

ಬೆಂಗಳೂರು: ದೇಶದಾದ್ಯಂತ ಹಲವಾರು ಆಸ್ಪತ್ರೆಗಳು ಮತ್ತು ನರ್ಸಿಂಗ್ ಕ್ಲಿನಿಕ್ಗಳಲ್ಲಿ ಅಸುರಕ್ಷಿತ ಇಂಜೆಕ್ಷನ್ಗಳನ್ನು ವ್ಯಾಪಕವಾಗಿ ಉಪಯೋಗಿಸುತ್ತಿರುವ ಬಗ್ಗೆ ವಿಶ್ವ ಹೆಪಾಟೈಟಿಸ್ ದಿನಾಚರಣೆ ಸಂದರ್ಭದಲ್ಲಿ ಆರೋಗ್ಯ ತಜ್ಞರು ಎಚ್ಚರಿಕೆ ನೀಡಿದ್ದಾರೆ. ಹೆಪಾಟೈಟಿಸ್ ಮತ್ತೆ ತಲೆ ಎತ್ತಿರುವುದು ದೊಡ್ಡ ಅನಾಹುತಕ್ಕೆ ನಾಂದಿಯಾಗಿದ್ದು, ಪ್ರತಿವರ್ಷ ಇದರಿಂದಾಗಿ ವಿಶ್ವದಲ್ಲಿ 240,000 ಜನರು ಮರಣ ಹೊಂದುತ್ತಿದ್ದಾರೆ. ಹಾಗೂ ಮಿಲಿಯನ್ಗಿಂತಲೂ ಹೆಚ್ಚು ಜನರಿಗೆ ವೈರಸ್ ತಗುಲಿದೆ ಎಂದು ಡಬ್ಲ್ಯೂಎಚ್ಓ ಅಂಕಿ-ಅಂಶಗಳ ಪ್ರಕಾರ ತಿಳಿದು ಬಂದಿದೆ. ಬೆಂಗಳೂರಿನ ವೈದೇಹಿ ಮೆಡಿಕಲ್ ಕಾಲೇಜಿನ ಗ್ಯಾಸ್ಟ್ರೋಎಂಟೆರೋಲೋಜಿ ಪ್ರೊಪೆಸರ್ ಡಾ.ಪ್ರವೀಣ್ಕುಮಾರ್ ಮಾತನಾಡಿ, 'ಅಸುರಕ್ಷಿತ ಇಂಜೆಕ್ಷನ್ ಅಭ್ಯಾಸಗಳು, ಅಸುರಕ್ಷಿತ ಲೈಂಗಿಕ ಚಟುವಟಿಕೆಗಳು, ಬೇಡವಾದ ರಕ್ತ ವರ್ಗಾವಣೆಗಳನ್ನು ನಿಲ್ಲಿಸುವುದು ಮತ್ತು ಶುದ್ದೀಕರಿಸದ ವೈದ್ಯಕೀಯ ಉಪಕರಣಗಳ ಬಳಕೆ ನಿಲ್ಲಿಸುವ ಮೂಲಕ ಹೆಪಾಟೈಟಿಸ್ ಬಿ ಮತ್ತು ಸಿ, ಎಚ್ಐವಿಗಿಂತಲೂ ಭಯಾನಕವಾಗಿರುವ ರೋಗಗಳನ್ನು ತಡೆಗಟ್ಟಲು ಸಮಗ್ರವಾಗಿ ತಿಳಿಸಲಾಗಿದೆ' ಎಂದರು.
ಸಫೀನಾ ಪ್ಲಾಜಾದಲ್ಲಿ ಕಲಾಸಮ್ಮೇಳನ
ಅಭಿಮಾನ್ ಕ್ರಾಫ್ಟ್ ಸೊಸೈಟಿ ಆಶ್ರಯದಲ್ಲಿ ನಗರದ ಸಫೀನಾ ಪ್ಲಾಜಾದಲ್ಲಿ ಕಲಾಸಮ್ಮೇಳನವನ್ನು ಆಯೋಜಿಸಲಾಗಿದ್ದು, ಆ.11ರವರೆಗೂ ನಡೆಯಲಿದೆ. ಮೇಳದಲ್ಲಿ 50 ಮಳಿಗೆಗಳಿದ್ದು, ಸಾಂಸ್ಕೃತಿಕ ಕಲೆಯನ್ನು ಬಿಂಬಿಸುವ ವಸ್ತುಗಳು, ಅದ್ವಿತೀಯ ಕರಕುಶಲ ವಸ್ತುಗಳು ಪ್ರದರ್ಶನದ ಭಾಗವಾಗಿವೆ. ಕಲಾವಿದರಿಂದ ನೇರವಾಗಿ ಗ್ರಾಹಕರಿಗೆ ವಸ್ತುಗಳು ಲಭ್ಯವಿದ್ದು, ಇವುಗಳಿಗೆ ವೇದಿಕೆಯನ್ನಷ್ಟೆ ಕಲ್ಪಿಸಿರುವುದು ಸಂಸ್ಥೆಯ ಹೆಗ್ಗಳಿಕೆಯಾಗಿದೆ.
ಕ್ಲಾಸ್ರೂಮ್ಗಳಿಗೆ ಲೈಫ್ ಸೈಕಲ್ ಸೇವೆ
ಐಸಿಟಿ ಸಿಸ್ಟಮ್ಸ್ ಅಂಗವಾಗಿರುವ ಎಚ್ಸಿಎಲ್ ಇನ್ಫೋಸಿಸ್ಟಮ್ಸ್ ಲಿ. ಹಾಗೂ ಶಿಕ್ಷಣ ಸಂಸ್ಥೆಗಳಲ್ಲಿ ಒಂದಾದ ಎಜ್ಯುಕ್ಯಾಂಪ್ ಪ್ರಸ್ತುತ ಹಾಗೂ ನೂತನ ಕ್ಲಾಸ್ರೂಮ್ಗಳಿಗೆ ಲೈಫ್ ಸೈಕಲ್ ಸೇವೆಗಳನ್ನು ಒದಗಿಸಲಿದೆ. ಎಚ್ಸಿಎಲ್ನ ಲೈಫ್ ಸೈಕಲ್ ಸೇವೆಗಳು 720 ಬೆಂಬಲ ಅಂಕಗಳು, 10,000 ಸರ್ವೀಸ್ ಎಂಜಿನಿಯರುಗಳೊಂದಿಗೆ, ದೇಶದಾದ್ಯಂತ 5,000ಕ್ಕೂ ಹೆಚ್ಚಿನ ಪಟ್ಟಣಗಳಲ್ಲಿ ತನ್ನ ಕೇಂದ್ರಗಳನ್ನು ಹೊಂದಿದೆ. ಈ ಸಂದರ್ಭದಲ್ಲಿ ಮಾತನಾಡಿದ ಎಚ್ಸಿಎಲ್ ಇನ್ಫೋಸಿಸ್ಟಮ್ಸ್ ಲಿ. ಸಿಇಒ ಹಾಗೂ ನಿರ್ದೇಶಕ ಹರ್ಷ್ ಚಿತಲೆ 'ಎಜ್ಯುಕ್ಯಾಂಪ್ನೊಂದಿಗಿನ ಈ ಪಾಲುದಾರಿಕೆ ನಮಗೆ ಅತೀವ ಸಂತಸವನ್ನು ತಂದಿದೆ. ಶಿಕ್ಷಣ ಕ್ಷೇತ್ರದಲ್ಲಾಗುತ್ತಿರುವ ತಂತ್ರಜ್ಞಾನ ಕ್ರಾಂತಿಯು ಉತ್ತಮ ಭವಿಷ್ಯದ ಪರಿಕಲ್ಪನೆಯನ್ನು ಹುಟ್ಟುಹಾಕಿದೆ. ಈ ಪಾಲುದಾರಿಕೆಯೊಂದಿಗೆ ಎಚ್ಸಿಎಲ್ ಇನ್ಫೋಸಿಸ್ಟಮ್ಸ್ ತನ್ನ ಲೈಫ್ ಸೈಕಲ್ ಸೇವೆಗಳನ್ನು ಮತ್ತಷ್ಟು ಬಲಪಡಿಸಿಕೊಳ್ಳುವುದು ಸಾಧ್ಯವಾಗುತ್ತದೆ ಎಂದು ನಂಬಿದ್ದೇನೆ' ಎಂದು ವಿವರಿಸಿದರು.
ಡಯಾಬಿಟಾ ಕೇರ್ನಿಂದ ಡಯಾಬಿಟಿಸ್ ಸೇವೆ
ಡಯಾಬಿಟಾ ಕೇರ್, ಭಾರತದ ಪ್ರಪ್ರಥಮ ಸಂಪರ್ಕಿತ ನವೀನ ಮತ್ತು ಕ್ರಾಂತಿಕಾರಿ ಡಯಾಬಿಟಿಸ್ ಸೇವೆಗಳಿಗೆ ಇತ್ತೀಚಿಗೆ ಚಾಲನೆ ನೀಡಿತು. ಮಧುಮೇಹದ ಮೇಲೆ ನಿಗಾವಹಿಸುವ ಮತ್ತು ಅದನ್ನು ನಿಯಂತ್ರಿಸುವ ಉದ್ದೇಶವನ್ನಿಟ್ಟುಕೊಂಡ ತಂತ್ರಜ್ಞಾನ ಚಾಲಿತ ಸೇವೆಯಾಗಿದೆ. ಈ ಸೇವೆಯನ್ನು ಕರ್ನಾಟಕ ಸರ್ಕಾರದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಯು.ಟಿ.ಖಾದರ್ ಉದ್ಘಾಟಿಸಿದರು.
ಭಾರತದಲ್ಲಿ 65 ದಶಲಕ್ಷ ಮಂದಿ ಮಧುಮೇಹದಿಂದ ಬಳಲುತ್ತಿದ್ದು, 2020ರ ವೇಳೆಗೆ ಈ ಸಂಖ್ಯೆ 100 ದಶಲಕ್ಷದಷ್ಟಾಗುವ ನಿರೀಕ್ಷೆಯಿದೆ. ಫಸ್ಟ್-ಟು-ಮಾರ್ಕೆಟ್ ಸೇವೆ ಮೂಲಕ ಡಯಾಬಿಟಾಕೇರ್ ದಕ್ಷ, ಪರಿಣಾಮಕಾರಿ ಹಾಗೂ ಕೈಗೆಟುಕುವಂತೆ ಪ್ರಸ್ತುತ ಡಯಾಬಿಟಿಸ್ ನಿರ್ವಹಣೆಯಲ್ಲಿನ ಅಂತರವನ್ನು ನಿವಾರಿಸುತ್ತಿದೆ. ಈ ವೇಳೆ ಮಾತನಾಡಿದ ಡಯಾಬಿಟಾಕೇರ್ ಸಿಇಓ ಹಾಗೂ ಸ್ಥಾಪಕ ಡಾ.ಸಂದೀವ್ ಅಗರ್ವಾಲ್ ಮಧುಮೇಹ ಇರದ ಜನರಿಗೆ ಹೋಲಿಸಿದರೆ ಮಧುಮೇಹ ರೋಗವುಳ್ಳ ಜನರು ಆಸ್ಪತ್ರೆಗೆ ದಾಖಲಾಗುವ ಸಂಭವ ದುಪ್ಪಟ್ಟಾಗಿರುತ್ತದೆ ಚಿಕಿತ್ಸೆ ಪಡೆಯುವ ಅವಧಿಯೂ ಶೇ.30ರಷ್ಟು ಹೆಚ್ಚು ಎಂದರು.
ವಂಡರ್ಲಾ ಪ್ರಶಸ್ತಿಗೆ ಅರ್ಜಿ
ವಂಡರ್ ಲಾ ಹಾಲಿಡೇಸ್ ಸಂಸ್ಥೆ ಹಸಿರು ಸಂರಕ್ಷಣೆ ಮತ್ತು ಇಂಧನ ಉಳಿತಾಯಕ್ಕೆ ಕ್ರಮಕೈಗೊಂಡ ಶಾಲೆಗಳನ್ನು ಗುರುತಿಸಿ 'ವಂಡರ್ಲಾ ಪರಿಸರ ಮತ್ತು ಇಂಧನ ಸಂರಕ್ಷಣೆ ಪ್ರಶಸ್ತಿ-2013' ನೀಡಲು ನಿರ್ಧರಿಸಿದ್ದು, ಅದಕ್ಕಾಗಿ ರಾಜ್ಯದ ಶಾಲೆಗಳಿಂದ ಅರ್ಜಿ ಆಹ್ವಾನಿಸಿದೆ. ತ್ಯಾಜ್ಯ ನಿರ್ವಹಣೆ, ವಿಲೇವಾರಿ, ನಿರ್ವಹಣಾ ವ್ಯವಸ್ಥೆ, ಅರಣ್ಯೀಕರಣ, ಮಳೆ ನೀರು ಸಂರಕ್ಷಣೆ, ತರಕಾರಿ ಬೆಳೆಯವಿಕೆ, ತೋಟಗಾರಿಕೆ, ಭೂಸಂರಕ್ಷಣೆ, ಪರಿಸರ ಸ್ನೇಹಿ ಕ್ರಮಗಳು, ಪರಿಸರ ಸಂರಕ್ಷಣೆ ದೃಷ್ಟಿಯಿಂದ ರಚಿಸಲಾದ ಕ್ಲಬ್ಗಳು, ಶಿಕ್ಷಕರು-ವಿದ್ಯಾರ್ಥಿಗಳು ನಡೆಸಿದ ಕಾರ್ಯಕ್ರಮಗಳನ್ನು ಇದಕ್ಕೆ ಪರಿಗಣಿಸಲಾಗುವುದು ಎಂದು ವಂಡರ್ ಲಾ ವ್ಯವಸ್ಥಾಪಕ ನಿರ್ದೇಶಕ ಅರುಣ್ ಕೆ. ಚಿಟ್ಟಲಪ್ಪಿಲ್ಲಿ ತಿಳಿಸಿದ್ದಾರೆ.
ಪ್ರಥಮ ಬಹುಮಾನ ಪಡೆದ ಶಾಲೆಗೆ ರು. 50 ಸಾವಿರ, 2ನೇ ಸ್ಥಾನ ಪಡೆದ 2 ಶಾಲೆಗೆ ತಲಾ ರು. 25 ಸಾವಿರ ಮತ್ತು 3ನೇ ಸ್ಥಾನ ಪಡೆದ 3 ಶಾಲೆಗಳಿಗೆ ತಲಾ ರು. 15 ಸಾವಿರ ನೀಡಲಾಗುವುದು. ಜತೆಗೆ, 20 ಶಾಲೆಗಳಿಗೆ ಸಮಾಧಾನಕರ ಬಹುಮಾನ ನೀಡಲಾಗುವುದು. ಈ ಪ್ರಶಸ್ತಿ ಆಯ್ಕೆ ಬಯಸುವ ಶಾಲೆಗಳು ವಂಡರ್ ಲಾ ವೆಬ್ಸೈಟ್ www.wonderla.com ನಿಂದ ಅರ್ಜಿ ಡೌನ್ಲೋಡ್ ಮಾಡಿಕೊಳ್ಳಬಹುದು ಅಥವಾ 9945557777ಗೆ ಕರೆ ಮಾಡಬಹುದು. ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ಸೆ. 15. ಅರ್ಜಿ ಕಳುಹಿಸಬೇಕಾದ ವಿಳಾಸ: ಸಂಯೋಜಕರು, ವಂಡರ್ ಲಾ ಪರಿಸರ ಮತ್ತು ಇಂಧನ ಸಂರಕ್ಷಣೆ ಪ್ರಶಸ್ತಿ-2013, ವಂಡರ್ ಲಾ ಹಾಲಿಡೇಸ್ ಲಿ., 28 ನೇ ಕಿ.ಮೀ., ಮೈಸೂರು ರಸ್ತೆ, ಹೆಜ್ಜಾಲ ಅಂಚೆ, ಬೆಂಗಳೂರು-560019
ಹೈಪರ್ ಸೇಲ್; ಭಾರೀ ರಿಯಾಯಿತಿ
ಈ ಋತುವಿನ ಹೈಪರ್ ಸೇಲ್ನೊಂದಿಗೆ ಹೈಪರ್ ಮಾರ್ಕೇಟ್ ಪೈಪರ್ಸಿಟಿ ಪ್ರತ್ಯಕ್ಷವಾಗಿದೆ. ಬಟ್ಟೆಗಳು, ಪಾದರಕ್ಷೆ, ಆಕ್ಸೆಸರಿಗಳು, ಎಲೆಕ್ಟ್ರಾನಿಕ್ಸ್, ಅಪ್ಲಿಯೆನ್ಸಸ್ ಕ್ರೀಡಾ ಸಾಮಾಗ್ರಿಗಳು, ಗೃಹ ಮತ್ತು ಪೀಠೋಪಕರಣ ವಿಭಾಗದಲ್ಲಿ ರಿಯಾಯಿತಿ ಲಭ್ಯವಿದೆ. ಆಕ್ಸೆಸರಿಗಳ ಮೇಲೆ ಶೇ.10ರವರೆಗೆಂ, ಗೃಹ ಮತ್ತು ಪೀಠೋಪಕರಣಗಳ ಮೇಲೆ ಶೇ.50ರವರೆಗೆ, ಆಟಿಕೆ ಮತ್ತು ಸ್ಟೇಷನರಿ ಮೇಲೆ ಶೇ.50ರವರೆಗೆ, ಎಲೆಕ್ಟ್ರಾನಿಕ್ಸ್ ಮತ್ತು ಅಪ್ಲಿಯೆನ್ಸಸ್ ಮೇಲೆ ಶೇ.30ರವರೆಗೆ ಹಾಗೂ ಆಹಾರ ಮತ್ತು ಕಿರಾಣಿ ಸಾಮಗ್ರಿಗಳ ಮೇಲೆ ಶೇ.10ರವರೆಗೆ ರಿಯಾಯಿತಿ ದೊರೆಯಲಿದೆ. ಇದರೊಂದಿಗೆ ನಮ್ಮ ಡಿಸ್ಕವರಿ ಕ್ಲಬ್ ಸದಸ್ಯರಿಗೆ ಮತ್ತಷ್ಟು ಅನುಕೂಲಗಳಿದ್ದು, ಸೇಲ್ ಅವಧಿಯಲ್ಲಿ ಡಿಸ್ಕವರಿ ಪಾಯಿಂಟ್ಗಳ ರಿಡಂಪ್ಷನ್ಗೆ ಅವಕಾಶವಿರುವ ಜತೆಗೆ ಶೇ.10ರಷ್ಟು ಬೋನಸ್ ಪಾಯಿಂಟ್ಗಳನ್ನು ಅವರ ಖಾತೆಗೆ ಮರಳಿ ಜಮಾ ಮಾಡಲಾಗುತ್ತದೆ.
ಎಮಿರೇಟ್ಸ್ನಿಂದ ಪ್ರಯಾಣ ರಿಯಾಯಿತಿ
ವಿಮಾನಯಾನ ಸಂಸ್ಥೆಗಳಲ್ಲೊಂದಾದ ಎಮಿರೇಟ್ಸ್ ಸಂಸ್ಥೆ ಈ ಋತುಮಾನದಲ್ಲಿ ದುಬೈಗೆ ಪ್ರಯಾಣಿಸಿ ಉಳಿತಾಯ ಮಾಡುವಂತೆ ಆಹ್ವಾನಿಸಿದೆ. ದುಬೈಗೆ ಪ್ರಯಾಣಿಸಲು ಭಾರತೀಯ 52,000ದಿಂದ ಆರಂಭವಾಗುವ ಬ್ಯುಸಿನೆಸ್ ಕ್ಲಾಸ್ ಪ್ರಯಾಣದರಗಳು ಮತ್ತು ಇತರ ಆಯ್ದ ಸ್ಥಳಗಳಿಗೆ ಶೇ.15ರಿಯಾಯಿತಿಯೊಂದಿಗೆ ಆ.9ರವರೆಗೂ ಇದ್ದು, ಎಮಿರೇಟ್ಸ್ನ ಆರು ಖಂಡಗಳ ಜಾಗತಿಕ ಕಾರ್ಯಜಾಲದಲ್ಲಿ Emirates'global network ಆಯ್ದ ಸ್ಥಳಗಳನ್ನು ಪ್ರಯಾಣಿಕರು ಆಯ್ಕೆ ಮಾಡಿಕೊಳ್ಳಬಹುದು. ಭಾರತ ಹಾಗೂ ನೇಪಾಳ್ ಎಮಿರೇಟ್ಸ್ನ ಉಪಾಧ್ಯಕ್ಷ ಎಸ್ಸಾ ಸುಲೈಮಾನ್ ಅಹ್ಮದ್ ಮಾತನಾಡಿ, ದುಬೈ ಹೊರತಾಗಿ ಇತರ ಅನೇಕ ಸ್ಥಳಗಳಿಗೆ ನೀಡಲಾಗುವ ಶೇ.15 ರಿಯಾಯಿತಿ ಮೂಲಕ, ಗ್ರಾಹಕರು ತಮ್ಮ ಜಾಗತಿಕ ಕಾರ್ಯಜಾಲದ ಅನ್ವೇಷಣೆಯಲ್ಲಿ ತೊಡಗುವುದರ ಜತೆಗೆ ಎಮಿರೇಟ್ಸ್ನ ಪ್ರಶಸ್ತಿ ವಿಜೇತ ವ್ಯಾಪಾರಿ ವರ್ಗದ ಅನುಭವ ಪಡೆಯಬಹುದು ಎಂದರು.
ಟೆಕ್ಸರ್ ಪವರ್ ಸೊಲ್ಯುಷನ್ಸ್ ಸಂಸ್ಥೆ 25ನೇ ವರ್ಷಾಚರಣೆ
ಟೆಕ್ಸರ್ ಪವರ್ ಸೊಲ್ಯುಷನ್ಸ್ ಸಂಸ್ಥೆ ತನ್ನ 25ನೇ ವರ್ಷವನ್ನು ಆಚರಿಸುತ್ತಿದೆ. ಈ ಮಹತ್ವದ ಮೈಲಿಗಲ್ಲನ್ನು ಮುಟ್ಟಿರುವ ಸಂಸ್ಥೆಯು ಈ ವರ್ಷದಲ್ಲಿ ಹಲವಾರು ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ. ಹೊಸ ಕಾರ್ಪೋರೇಟ್ ಕಚೇರಿ ಸ್ಥಾಪನೆ, ಸಂಸ್ಥೆಯಲ್ಲಿ ಗಣನೀಯ ಸಾಧನೆ ಸಲ್ಲಿಸಿರುವವರಿಗೆ ಸನ್ಮಾನ ಕಾರ್ಯಕ್ರಮ ಆಯೋಜನೆ. ಭವಿಷ್ಯದ ಆಯೋಜನೆಗಳಲ್ಲಿ ಪ್ರಸಕ್ತ ವರ್ಷದಲ್ಲಿ ಸಂಸ್ಥೆ ವಹಿವಾಟು 100 ಕೋಟಿ ಮೀರುವಂತೆ ಕಾರ್ಯನಿರ್ವಹಿಸುವುದು ಮತ್ತು ಗುರಿ ತಲುಪಲು ಯೋಜನಾತ್ಮಕ ಕಾರ್ಯಗಳನ್ನು ಹಮ್ಮಿಕೊಳ್ಳುವುದು. ನೌಕರರಿಗೆ ನೀಡಬೇಕಾದ ಅಗತ್ಯ ಷೇರುಗಳನ್ನು ಕೊಡುವುದರ ಜತೆಗೆ 'ಸಾರ್ವಜನಿಕ ಸಂಸ್ಥೆ'ಯಾಗಿ ಟೆಕ್ಸರ್ ರೂಪುಗೊಳ್ಳಬೇಕೆಂಬ ದೂರದೃಷ್ಟಿಯನ್ನು ಇಟ್ಟುಕೊಳ್ಳಲಾಗಿದೆ.
ಟೆಕ್ಸರ್ ಪವರ್ ಸೊಲ್ಯುಷನ್ಸ್ ಸಂಸ್ಥೆ ಇದೀಗ 2012 ಮತ್ತು 2013ನೇ ಸಾಲಿನ ಆರ್ಥಿಕ ವರ್ಷದಲ್ಲಿ ಸಂಸ್ಥೆ 92ಕೋಟಿ ವಹಿವಾಟು ನಡೆಸುವ ಮೂಲಕ ಮಾರುಕಟ್ಟೆ ಗಮನ ಸೆಳೆದಿದೆ.
ಏರ್ಟೆಲ್ನಿಂದ ಬೆಸ್ಕಾಂ ಬಿಲ್ ಪಾವತಿ ಸೇವೆ
ಭಾರತಿ ಏರ್ಟೆಲ್ ಗ್ರಾಹಕರಿಗೆ ವಿಶೇಷವಾಗಿ ಹಣಕಾಸಿನ ವ್ಯವಹಾರ ನಡೆಸಲು ನೆರವಾಗುವ ಸೇವೆ ಪರಿಚಯಿಸಲು ಮುಂದಾಗಿದೆ. ನಿಮ್ಮ ಮೊಬೈಲ್ ಫೋನ್ ಮೂಲಕವೇ ಬೆಸ್ಕಾಂ ಬಿಲ್ಗಳನ್ನು ಪಾವತಿಸುವ ಅವಕಾಶವನ್ನು ಒದಗಿಸಿದೆ. ನಿಮ್ಮ ಆರ್.ಆರ್. ನಂಬರ್ ದಾಖಲಿಸಿ, ಲೋಕೇಷನ್ ಕೋಡ್ ದಾಖಲಿಸಿ, ನಿಮ್ಮ ಮೀಟರ್ನ ರೀಡಿಂಗ್ ಡೇಟ್ನ್ನು ನೋಂದಣಿ ಮಾಡಬೇಕು. ಮೊದಲು ನೋಂದಣಿ ಮಾಡಿಕೊಂಡು, ನಂತರ ಸೆಟ್ ಅಫ್ ಎಂಪಿನ್, ಆನಂತರ ಲೋಡ್ ಕ್ಯಾಷ್ ಆಪ್ಷನ್ ಬಲಸಲು ಸೂಚಿಸಲಾಗಿದೆ. ಹೆಚ್ಚಿನ ಮಾಹಿತಿ ಮತ್ತು ನೊಂದಣಿಗೆ ಟೋಲ್ ಫ್ರೀ ನಂಬರ್ ಶ್ರೀ400 ಗೆ ಕರೆ ಮಾಡಿ.
ರಿಲಯನ್ಸ್ ಲೈಫ್ ಇನ್ಶ್ಯೂರೆನ್ಸ್ನಿಂದ ವಂಚಕರವಿರುದ್ಧ 190 ದೂರು ದಾಖಲು
ರಿಲಯನ್ಸ್ ಕ್ಯಾಪಿಟಲ್ ಲಿ. ಭಾಗವಾದ ರಿಲಯನ್ಸ್ ಲೈಫ್ ಇನ್ಶ್ಯೂರೆನ್ಸ್ ಕಂಪನಿ, ದೇಶಾದ್ಯಂತ ಸಾಲ ನೀಡುವ ಪಾಲಿಸಿಯ ಮೂಲಕ ಲಾಭದ ಕುರಿತು ಆಕರ್ಷಣೆ ಹುಟ್ಟಿಸುವ ವಂಚಕ ಕಾಲ್ಸೆಂಟರ್ಗಳು ಮತ್ತು ಹುಸಿ ಕರೆಮಾಡುವವರ ವಿರುದ್ಧ ವಿವಿಧ ಪೊಲೀಸ್ ಠಾಣೆಗಳಲ್ಲಿ 190ಕ್ಕೂ ಅಧಿಕ ದೂರುಗಳನ್ನು ದಾಖಲಿಸಿದೆ. ಹುಸಿಕರೆ ಎನ್ನುವುದು ಉದ್ದಿಮೆಯ ಸಮಸ್ಯೆಯಾಗಿದ್ದು, ಈ ಸಮಸ್ಯೆಯ್ನು ತಡೆಯಲು ಉದ್ಯಮ ಸೂಕ್ತ ಕ್ರಮಗಳನ್ನು ತೆಗೆದುಕೊಳ್ಳುತ್ತಿದೆ. ರಿಲಯನ್ಸ್ ಲೈಫ್ ಇನ್ಶ್ಯೂರೆನ್ಸ್ ಕರೆ ಮಾಡುವವರ ಸಂಖ್ಯೆಗಳು ಹಾಗೂ ಹೆಸರುಗಳನ್ನು ಪಡೆದುಕೊಂಡು ನಿರ್ದಿಷ್ಟ ಪೊಲೀಸ್ ಠಾಣೆಗಳಲ್ಲಿ ದೂರು ದಾಖಲಿಸುವ ಕೆಲವೇ ವಿಮಾದಾರರಲ್ಲಿ ಒಂದಾಗಿದೆ. ಎಂದು ರಿಲಯನ್ಸ್ ಲೈಫ್ ಇನ್ಶ್ಯೂರೆನ್ಸ್ನ ಸಿಇಒ ಅನೂಪ್ ರಾವು ತಿಳಿಸಿದ್ದಾರೆ.