ನವದೆಹಲಿ: ಇನ್ನು ಮುಂದೆ ಅನಿವಾಸಿ ಭಾರತೀಯರು ಭಾರತೀಯ ಪಾಸ್ ಪೋರ್ಟ್ ನಲ್ಲಿ ಭಾರತಕ್ಕೆ ಬಂದು ಆಧಾರ್ ಕಾರ್ಡು ಪಡೆಯಲು 180 ದಿನಗಳ ಕಾಯಬೇಕಾಗಿಲ್ಲ.
ಭಾರತದಲ್ಲಿ ಈಗಿರುವ ಕಾನೂನು ಪ್ರಕಾರ ಎನ್ಆರ್ ಐಗಳಿಗೆ ಭಾರತೀಯ ಪಾಸ್ ಪೋರ್ಟ್ ಮೂಲಕ ಆಧಾರ್ ಕಾರ್ಡು ಪಡೆಯಲು 180 ದಿನ ಕಾಯಬೇಕು. ಆದರೆ ಇನ್ನು ಮುಂದೆ ಕಾಯಬೇಕಾಗಿಲ್ಲ ಎಂದು ಸಚಿವೆ ನಿರ್ಮಲಾ ಸೀತಾರಾಮನ್ ಬಜೆಟ್ ಭಾಷಣದಲ್ಲಿ ಹೇಳಿದರು.
ಕಳೆದ ಮೇ 31ರವರೆಗೆ ಭಾರತೀಯ ವಿಶಿಷ್ಟ ಗುರುತು ಪ್ರಾಧಿಕಾರ ಒಟ್ಟು 123.82 ಕೋಟಿ ಜನತೆಗೆ ಆಧಾರ್ ಕಾರ್ಡು ವಿತರಿಸಿದೆ.
ಆಫ್ರಿಕಾ ಖಂಡದ ಹಲವು ಸ್ಥಳಗಳಲ್ಲಿ 18 ಹೊಸ ರಾಯಭಾರಿ ಕಚೇರಿಗಳನ್ನು ತೆರೆಯಲಾಗುವುದು ಎಂದು ಸಹ ಘೋಷಿಸಿದರು.