

ಮಹೀಂದ್ರಾ ಮತ್ತು ಮಹೀಂದ್ರಾ ಕಂಪನಿಯು 2014ನೇ ವರ್ಷದ 2ನೇ ತ್ರೈಮಾಸಿಕದ ಮಾರುಕಟ್ಟೆಯಲ್ಲಿ ಶೇ.21.17 ರಷ್ಟು ಕುಸಿತ ಕಂಡಿದೆ.
ಎಕ್ಸ್ಯುವಿ ಹಾಗೂ ವೆರಿಟೊ ಯಶಸ್ಸಿನ ಕಾರಣದಿಂದ ಕಳೆದ ವರ್ಷದ ಇದೇ ತ್ರೈಮಾಸಿಕದಲ್ಲಿ ಕಂಪನಿಯು ಭಾರಿ ಲಾಭಗಳಿಸಿತ್ತು. ಆದರೆ ಎಕ್ಸ್ಯುವಿಗೆ ಡಸ್ಟರ್ ಹಾಗೂ ಇಕೋ ಸ್ಪೋರ್ಟ್ನಿಂದ ಪೈಪೋಟಿ ಬಂದ ಹಿನ್ನೆಲೆಯಲ್ಲಿ ಕಂಪನಿಯ ಮಾರಾಟದಲ್ಲಿ ಕುಸಿತಕಂಡಿದೆ. ಆದರೆ ಸಂಸ್ಥೆಯು ಈ ಹಿನ್ನಡೆಗೆ ಡಾಲರ್ ಎದುರು ರುಪಾಯಿ ಕುಸಿತ ಕಾರಣ ಎಂಬ ನೆಪ ಹೇಳಿದೆ.
ಕಳೆದವರ್ಷ ಇದೇ ತ್ರೈಮಾಸಿಕದಲ್ಲಿ 47,059 ವಾಹನಗಳು ಖರೀದಿಯಾಗಿದ್ದರೆ, ಈ ವರ್ಷ ಅದು 37,096ಕ್ಕೆ ಕುಸಿದಿದೆ. ಇನ್ನು ರಫ್ತು ಮಾರಾಟದಲ್ಲೂ ಶೇ.39ರಷ್ಟು ಕುಸಿತಕಂಡಿದೆ.
--