ಭಾರತದ ಬಿಯರ್ ಪ್ರಖ್ಯಾತ. ಅದಕ್ಕಾಗಿ ಭಾರತ ತಯಾರಿಸುವ ಮಾಲ್ಟ್ ಕೂಡ ಜನಪ್ರಿಯ. ಮಾಲ್ಟ್ ಅಂದರೆ, ಬಾರ್ಲಿ ಮುಂತಾದ ಧಾನ್ಯಗಳನ್ನು ಹುಳಿಬರಿಸಿ ತಯಾರಿಸುವ ಪದಾರ್ಥ. ಇದು ಬಿಯರ್ನ ಮೂಲ.
ಮುಂದಿನ ವರ್ಷಗಳಲ್ಲಿ ಭಾರತದ ಮಾಲ್ಟ್ಗೆ ಸಕತ್ ಬೇಡಿಕೆ ಬರಲಿದೆಯಂತೆ. ಈಗಾಗಲೇ ಭಾರತ ಮಾಲ್ಟ್ ಸಪ್ಲೈಯಲ್ಲಿ ಎರಡನೇ ಸ್ಥಾನದಲ್ಲಿರುವ ರಫ್ತುದಾರ. ಮೊದಲನೆಯ ಸ್ಥಾನದಲ್ಲಿ ಚೀನಾ ಇದೆ. ದಕ್ಷಿಣ ಏಷ್ಯಾ, ಪಶ್ಚಿಮ ಏಷ್ಯಾದಲ್ಲೆಲ್ಲ ಭಾರತದ ಮಾಲ್ಟೇ ಫೇಮಸ್ಸು.