ನೀವು ಕಾರು ಖರೀದಿಸುವ ಯೋಚನೆ ಹೊಂದಿದ್ದರೆ, 2017ರ ಒಳಗೇ ಖರೀದಿಸುವುದು ವಾಸಿ. ಯಾಕೆ ಗೊತ್ತೆ? ಅಷ್ಟರಲ್ಲಿ ಪ್ಯಾಸೆಂಜರ್ ಕಾರುಗಳ ಬೆಲೆಯನ್ನು ಸುಮಾರು 70,000 ರುಪಾಯಿಗಳಷ್ಟು ಏರಿಸಲು ಸರ್ಕಾರ ಚಿಂತನೆ ನಡೆಸಿದೆ. ಅದಕ್ಕೆ ಕಾರಣ, ಇಂಧನ ಬೆಲೆ.
ಇಂಧನ ಕ್ಷಮತೆ ಬ್ಯೂರೋ(ಬಿಇಇ)ದ ನಿರ್ಧಾರ ಇದು. ಈಗಿರುವ ಕಾರುಗಳಲ್ಲಿ ಇಂಧನ ಕ್ಷಮತೆ ಸಾಕಷ್ಟಿಲ್ಲವೆಂದು ಅದರ ಅಭಿಪ್ರಾಯ. ಅದನ್ನು ಆಗುಮಾಡಿಸಲು ಅಳವಡಿಸುವ ಸಾಧನಗಳಿಂದಾಗಿ ಸಹಜವಾಗಿಯೇ ಕಾರುಗಳ ಬೆಲೆ ಹೆಚ್ಚಲಿದೆ. ಇದು 2 ಹಂತಗಳ ಕಾರ್ಯಕ್ರಮ. 2017ರಲ್ಲೊಮ್ಮೆ, 2022ರಲ್ಲೊಮ್ಮೆ ಬೆಲೆ ಏರಲಿದೆ.