ವಿಮೆಯಲ್ಲೂ ಉಳಿತಾಯ

ವಿಮೆಯಲ್ಲೂ ಉಳಿತಾಯ
Updated on: 

ಹೆಚ್ಚುತ್ತಿರುವ ಟ್ರಾಫಿಕ್, ಕಾರು ದುರಸ್ತಿಗೆ ತಗಲುವ ವೆಚ್ಚಗಳನ್ನು ನೋಡುತ್ತಿದ್ದರೆ ಯಾರೂ ಕಾರಿಗೆ ವಿಮೆ ಮಾಡಿಸದೇ ಕುಳಿತುಕೊಳ್ಳುವುದಿಲ್ಲ. ಆದರೆ, ಕಾರಿನ ಮಾಡೆಲ್ ಅನ್ನು ಲೆಕ್ಕಿಸದೇ ಹಣವನ್ನು ಉಳಿತಾಯ ಮಾಡಲೂ ಸಾಧ್ಯ ಎಂಬುವುದು ಹೆಚ್ಚಿನವರಿಗೆ ಗೊತ್ತಿರುವುದಿಲ್ಲ. ಅದು ಹೇಗೆ ಎಂಬ ವಿವರ ಇಲ್ಲಿದೆ.

ಹುಡುಕಾಡಿ ಪಡೆಯಿರಿ
ಯಾರೋ ಹೇಳಿದರೆಂದು ಒಂದೇ ವಿಮಾ ಕಂಪನಿ ಮೇಲೆ ಅವಲಂಬಿಸದಿರಿ. ವಿವಿಧ ಕಂಪನಿಗಳಿಗೆ ಹೋಗಿ, ವಿಮೆಯ ಕೊಟೇಷನ್ಗಳನ್ನು ಪಡೆಯಿರಿ. ಕೆಲವೊಮ್ಮೆ ಏಕರೂಪದ ವಿಮೆಯಾಗಿದ್ದರೂ ಕಂಪನಿಯಿಂದ ಕಂಪನಿಗೆ ಮೊತ್ತ ವ್ಯತ್ಯಾಸವಿರುತ್ತದೆ. ಹಾಗಾಗಿ ನಿಮಗೆ ಯಾವುದು ಸೂಕ್ತ ಎಂಬುದನ್ನು ನಿರ್ಧರಿಸಿ, ನಂತರವೇ ವಿಮೆ ಪಡೆಯಿರಿ.

ವ್ಯವಕಲಿತ ಮೊತ್ತ
ಅಂದರೆ, ಕಾರಿಗೆ ಹಾನಿಯಾದಾಗ ದುರಸ್ತಿಗೆ ನಿಮ್ಮ ಕಿಸೆಯಿಂದಲೇ ನೀವು ಭರಿಸುವ ವೆಚ್ಚ. ಅಲ್ಲಿಂದಲೇ ನಿಮ್ಮ ಇನ್ಶೂರೆನ್ಸ್ ಪಾವತಿ ಆರಂಭವಾಗುತ್ತದೆ. ಈ ವ್ಯವಕಲಿತ ಮೊತ್ತವನ್ನು ಹೆಚ್ಚಿಸಿದಂತೆ ನಿಮ್ಮ ಕಂತಿನ ಮೊತ್ತ ಕ್ರಮೇಣ ಕಡಿಮೆಯಾಗುತ್ತದೆ. ಹಾಗಾಗಿ, ನಿಮಗೆ ಪಾವತಿಸಲು ಸಾಧ್ಯವಿರುವಷ್ಟು ಮೊತ್ತವನ್ನು ಮಾತ್ರ ಆಯ್ಕೆ ಮಾಡಿಕೊಳ್ಳಿ.

ಹೆಚ್ಚುವರಿ ಕವರೇಜ್
ರೋಡ್ಸೈಡ್ ಅಸಿಸ್ಟಿನ್ಸ್, ಲೋನ್ ಪೇ ಆಫ್ ಎಂಬುದೆಲ್ಲ ಕೇಳಲು ಸುಲಭ. ನಿಮ್ಮಲ್ಲಿ ಹಣವಿದ್ದರೆ, ಇಂತಹ ಸೌಲಭ್ಯಗಳಿಗೆ ಗಮನಕೊಡದಿರಿ. ಆರ್ಥಿಕ ಸಂಕಷ್ಟದಲ್ಲಿದ್ದರೆ ಮಾತ್ರ ಇವುಗಳನ್ನು ಪಡೆಯಬಹುದು.

ಉತ್ತಮ ಚಾಲಕನಾಗಿ
ಉತ್ತಮ ಚಾಲನೆಯ ದಾಖಲೆ ಕಾರು ವಿಮೆಯ ಕಂತು ಕಡಿಮೆ ಮಾಡುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ವೆಚ್ಚ ಉಳಿತಾಯ ಮಾಡಬೇಕೆಂದರೆ ಸುರಕ್ಷಿತವಾಗಿ ವಾಹನ ಚಾಲನೆ ಮಾಡಿ.

ರಿಯಾಯಿತಿ ಕೇಳಿ
ಕಂಪನಿಗಳು ಕಾರು ವಿಮೆಯ ಮೇಲೆ ಸಮೂಹ ರಿಯಾಯ್ತಿಯಿಂದ ಕಡಿಮೆ ಮೈಲೇಜ್ ಡಿಸ್ಕೌಂಟ್ವರೆಗೂ ರಿಯಾಯ್ತಿ ನೀಡುತ್ತವೆ. ನಿಮ್ಮ ಕಾರು, ಗೃಹ ವಿಮೆಯನ್ನು ಒಂದೇ ಕಂಪನಿಯಿಂದ ಪಡೆಯುವ ಮೂಲಕ ರಿಯಾಯ್ತಿ ಪಡೆಯಬಹುದು. ನಿಮ್ಮಲ್ಲಿ ಒಂದಕ್ಕಿಂತ ಹೆಚ್ಚು ವಾಹನಗಳಿದ್ದರೆ ಒಂದೇ ಕಂಪನಿಯಿಂದ ವಿಮೆ ಪಡೆಯಿರಿ. ಕಾರಿನೊಳಗೆ ಕಳ್ಳತನ ನಿಗ್ರಹ ಸಾಧನ ಅಳವಡಿಸುವ ಮೂಲಕವೂ ಕಂತಿನಲ್ಲಿ ಡಿಸ್ಕೌಂಟ್ ಪಡೆಯಬಹುದು.

ದರ ಕಡಿತ
ನೀವು ನಗರದ ಹೊರವಲಯಕ್ಕೆ ಸ್ಥಳಾಂತರಗೊಂಡರೆ ಅಥವಾ ವಿವಾಹವಾದರೆ ನಿಮ್ಮ ವಿಮಾ ಕಂಪನಿಗಳು ದರ ಕಡಿತದ ಸೌಲಭ್ಯ ಒದಗಿಸುತ್ತದೆ. ವಾಹನ ಚಾಲನೆಯ ದಾಖಲೆ ಉತ್ತಮವಾಗಿದ್ದರೂ ನೀವು ಈ ಸೌಲಭ್ಯ ಪಡೆಯಬಹುದು.

ಉತ್ತಮ ಕ್ರೆಡಿಟ್ ಸ್ಕೋರ್
ನಿಮ್ಮ ಕ್ರೆಡಿಟ್ ಸ್ಕೋರ್ ಉತ್ತಮವಾಗಿದ್ದರೂ ಹೆಚ್ಚಿನ ಲಾಭವಿದೆ. ಉತ್ತಮ ಕ್ರೆಡಿಟ್ ಸ್ಕೋರ್ ಹೊಂದಿರುವ ವ್ಯಕ್ತಿಗಳು ಹೆಚ್ಚಾಗಿ ವಿಮೆ ಕ್ಲೈಮ್ ಮಾಡುವುದಿಲ್ಲ ಎಂಬ ಭಾವನೆ ಕಂಪನಿಗಳಲ್ಲಿದೆ.

ಆನ್ಲೈನ್ ವಿಮೆ
ಆನ್ಲೈನ್ ವಿಮೆ ಮಾಡಿಸುವುದರಿಂದ ಏಜೆಂಟ್ಗಳಿಗೆ ಕೊಡಬೇಕಾದ ಕಮಿಷನ್ ಹಣ ಉಳಿಯುತ್ತದೆ. ಆನ್ಲೈನ್ನಲ್ಲಿ ನಿಮಗೆ ಹೊಂದಿಕೆಯಾಗಬಲ್ಲ ಕಂಪನಿಗಳ ವಿವರವನ್ನೂ ಪಡೆಯಬಹುದು.

ಡ್ರೈವರ್ ಮೇಲೆ ನಿಗಾ
ನಿಮ್ಮ ಕಾರಿಗೆ ಬೇರೆ ಡ್ರೈವರ್ ಇದ್ದರೆ ಅಥವಾ ಕಾರು ಚಲಾಯಿಸಲು ಪರಿಚಯಸ್ಥರಿಗೆ ಬಿಡುವುದಿದ್ದರೆ, ಅವರು ಸುರಕ್ಷಿತವಾಗಿ ಚಾಲನೆ ಮಾಡುತ್ತಾರೆಯೇ ಎಂದು ದೃಢಪಡಿಸಿಕೊಳ್ಳಿ. ಬೇಜವಾಬ್ದಾರಿ ವ್ಯಕ್ತಿಗಳಿಗೆ ಕಾರನ್ನು ನೀಡದಿರಿ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com