

ಬೆಂಗಳೂರು: ರಾಜ್ಯದ ಎಲ್ಲ ವರ್ಗಗಳ ಸರ್ವತೋಮುಖ ಅಭಿವೃದ್ಧಿಗಾಗಿ ಸರ್ವರನ್ನೂ ಒಳಗೊಳ್ಳುವ ಅಭಿವೃದ್ಧಿಪರ ಬಜೆಟ್ ಮಂಡನೆ ನಮ್ಮ ಉದ್ದೇಶ. ಈ ನಮ್ಮ ಬಜೆಟ್ ನವ ಕರ್ನಾಟಕ ನಿರ್ಮಾಣದ ಮುನ್ನುಡಿಯಾಗಲಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.
ವಿಧಾನಸಭೆಯಲ್ಲಿಂದು ಅಂಬೇಡ್ಕರ್, ಬಸವಣ್ಣ ತತ್ವಗಳ ಸ್ಮರಿಸಿ ಬಜೆಟ್ ಮಂಡನೆ ಆರಂಭಿಸಿದ ಮುಖ್ಯಮಂತ್ರಿ ರಾಜಕೀಯ ಕ್ಷೇತ್ರ ನನ್ನ ಅನುಭವ ಮಂಟಪ ಎಂದರು. ದೇಶದಲ್ಲಿಯೇ ಅತಿ ಹೆಚ್ಚು ಬಂಡವಾಳ ಹೂಡಿಕೆ ಆಕರ್ಷಣೆ ಮಾಡಿರುವ ರಾಜ್ಯ ನಮ್ಮದು ಎಂದರು.
ರೈತರ ಸಾಲಮನ್ನಾ ಹಾಗೂ ಸರ್ಕಾರಿ ನೌಕರರ ವೇತನ ಪರಿಷ್ಕರಣೆಯಿಂದಾಗಲೂ ರಾಜ್ಯದ ಹಣಕಾಸು ಪರಿಸ್ಥಿತಿ ಉತ್ತಮ ಪರಿಸ್ಥಿತಿ ಇದೆ. ರಾಜ್ಯದ ಆಂತರಿಕ ಉತ್ಪನ್ನ ಶೇಕಡಾ 8.5 ರಷ್ಟು ಬೆಳವಣಿಗೆ ಹೊಂದಿದೆ ಎಂದರು.