

ಇನ್ನಾರು ವರ್ಷಗಳಲ್ಲಿ ಮೊಬೈಲ್ ಇಂಟರ್ನೆಟ್ ಬಳಕೆ 4 ಪಟ್ಟು ಹೆಚ್ಚಾಗಲಿದೆಂತೆ. ಹಾಗಂತ ಎರಿಕ್‌ಸನ್ ಸಂಸ್ಥೆ ಭವಿಷ್ಯ ನುಡಿದಿದೆ. 2013ರಲ್ಲಿ 795 ಮಿಲಿಯನ್ ಬಳಕೆದಾರರಿದ್ದು, ತಲಾ 150 ಎಂಬಿ ಇಂಟರ್ನೆಟ್ ಬಳಸುತ್ತಿದ್ದಾರೆ. ಮೊಬೈಲ್ ಬಳಕೆದಾರರ ಸಂಖ್ಯೆ 2020ರಲ್ಲಿ 1145 ಮಿಲಿಯನ್‌ಗೆ ಏರುವ ನಿರೀಕ್ಷೆಯಿದ್ದು, ತಲಾ ಇಂಟರ್ನೆಟ್ ಬಳಕೆ 650 ಎಂಬಿಗೆ ಏರಲಿದೆ ಎಂದು ಅಂದಾಜಿಸಲಾಗಿದೆ. ಇದೇ ಸಮಯದಲ್ಲಿ ಸ್ಮಾರ್ಟ್‌ಫೋನ್‌ಗಳ ಬಳಕೆದಾರರ ಸಂಖ್ಯೆ ಶೇ.45ರಷ್ಟು ಏರಿಕೆಯಾಗಲಿದೆ ಎಂದೂ ಸಂಸ್ಥೆ ಅಂದಾಜಿಸಿದೆ.
ಇದೆಲ್ಲದರ ಪರಿಣಾಮವಾಗಿ 3ಜಿ ಸಿಮ್ ಮಾರಾಟದಲ್ಲೂ ಭಾರಿ ಏರಿಕೆ ಆಗಲಿದೆ. ಈಗ 75 ಮಿಲಿಯನ್ ಇರುವ 3ಜಿ ಸಿಮ್‌ಗಳ ಸಂಖ್ಯೆ 2020ರ ಹೊತ್ತಿಗೆ 400 ಮಿಲಿಯನ್ ಆಗಲಿದೆ. 4ಜಿ ಸಿಮ್‌ಗಳ ಸಂಖ್ಯೆ 100 ಮಿಲಿಯನ್ ಆಗಿರಲಿದೆ.