

ಆನ್ಲೈನ್ ಶಾಂಪಿಂಗ್ ವೆಬ್ಸೈಟ್ ಆಗಿರುವ ಶಾಪ್ಕ್ಲೂಸ್ (ShopClues) 2015ನೇ ವರ್ಷದ ಮೊದಲ ಭಾಗದಲ್ಲಿ 1 ಸಾವಿರ ಕೋಟಿ ಆದಾಯ ಸಂಗ್ರಹಿಸುವ ಗುರಿ ಹಾಕಿಕೊಂಡಿದೆ. 2011ರ ನವೆಂಬರ್ ಆರಂಭವಾದ ಈ ಸಂಸ್ಥೆ 2012ರ ಮಾರ್ಚ್ ಮತ್ತು 2013ನೇ ಸಾಲಿನ ಮಾರ್ಚ್ ಅವಧಿಯಲ್ಲಿ 50 ಕೋಟಿ ಸಂಗ್ರಹ ಮಾಡಿತ್ತು. ಪ್ರತಿ ತಿಂಗಳು ಈ ವೆಬ್ಸೈಟ್ 3 ಲಕ್ಷ ವಹಿವಾಟು ನಡೆಸುತ್ತಿದೆ. ಕಳೆದ ವರ್ಷ ವೆಬ್ಸೈಟ್ ಶೇ.500ರಷ್ಟು ಬೆಳವಣಿಗೆ ಸಾಧಿಸಿದೆ ಎಂದು ಕಂಪನಿ ಸಿಇಒ ಸಂಜಯ ಸೇಠಿ ತಿಳಿಸಿದ್ದಾರೆ.