ವಾಹನ

ಚಾರ್ಮೋಡಿ!

ಚಾರ್ಮೋಡಿ!
Published On :

ಚಾರ್ಮಾಡಿ ಘಾಟಿಯ ಒಡಲಲ್ಲಿ ಹಲವು ಜಲಪಾತಗಳು ಧುಮ್ಮಿಕ್ಕುತ್ತವೆ. ಮಳೆಗಾಲದಲ್ಲಿ ಮಧ್ಯಾಹ್ನ 12 ಗಂಟೆಯಾದರೂ ಇಲ್ಲಿ ಮಂಜು ಕರಗುವುದಿಲ್ಲ. ಇಲ್ಲಿನ ಕಡಿದಾದ ರಸ್ತೆಗಳಿಗೆ ತಿಲಕವಿಟ್ಟಂತೆ ಈ ಬೆಳ್ನೊರೆಯ ಜಲಪಾತಗಳು ಕಂಗೊಳಿಸುತ್ತವೆ. ಇವುಗಳದ್ದು ಬಾನೆತ್ತರದ ನೋಟ. ದಟ್ಟ ಕಾನನದ ನಡುವೆ ಜುಳು ಜುಳು ನಾದದ ಸೊಬಗು. ಹಕ್ಕಿಗಳ ಕಲರವ ಬೆರೆತ ನೀರಿನ ಭೋರ್ಗರೆತ.
ಚಾರ್ಮಾಡಿ ಎಂಬ ಊರು ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನಲ್ಲಿದೆ. ಚಿಕ್ಕಮಗಳೂರು- ದಕ್ಷಿಣ ಕನ್ನಡ ಜಿಲ್ಲೆಗೆ ಸಂಪರ್ಕಿಸುವ ರಸ್ತೆ ವ್ಯಾಪ್ತಿಯ ಅತ್ಯದ್ಭುತ ಘಾಟಿ ಇದು. ಚಾರ್ಮಾಡಿಯು ಕೊಟ್ಟಿಗೆಹಾರ ಮತ್ತು ಬಣಕಲ್ ಊರುಗಳಿಗೆ ಹತ್ತಿರವಿದೆ. ಉಜಿರೆಯಿಂದ 11 ಕಿ.ಮೀ.ನಿಂದ ಆರಂಭವಾಗಿ ಮೂಡಿಗೆರಿಯಿಂದ 14 ಕಿ.ಮೀ. ದೂರದ ಕೊಟ್ಟಿಗೆಹಾರದವರೆಗೆ ಚಾರ್ಮಾಡಿ ಘಾಟ್‌ನ ಅಂದ ಹರಡಿದೆ.
ನೀವು ಈ ಘಾಟಿಗೆ ಭೇಟಿ ಕೊಟ್ಟರೆ ಉಜಿರೆಯಿಂದ 9 ಕಿ.ಮೀ. ದೂರದಲ್ಲಿ ಧರ್ಮಸ್ಥಳ ಕ್ಷೇತ್ರಕ್ಕೂ ತೆರಳಬಹುದು. ಕೊಟ್ಟಿಗೆಹಾರ- ಕಳಸ ಮಾರ್ಗದಲ್ಲಿ ಸಾಗುವಾಗ ಸುಂಕಸಾಲೆಯಿಂದ 10 ಕಿ.ಮೀ. ಅಂತರದಲ್ಲಿ ಬೆಟ್ಟದ ಮೇಲಿನ ಬಳ್ಳರಾಯನದುರ್ಗ ಕೋಟೆಯನ್ನು ವೀಕ್ಷಿಸಬಹುದು.

- ಚಿತ್ರ-ಲೇಖನ: ಎಸ್.ಎಲ್. ರಾಘವೇಂದ್ರ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.