ಕೋವಲಂ ಕಹಾನಿ

ಕೋವಲಂ ಕಹಾನಿ
Updated on: 

ವಿಶಾಲವಾದ ಸಮುದ್ರದ ಜಲರಾಶಿ. ಎಲ್ಲ ದಿಕ್ಕಿನಿಂದಲೂ ಮನಸ್ಸಿಗೆ ಮುದ. ಸಂಜೆಯ ಸುಂದರ ಸೂರ್ಯಾಸ್ತದ ಸೊಬಗು. ಇವನ್ನೆಲ್ಲ ಕಣ್ತುಂಬಿಕೊಳ್ಳಬೇಕೇ? ಕೋವಲಮ್‌ಗೆ ಬನ್ನಿ.
ಇಲ್ಲಿನ ರೆಸಾರ್ಟ್‌ಗಳು ಬೋಟಿಂಗ್, ಸ್ವಿಮ್ಮಿಂಗ್, ಬಿಸಿಲ ಸ್ನಾನ ಮಾತ್ರವಲ್ಲದೆ ಆಯುರ್ವೇದ, ಯೋಗ ಚಿಕಿತ್ಸೆಗಳಿಗೂ ಖ್ಯಾತಿ ಹೊಂದಿವೆ. ಪ್ರವಾಸಿಗರು ಇದರ ಪ್ರಯೋಜನ ಪಡೆದು ಖುಷಿಯಿಂದ ಹಿಂದಿರುಗಲು ವಿಫುಲ ಅವಕಾಶವಿದೆ. ಸಂಜೆ ಆಗುತ್ತಿದ್ದಂತೆಯೇ ಬೀಚ್‌ನಲ್ಲಿ ಪ್ರವಾಸಿಗರ ಸಂಖ್ಯೆ ಹೆಚ್ಚುತ್ತದೆ. ವಿದೇಶಿ ಪ್ರವಾಸಿಗರಿಗರಂತೂ ಇಲ್ಲೇ ಠಿಕಾಣಿ ಹೂಡಿರುತ್ತಾರೆ!
ಅರ್ಧ ವೃತ್ತಾಕಾರದಲ್ಲಿರುವ ಈ ಈವ್ಸ್ ತೀರವು ಸಂಜೆಯ ನಿಸರ್ಗ ಸಹಜ ಚೆಲುವಿಗೆ ಖ್ಯಾತಿಗೊಂಡಿದೆ. ಇಲ್ಲಿನ ಸೂರ್ಯಾಸ್ತದ ಸೌಂದರ್ಯ ವರ್ಣಿಸಲಸದಳ. ತಾಳೆ ಹಾಗೂ ತೆಂಗಿನ ಮರಗಳ ಸಾಲು ಪ್ರಾಕೃತಿಕ ಸೊಬಗನ್ನು ಹೆಚ್ಚಿಸಿವೆ. ಲೈಟ್‌ಹೌಸ್ ಇದ್ದು, ನೌಕೆಗಳಿಗೆ ಪ್ರಾಕೃತಿಕ ವಿಕೋಪಗಳ ಅಪಾಯದ ಮುನ್ಸೂಚನೆ ನೀಡುವ ಕೇಂದ್ರವನ್ನು ಹೊಂದಿದೆ.
ಕೇರಳದ ರಾಜಧಾನಿಯಾದ ತಿರುವನಂತಪುರಂನ ದಕ್ಷಿಣದಲ್ಲಿರುವ ಕೋವಲಮ್ ಪಟ್ಟಣದ ಬಳಿಯಿರುವ ಈ ಕಡಲ ಕಿನಾರೆ ಪ್ರವಾಸಿಗರ ಸ್ವರ್ಗ. ಊಟ, ವಸತಿ ವ್ಯವಸ್ಥೆ ಚೆನ್ನಾಗಿದ್ದು, ಶಾಪಿಂಗ್‌ಗೆ ಕೂಡ ಒಳ್ಳೆಯ ತಾಣ.
-ಎನ್. ಸ್ವಾತಿ ಉಡುಪಿ

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com