ಜೆಸ್ಟ್ ಈಗ ಬಂತು!

ಜೆಸ್ಟ್ ಈಗ ಬಂತು!
Updated on: 

ಕಾಂಪ್ಯಾಕ್ಟ್ ವಾಹನಗಳ ಭರಾಟೆ ಹೆಚ್ಚುತ್ತಿದೆ. ಹಿಂದಿನ ಆರ್ಥಿಕ ವರ್ಷವನ್ನು ಕಾಂಪ್ಯಾಕ್ಟ್ ಎಸ್‌ಯುವಿಗಳು ಆಳಿದವು. ಈಗ ಕಾಂಪ್ಯಾಕ್ಟ್ ಸೆಡಾನ್‌ಗಳು ಬರುತ್ತಿವೆ. ಅಮೇಝ್, ಡಿಝೈರ್, ಪೋರ್ಡ್, ಎಕ್ಸೆಂಟ್ ಬಳಿಕ ಈಗ ಟಾಟಾ ಮೋಟಾರ್ಸ್ ಜೆಸ್ಟ್ ಎಂಬ ಕಾಂಪ್ಯಾಕ್ಟ್ ಸೆಡಾನ್ ಅನ್ನು ಮಾರುಕಟ್ಟೆಗೆ ಬಿಟ್ಟಿದೆ.

ಕಾರೊಳಗೆ ಕೂತರೆ ಯಾವುದೋ ಐಷರಾಮಿ ಕಾರಿನಲ್ಲಿ ಕುಳಿತಂತೆ ಎನಿಸುತ್ತದೆ. ಹೊರಗಿನಿಂದ ನೋಡಿದಾಗ ವಿನ್ಯಾಸದಲ್ಲಿ ಖುಷಿಕೊಡುವಂತಹ ಬದಲಾವಣೆ ಕಾಣಿಸುತ್ತದೆ. ಮೊದಲ ಬಾರಿಗೆ ಟಾಟಾ ಸಂಸ್ಥೆ ಕೂಡ ಇಂತಹದೊಂದು ವಿನ್ಯಾಸ ಅಥವಾ ಐಷಾರಾಮಿ ಕೊಡಲು ಸಾಧ್ಯವಿದೆ ಎನ್ನುವುದನ್ನು ತೋರಿಸಿಕೊಟ್ಟಿದೆ. ಜತೆಗೆ ಟಾಟಾ ಸಂಸ್ಥೆಯು ಜಾಗ್ವಾರ್ ಹಾಗೂ ಲ್ಯಾಂಡ್ ರೋವರ್ ಜತೆಗೆ ನಂಟು ಹೊಂದಿರುವುದು ಖಾತ್ರಿಯಾಗುತ್ತದೆ.

ಹೊಸ ಬಗೆಯ, ಬಹಳ ಸ್ಟೈಲಿಷ್ ಆಗಿರುವ, 4 ಮೀಟರ್‌ಗಿಂತಲೂ ಕಡಿಮೆ ಉದ್ದ ಇರುವ ಕಾಂಪ್ಯಾಕ್ಟ್ ಸೆಡಾನ್ ಕಾರು ಜೆಸ್ಟ್ ಅನ್ನು ಕರ್ನಾಟಕದ ಮಾರುಕಟ್ಟೆಗೆ ಬಿಡುಗಡೆ ಮಾಡಿದೆ. ರಿವೊಟ್ರನ್ 1.2ಟಿ ಎಂಜಿನ್ ಒಳಗೊಂಡಿರುವ ಜೆಸ್ಟ್ ಕಾರಿನ ಪೆಟ್ರೋಲ್ ಮಾದರಿಗೆ ಬೆಂಗಳೂರಿನಲ್ಲಿ ಆರಂಭಿಕ ಬೆಲೆ (ಎಕ್ಸ್‌ಷೋರೊಂ) 4.69 ಲಕ್ಷ ರು. ಹಾಗೂ ಡೀಸೆಲ್ ಮಾದರಿಗೆ 5.73 ಲಕ್ಷ ರು.ಆಗಿದೆ. ಮುಂಗಡ 21,000ರು. ಮೊತ್ತ ಆನ್‌ನೈಲ್ ಅಥವಾ ಟಾಟಾ ಮೋಟಾರ್ಸ್ ಶೋರೂಮ್‌ಗಳಲ್ಲಿ ಪಾವತಿಸುವ ಮೂಲಕವೂ ಜೆಸ್ಟ್ ಕಾರು ಖರೀದಿಸಬಹುದು. ಬಹು ನಿರೀಕ್ಷೆಯ ಜೆಸ್ಟ್ ಕಾರನ್ನು ಟಾಟಾ ಮೋಟಾರ್ಸ್ ಆಗಸ್ಟ್ 12ರಂದೇ ದೇಶದ ವಿವಿಧೆಡೆ ಪರಿಚಯಿಸಿದ್ದು, ಮಾರಾಟವನ್ನೂ ಅದಾಗಲೇ ಆರಂಭಿಸಿದೆ. ಇದರೊಟ್ಟಿಗೆ ದೇಶಾದ್ಯಂತ ನೆಲೆಗೊಂಡಿರುವ 470 ಟಾಟಾ ಮಾರಾಟ ಕೇಂದ್ರಗಳಲ್ಲಿ ಜೆಸ್ಟ್ ಲಭ್ಯವಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com