ಡಾಲರ್ ಮುಂದೆ ರುಪಾಯಿ ಬೆಲೆ ಪಾತಾಳ ಕಂಡಿರುವುದಂತೂ ನಿಮಗೆ ತಿಳಿದೇ ಇದೆ. ಮತ್ತೆ ಚೇತರಿಸಿಕೊಳ್ಳುವ ಯಾವ ಲಕ್ಷಣಗಳೂ ಸದ್ಯಕ್ಕೆ ಕಾಣಿಸುತ್ತಿಲ್ಲ. ಆದರೆ, ಮಾರ್ಚ್ 2014ರ ಮಾರ್ಚ್ ವೇಳೆಗೆ ಡಾಲರ್ ಮುಂದೆ ರುಪಾಯಿ ಬೆಲೆ 60ಕ್ಕೆ ಏರಲಿದೆ ಎಂದು ರೇಟಿಂಗ್ ಏಜೆನ್ಸಿ ಸಿಆರ್ಐಎಸ್ಐಎಲ್ ಹೇಳಿದೆ. ಈ ಊಹೆಗೆ ಕಾರಣಗಳು ಎರಡು- ಒಂದು, ತೈಲದ ಹಾಗೂ ಬಂಗಾರದ ಆವಕ ಕಡಿಮೆಯಾಗಿರುವುದು. ಇನ್ನೊಂದು- ಮಾರುಕಟ್ಟೆಯ ಚೇತರಿಕೆ ನಿಟ್ಟಿನಲ್ಲಿ ಸರ್ಕಾರ ತೆಗೆದುಕೊಂಡಿರುವ ಕ್ರಮಗಳಿಂದಾಗಿ, ವಿದೇಶಿ ಬಂಡವಾಳ ಹೂಡಿಕೆಯಲ್ಲಿ ಹೆಚ್ಚಳ ನಿರೀಕ್ಷೆ.