತೊಂದರೆ, ವೈರಿಗಳಿಂದ ತೊಂದರೆ ಬರುತ್ತದೆ. ವ್ಯಾಪಾರ ವ್ಯವಹಾರಲ್ಲಿ ನಷ್ಟ.
ತುಲಾ
12ನೇ ಮನೆಯಲ್ಲಿ ಕಾಹು, 6ನೇ ಮನೆಯಲ್ಲಿ ಕೇತು. ಮಾನಸಿಕ ನೆಮ್ಮದಿ ಇರುವುದಿಲ್ಲ. ಕೆಲಸದಲ್ಲಿ ವಾದ, ವಿವಾದ. ಸಾಲದ ತೊಂದರೆ. 6ನೇ ಕೇತುವು ಜನರೊಂದಿಗೆ ಸ್ನೇಹದಲ್ಲಿರುವಂತೆ ಮಾಡುತ್ತದೆ. ಜನರ ಸಹಾಯ ಸಿಗುತ್ತದೆ. ಆದರೆ ಸಹಾಯ ಮಾಡಿದವರನ್ನು ಮರೆಯುತ್ತಾರೆ.
ವೃಶ್ಚಿಕ
11ನೇ ಮನೆಯಲ್ಲಿ ರಾಹು, 5ನೇ ಮನೆಯಲ್ಲಿ ಕೇತು ಬರುತ್ತದೆ. ಇವರಲ್ಲಿ ವಿಶೇಷ ಪ್ರತಿಭೆ ಇದೆ. ಜನರಿಗೆ ಸಹಾಯ ಮಾಡುತ್ತಾರೆ. ಪ್ರಯತ್ನಿಸಿದ ಕೆಲಸದಲ್ಲಿ ಜಯ. ವೈರಿಗಳ ನಾಶ. ಮನೆ ವಾಹನ ಖರೀದಿ.
ಧನು
10ನೇ ಮನೆಯಲ್ಲಿ ರಾಹು, 4ರಲ್ಲಿ ಕೇತು ಬರುತ್ತದೆ. ದಶಮದಲ್ಲಿ ರಾಹು ಬಂದಾಗ ಅಧಿಕಾರ ಯೋಗ ಸಮಾಜದಲ್ಲಿ ಹೆಸರು ವಾಸಿಯಾಗುತ್ತಾರೆ. ರಾಜಕೀಯದಲ್ಲಿ ಸ್ಥಾನಮಾನ. 4ನೇ ಕೇತುವಿನಿಂದ ಕಷ್ಟಗಳು ಬಂದರೂ ಎದುರಿಸುತ್ತಾರೆ. ರಾಜಕೀಯದಲ್ಲಿ ಹೆಸರುವಾಸಿ.
ಮಕರ
9ನೇ ಮನೆಯಲ್ಲಿ ರಾಹು, 3ನೇ ಕೇತು ಬರುತ್ತದೆ. 9ನೇ ರಾಹುವಿನಿಂದ ಸುಖಭೋಗ ಭಾಗ್ಯ. ಕೆಲಸ ಕಾರ್ಯದಲ್ಲಿ ಜಯ. ಬೇಡದ ಕೆಲಸಕ್ಕೆ ಕೈ ಹಾಕುವುದು ಇದೆ. 3ನೇ ಕೇತುವಿನಿಂದ ಸ್ವಂತ ಜನರಿಂದ ವಿರೋಧ. ಧೈರ್ಯ ಹೆಚ್ಚು.
ಕುಂಭ
8ನೇ ಮನೆಯಲ್ಲಿ ರಾಹು, 2ನೇ ಮನೆಯಲ್ಲಿ ಕೇತು. ಕುಟುಂಬದಲ್ಲಿ ಸುಖ ಕಡಿಮೆ. ಸಮಸ್ಯೆ ಎದುರಾಗುತ್ತದೆ. ಹಣಕಾಸಿನ ತೊಂದರೆ. ಬಂಧುಬಾಂಧವರಿಂದ ತೊಂದರೆ. 2ನೇ ಕೇತುವಿನಿಂದ ಕುಟುಂಬದಲ್ಲಿ ಘರ್ಷಣೆ.
ಮೀನ
7ನೇ ಮನೆಯಲ್ಲಿ ರಾಹು, 1ರಲ್ಲಿ ಕೇತು ಇರುತ್ತದೆ. ಗಂಡ ಹೆಂಡತಿಯರಲ್ಲಿ ವೈಮನಸ್ಸು. ಸ್ತ್ರೀಯರಿಂದ ತೊಂದರೆ, ಅಪವಾದ. ಪ್ರಯಾಣದಲ್ಲಿ ತೊಂದರೆ. ಸಾಲಗಾರರಿಂದ ತೊಂದರೆ.
-ಹರಿಶ್ಚಂದ್ರ ಪಿ. ಸಾಲಿಯಾನ್
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


