ಸೆಂಟ್ರಲ್ ಕಾಟೇಜ್ ಎಂಪೋರಿಯಮ್ ಕಾರ್ಪೊರೇಷನ್ ಬೆಂಗಳೂರು ಎಂ.ಜಿ.ರಸ್ತೆಯಲ್ಲಿರುವ ತನ್ನ ಮಳಿಗೆಯಲ್ಲಿ ಜೋಧ್‌ಪುರ ಪೀಠೋಪಕರಣಗಳ ಮೇಳ ಏರ್ಪಡಿಸಿದೆ. ಮನಮೋಹಕ ಕೆತ್ತನೆ ಮತ್ತು ಆಕರ್ಷಕ ಬಣ್ಣಗಳಿಂದ ಕೂಡಿದ ಪೀಠೋಪಕರಣಗಳು, ಕಬೋರ್ಡ್‌ಗಳು, ಬಾಕ್ಸ್‌ಗಳು, ಬೆಡ್‌ಸೈಡ್ ಟೇಬಲ್‌ಗಳು, ಝರೋಕಾಗಳು ಇಲ್ಲಿನ ಆಕರ್ಷಣೆಗಳಾಗಿವೆ. ಈ ಪ್ರದರ್ಶನ ಮತ್ತು ಮಾರಾಟ ಮೇಳ ಸೆಪ್ಟೆಂಬರ್ 1ರವರೆಗೆ ಬೆಳಗ್ಗೆ 10ರಿಂದ ರಾತ್ರಿ 8.30ರವರೆಗೆ ನಡೆಯಲಿದೆ. ಮಾಹಿತಿಗೆ: (080) 25584083/84.