ವಿತ್ತಲೋಕದ ಸುತ್ತಮುತ್ತ

Updated on: 

ಫಿಯೆಟ್ ಪ್ರತ್ಯೇಕ ಡೀಲರ್‌ಶಿಪ್ ಕೇಂದ್ರ
ಬೆಂಗಳೂರು: ಫಿಯೆಟ್ ಗ್ರೂಪ್ ಆಟೋಮೊಬೈಲ್ ಇಂಡಿಯಾ ಸಂಸ್ಥೆ ಬೆಂಗಳೂರಿನಲ್ಲಿ ಸ್ವತಂತ್ರ ಮತ್ತು ಪ್ರತ್ಯೇಕ ಡೀಲರ್‌ಶಿಪ್ ಕೇಂದ್ರ ಪ್ರಾರಂಭಿಸಿದೆ. ಹೊಸೂರು ರಸ್ತೆಯ ಸಿಂಗಸಂದ್ರದಲ್ಲಿ ಈ ಕೇಂದ್ರ ಪ್ರಾರಂಭವಾಗಿದ್ದು, ಶೋರೂಮ್ ಹಾಗೂ ವರ್ಕ್‌ಶಾಪ್ ಕೂಡ ಇಲ್ಲಿದೆ.
ಈ ನೂತನ ಕೇಂದ್ರಕ್ಕೆ ಸಂಸ್ಥೆಯ ಕಾರ್ಯನಿರ್ವಾಹಕ ನಿರ್ದೇಶಕ ಎನ್ರಿಕೋ ಅಟನಾಸಿಯೊ ಚಾಲನೆ ನೀಡಿದರು. ಈ ಸಂದರ್ಭದಲ್ಲಿ ಮಾತನಾಡಿದ ಅವರು, 'ಫಿಯೆಟ್ ಸಂಸ್ಥೆ ಬೆಂಗಳೂರು ನಗರವನ್ನು ದೇಶದ ಪ್ರಮುಖ ಮಾರುಕಟ್ಟೆ ಕೇಂದ್ರವಾಗಿ ಪರಿಗಣಿಸಿದೆ. ನಗರದ ಗ್ರಾಹಕರ ಜತೆಗೆ ಉತ್ತಮ ಸಂಬಂಧ ಬೆಸೆಯುವ ಹಿನ್ನೆಲೆಯಲ್ಲಿ ಈ ಕೇಂದ್ರ ಪ್ರಾರಂಭಿಸಲಾಗುತ್ತಿದೆ' ಎಂದು ಹೇಳಿದರು.
ದೇಶದ ಪ್ರತಿಷ್ಠಿತ ವೆಕ್ಟೋ ಮೋಟಾರ್ಸ್ ಸಂಸ್ಥೆ ಜತೆಗೂಡಿ ಈ ಕೇಂದ್ರ ಪ್ರಾರಂಭಿಸಲಾಗುತ್ತಿದೆ. ಫಿಯೆಟ್ ಹೊರತಾಗಿ ಟಾಟಾ ಹಾಗೂ ಯಮಹಾ ಮೋಟಾರ್ಸ್‌ನ ಡೀಲರ್‌ಶಿಪ್‌ಗಳನ್ನು ಈ ಸಂಸ್ಥೆ ನಿಭಾಯಿಸುತ್ತಿದೆ.

ಅನಲಾಗ್‌ನಿಂದ ಡಿಜಿಟಲ್‌ಗೆ ಎಚ್‌ಪಿ
ಅನಲಾಗ್ ಮುದ್ರಣದಿಂದ ಡಿಜಿಟಲ್ ಮುದ್ರಣಕ್ಕೆ ಪ್ರತಿಷ್ಠಿತ ಎಚ್‌ಪಿ ಕಂಪನಿ ದಾಪುಗಾಲು ಹಾಕುತ್ತಿದೆ. ಭಾರತದ ಮುದ್ರಣ ಕ್ಷೇತ್ರದಲ್ಲಿ ಅಗ್ರಗಣ್ಯ ಸಂಸ್ಥೆಯಾಗಿರುವ ಎಚ್‌ಪಿ ವಾರ್ಷಿಕವಾಗಿ 1.25 ಲಕ್ಷ ಕೋಟಿ ವಹಿವಾಟು ಮಾಡುತ್ತಿದೆ. ಪ್ರತಿ ವರ್ಷ ಶೇ. 4.7ರಷ್ಟು ಬೆಳವಣಿಗೆಯಾಗುತ್ತಿದ್ದು, ಭವಿಷ್ಯದಲ್ಲಿ ಶೇ. 25ರಷ್ಟು ಅಭಿವೃದ್ಧಿ ಸಾಧಿಸುವ ನಿರೀಕ್ಷೆಯಿದೆ ಎಂದು ಸಂಸ್ಥೆಯ ಕಾರ್ಯನಿರ್ವಾಹಕ ನಿರ್ದೇಶಕ ಗಿಟೋ ವಾನ್‌ಪ್ರಾಗ್ ತಿಳಿಸಿದ್ದಾರೆ. ಡಿಜಿಟಲ್ ಮುದ್ರಣದ ಜತೆಗೆ ಪರಿಸರ ಸ್ನೇಹಿ ಹಾಗೂ ಪರಿಣಾಮಕಾರಿ ಉತ್ಪನ್ನಗಳನ್ನು ಮಾರುಕಟ್ಟೆಗೆ ಬಿಡುವ ಬಗ್ಗೆ ಮತ್ತಷ್ಟು ಸಂಶೋಧನೆಗಳು ನಡೆಯುತ್ತಿವೆ ಎಂದು ಸಂಸ್ಥೆಯ ಪ್ರಕಟಣೆ ಹೇಳಿದೆ.

ಹಿಮಾಲಯ ಎಂಜೈಮ್ ತಂತ್ರಜ್ಞಾನ ಟೂತ್‌ಪೇಸ್ಟ್
ಹಿಮಾಲಯ ಡ್ರಗ್ ಸಂಸ್ಥೆಯು ಎಂಜೈಮ್ ತಂತ್ರಜ್ಞಾನದ ಟೂತ್‌ಪೇಸ್ಟ್ ಬಿಡುಗಡೆ ಮಾಡಿದೆ. ಸಂಪೂರ್ಣ ಗಿಡಮೂಲಿಕೆಗೆಳಿಂದಲೇ ತಯಾರಾದ ನ್ಯಾಚುರಲ್ ಆ್ಯಕ್ಟೀವ್ ಟೂತ್‌ಪೇಸ್ಟ್ ಹಲ್ಲುಗಳ ಆರೋಗ್ಯಕ್ಕೆ ನೆರವಾಗಲಿದೆ ಎಂದು ಸಂಸ್ಥೆ ಹೇಳಿಕೊಂಡಿದೆ.
ಇದರೊಂದಿಗೆ ಗಿಡಮೂಲಿಕೆ ಮೂಲದ ಟೂತ್‌ಪೇಸ್ಟ್‌ಗಳ ಸಮಗ್ರ ನವೀನ ಶ್ರೇಣಿಯನ್ನು ಬಿಡುಗಡೆಗೊಳಿಸಿದ ಮೊದಲ ಭಾರತೀಯ ಕಂಪನಿ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ ಎಂದು ಸಂಸ್ಥೆಯ ವಹಿವಾಟು ಮುಖ್ಯಸ್ಥ ರಾಜೇಶ್ ಕೃಷ್ಣಮೂರ್ತಿ ತಿಳಿಸಿದ್ದಾರೆ. ಹಲ್ಲು ಬಿಳಿಯಾಗಲು, ಕಾಂತಿಯುತವಾಗಲು ಹಾಗೂ ಮುಖದ ಆರೋಗ್ಯ ಕಾಪಾಡಲು ಇದು ಸಹಾಯಕಾರಿಯಾಗಲಿದೆ. ಟೂತ್‌ಪೇಸ್ಟ್‌ನಲ್ಲಿ ತ್ರಿಫಲ, ಪೋಮ್‌ಗ್ರನೇಟ್, ವಿದಂಗಾ, ಸ್ವೀಟ್ ಅಸಿನಾ ಇರುವುದರಿಂದ ಹಲ್ಲುಗಳನ್ನು ಬ್ಯಾಕ್ಟೀರಿಯಾದ ಸೋಂಕಿನಿಂದ ತಡೆಯುತ್ತದೆ ಎಂದು ಸಂಸ್ಥೆಯ ಪ್ರಕಟಣೆ ತಿಳಿಸಿದೆ. ಹಲ್ಲುಗಳ ಕಾಂತಿ ಹೆಚ್ಚಿಸಲು ಕೆಲ ಟೂತ್‌ಪೇಸ್ಟ್‌ಗಳಲ್ಲಿ ಬ್ಲೀಚಿಂಗ್ ಧಾತುಗಳಿರುತ್ತವೆ. ಇದರಿಂದ ಹಲ್ಲಿನ ವಸಡಿಗೆ ಹಾನಿಯಾಗಬಹುದು. ಆದರೆ ಹಿಮಾಲಯ ಸಂಸ್ಥೆಯ ವಿಶೇಷ ಟೂತ್‌ಪೇಸ್ಟ್‌ನಲ್ಲಿ ಅನಾನಸ್ ಹಾಗೂ ಪಪ್ಪಾಯ ಅಂಶಗಳಿರುತ್ತವೆ ಎಂದು ಸಂಸ್ಥೆ ಹೇಳಿದೆ.



ಕೆಲಸ ಬೇಕೆ..ಬಾಬಾಜಾಬ್
ಡಾಟ್ ಕಾಮ್ ಸಂಪರ್ಕಿಸಿ
ಬೆಂಗಳೂರು: ಕೇವಲ ಓದಿದವರು ಮಾತ್ರ ವೆಬ್‌ನಲ್ಲಿ ಕೆಲಸಕ್ಕೆ ಹುಡುಕಾಟ ನಡೆಸುವುದು, ಅರ್ಜಿಗಳನ್ನು ಡೌನ್‌ಲೋಡ್ ಮಾಡಿ, ತಮ್ಮ ಅರ್ಹತೆಗಳನ್ನು ತುಂಬಿಸಿ ಕಳುಹಿಸುವುದು, ಕೆಲಸದ ಕರೆಗಾಗಿ ಕಾಯುವುದು ಸಾಮಾನ್ಯ.
ಆದರೆ, ಕೇವಲ ಪ್ರಾಥಮಿಕ ವಿದ್ಯಾಭ್ಯಾಸ ಹೊಂದಿರುವ ಹಾಗೂ ಓದದೇ ಕೆಲಸ ಮಾಡಿ ಕೆಲಸದಲ್ಲಿ ಪ್ರಾವೀಣ್ಯತೆಪಡೆದವರಿಗಾಗಿ ಬಾಬಾಜಾಬ್ ಡಾಟ್ ಕಾಮ್ ಉದ್ಯೋಗ ಅವಕಾಶಗಳನ್ನು ಕಲ್ಪಿಸಿದೆ. ಪ್ರತಿಷ್ಠಿತ ಕಂಪನಿಗಳು, ಖಾಸಗಿ ಕಂಪನಿಗಳು ತಮ್ಮ ಕಂಪನಿಯಲ್ಲಿ ಸಹಾಯಕ ಕೆಲಸಗಾರರು ಮತ್ತು ಇತರೇ ವರ್ಗಗಳಿಗಾಗಿ ಕೆಲಸಗಾರರಿಗಾಗಿ ಉಚಿತವಾಗಿ ಇಲ್ಲಿ ನಾಮಾಂಕಿತಗೊಳ್ಳಬಹುದಾಗಿದೆ.
ಏನಿದು ಬಾಬಾಜಾಬ್ ಡಾಟ್ ಕಾಂ?: ನಿಮ್ಮ ಅರ್ಹತೆಗೆ ತಕ್ಕಂತೆ ಕೆಲಸ, ನಿಮ್ಮ ವಾಸಸ್ಥಳದ ಹತ್ತಿರದಲ್ಲಿಯೇ ಕೆಲಸ. ನಿಮ್ಮ ಮೊಬೈಲ್‌ನಿಂದ ಒಂದು ಮಿಸ್ಡ್ ಕಾಲ್ ಕೊಟ್ಟರೆ ಸಾಕು, ತಕ್ಷಣ ಸಂದೇಶ ರವಾನೆ ಹಾಗೂ ಹಿಂತಿರುಗಿ ಕಾಲ್ ಬರುವ ಮೂಲಕ ತಮ್ಮ ಸಂಪೂರ್ಣ ಮಾಹಿತಿಯನ್ನು ಕಲೆಹಾಕಲಾಗುತ್ತದೆ. ನಂತರ ವೆಬ್‌ನಲ್ಲಿ ಕೆಲಸಕ್ಕೆ ಪ್ರೊಫೈಲ್ ರೆಡಿ ಮಾಡಿ, ಕೆಲಸ ಮಾಡಲು ಬೇಕಾದ ಪ್ರಮುಖ ಸಂಗತಿಗಳನ್ನು ಈ ವೆಬ್ ನಿರ್ವಹಿಸುತ್ತದೆ.
ಉದ್ಯೋಗಾಕಾಂಕ್ಷಿಗಳಿಗೆ ಉತ್ತಮ ಕೆಲಸ ಸಿಗುವಂತೆ ಮಾಡುವುದು ಹಾಗೂ ಉದ್ಯಮಿಗಳಿಗೆ ಖಾಲಿ ಹುದ್ದೆಗಳನ್ನು ಭರ್ತಿ ಮಾಡಲು ಸಹಾಯ ಮಾಡುವುದು ಸಂಸ್ಥೆಯ ಪ್ರಮುಖ ಉದ್ದೇಶವಾಗಿದೆ.
ಯಾವುದೇ ಉದ್ಯೋಗಾಕಾಂಕ್ಷಿಗಳು 55444 ಈ ಸಂಖ್ಯೆಗೆ ಎಸ್‌ಎಂಎಸ್ ಕಳುಹಿಸುವ ಮೂಲಕ ಕೆಲಸಗಳನ್ನು ಹುಡುಕಿಕೊಳ್ಳಬಹುದು. 50506060 ಸಂಖ್ಯೆಗೆ ಮಿಸ್ಡ್ ಕಾಲ್ ನೀಡಿ ಉತ್ತಮ ಕೆಲಸಗಳ ಬಗ್ಗೆ ಮಾಹಿತಿ ತಿಳಿಯಬಹುದು.





ಇಟಲಿಯ ಜಿಮಿ ಭಾರತ ಪ್ರವೇಶ
ಇಟಲಿಯ ಹೌಸ್‌ವೇರ್ ಉತ್ಪಾದನಾ ಸಂಸ್ಥೆ ಜಿಮಿ ಈಗ ಭಾರತೀಯ ಮಾರುಕಟ್ಟೆ ಪ್ರವೇಶಿಸಿದೆ. ಯೂರೋಪ್‌ನಲ್ಲಿ ಮುಂಚೂಣಿಯಲ್ಲಿರುವ ಸಂಸ್ಥೆ ತನ್ನ ಉತ್ಪನ್ನಗಳನ್ನು ವಿಶ್ವದ ಎಲ್ಲೆಡೆ 80 ದೇಶಗಳಿಗೆ ರಫ್ತು ಮಾಡಲಿದೆ.
ಉನ್ನತ ವಿನ್ಯಾಸದ ಉತ್ಪನ್ನಗಳ ಶ್ರೇಣಿಯನ್ನು ಸಂಸ್ಥೆ ಸಾದರಪಡಿಸುತ್ತಿದ್ದು, ಕ್ಲೋತ್ ಡ್ರೈಯರ್, ಐರನಿಂಗ್ ಬೋರ್ಡ್, ಶಾಪಿಂಗ್ ಟ್ರಾಲಿ, ಲ್ಯಾಡರ್‌ಗಳು ಮತ್ತು ಸ್ಟೆಪ್ ಸ್ಟೂಲ್‌ಗಳನ್ನು ಸಂಸ್ಥೆ ಸಾದರಪಡಿಸುತ್ತಿದೆ.
ಜಿಮಿ ಇಂಡಿಯಾ ನಗರದಲ್ಲಿ ಕೇಂದ್ರ ಕಚೇರಿ ತೆರೆಯಲಿದ್ದು, ಎರಡು ವಿತರಣಾ ಪಾಲುದಾರ ಸಂಸ್ಥೆಗಳನ್ನು ಹೊಂದಲಿದೆ. ಒಂದು ಆಧುನಿಕ ರಿಟೇಲ್ ಕ್ಷೇತ್ರದಲ್ಲಿ ಬೃಹತ್ ಮಳಿಗೆಗಳೊಂದಿಗೆ, ಇನ್ನೊಂದು ಸಾಂಪ್ರದಾಯಿಕ ಬೊಟೀಕ್‌ಗಳನ್ನು ಒಳಗೊಂಡ ರಿಟೇಲ್ ಚಾನೆಲ್‌ನೊಂದಿಗೆ ಕೆಲಸ ಮಾಡಲಿದೆ. ಸಂಸ್ಥೆಯ ಲಾಜಿಸ್ಟಿಕ್ಸ್ ವೇದಿಕೆ ಮುಂಬೈನಲ್ಲಿದ್ದು, ಎಲ್ಲ ಉತ್ಪನ್ನಗಳ ಶ್ರೇಣಿಯನ್ನು ನಿಭಾಯಿಸಲಿದೆ.


ಓಬೆರಾಯ್‌ನಿಂದ ಆತಿಥ್ಯ ತರಬೇತಿ ಅರ್ಜಿ


ಓಬೆರಾಯ್ ಗ್ರೂಪ್ ಈಗ ಮೂರು ವರ್ಷದ ಆತಿಥ್ಯ ಕ್ಷೇತ್ರದ ತರಬೇತಿ ಶಿಕ್ಷಣ ಕಾರ್ಯಕ್ರಮ 'ಸಿಸ್ಟಮ್ಯಾಟಿಕ್ ಟ್ರೈನಿಂಗ್ ಅಂಡ್ ಎಜುಕೇಶನ್ ಪ್ರೊಗ್ರಾಂ'ಗಾಗಿ ಅರ್ಜಿಗಳನ್ನು ಆಹ್ವಾನಿಸಿದೆ. 3 ವರ್ಷಗಳ ತರಬೇತಿ ಕಾರ್ಯಕ್ರಮದಲ್ಲಿ ಕೆಲಸದೊಂದಿಗೆ ತರಬೇತಿಯಲ್ಲದೆ, ಇಂದಿರಾಗಾಂಧಿ ವಿಶ್ವವಿದ್ಯಾಲಯ ಪ್ರವಾಸೋದ್ಯಮ ಪದವಿಯಾದ ಬ್ಯಾಚುಲರ್ ಆಫ್ ಟೂರಿಸಂ ಸ್ಟಡೀಸ್‌ಗಾಗಿ ಅವಕಾಶ ಕಲ್ಪಿಸಲಿದೆ. ಜತೆಗೆ ವಿದ್ಯಾರ್ಥಿಗಳು ತಮ್ಮ ಪದವಿಗಾಗಿ ಅಧ್ಯಯನ ನಡೆಸಲು ಸಮಯಾವಕಾಶ ಮಾಡಿಕೊಡಲಾಗುತ್ತದೆ. ಪದವಿ ಹೊಂದಿದ ವಿದ್ಯಾರ್ಥಿಗಳು ಓಬೆರಾಯ್ ಗ್ರೂಪ್‌ನಲ್ಲಿ ಫರ್ಸ್ಟ್ ಎಕ್ಸಿಕ್ಯೂಟಿವ್ ಉದ್ಯೋಗ ಪಡೆಯಬಹುದಾಗಿದೆ. ಏ. 7ರವರೆಗೆ ಪ್ರವೇಶಾವಕಾಶವಿದ್ದು, ಜೂನ್‌ನಲ್ಲಿ ತರಬೇತಿ ಕಾರ್ಯಕ್ರಮ ಆರಂಭಗೊಳ್ಳಲಿದೆ. 12ನೇ ತರಗತಿ ಪಾಸಾಗಿರುವ 17ರಿಂದ 20ವರ್ಷದ ಒಳಗಿನವರು, ಶಿಕ್ಷಣ ಪ್ರದರ್ಶನ ಶೇ. 50ಸರಾಸರಿ ಮತ್ತು ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಇಂಗ್ಲೀಷ್‌ನಲ್ಲಿ ಶೇ. 55ರಷ್ಟು ಅಂಕ ಪಡೆದಿರುವವರು ಅರ್ಜಿ ಸಲ್ಲಿಸಬಹುದು. ಹೆಚ್ಚಿನ ಮಾಹಿತಿಗೆ- ಢಿಢಿಢಿ.್ಟಛಿಝ್ಠ್ಟ್ಝ್ಟಡಿಜಟಡ.್ಛ್ಟಟ ರಲ್ಲಿ ಸಂದರ್ಶಿಸಿ.



ಆ್ಯಸಸ್‌ನಿಂದ ಮೆಮೋಪ್ಯಾಡ್ ಬಿಡುಗಡೆ
ಜಾಗತಿಕ ಕ್ಷೇತ್ರದಲ್ಲಿ ಅಗ್ರಗಣ್ಯ ಸ್ಥಾನ ಹೊಂದಿರುವ ಆ್ಯಸಸ್ ಸಂಸ್ಥೆ ಮೆಮೋಪ್ಯಾಡ್ ಬಿಡುಗಡೆಗೊಳಿಸಿದೆ. ಮೃದು ಬ್ರೌಸಿಂಗ್ ಅನುಭವ ಹೊಂದಿರುವ ಹಾಗೂ ಉತ್ತಮ ಗುಣಮಟ್ಟದೊಂದಿಗೆ ಕೈಗೆಟುಕುವ ಬೆಲೆಯಲ್ಲಿ ಉತ್ಪನ್ನಗಳು ಗ್ರಾಹಕರಿಗೆ ಲಭ್ಯ.
ಟ್ಯಾಬ್ಲೆಟ್ ಮಾರುಕಟ್ಟೆಯಲ್ಲಿ 5 ಸಾವಿರದಿಂದ 10ಸಾವಿರಗಳಲ್ಲಿ 7 ಇಂಚಿನ ಮೆಮೋ ಪ್ಯಾಡ್ ತನ್ನದೇ ವೈಶಿಷ್ಟ್ಯ ಹೊಂದಿದ ಕಂಪನಿಯ ವಿಭಾಗದಲ್ಲಿ ಮೊದಲ ಟ್ಯಾಬ್ಲೆಟ್ ಆಗಿದೆ. ಅತ್ಯಂತ ಕಡಿಮೆ ತೂಕ ಹೊಂದಿರುವ ಇದು, ಶುಗರ್ ವೈಟ್, ಟಿಟಾನಿಯಂ ಗ್ರೇ ಮತ್ತು ಚೆರ್ರಿ ಪಿಂಕ್ ಬಣ್ಣಗಳಲ್ಲಿ ಮಾರುಕಟ್ಟೆಯಲ್ಲಿ ದೊರೆಯಲಿದೆ. ಮೆಮೋಪ್ಯಾಡ್ ಎಂಈ 172ವಿ ಆನಂದದ ಜತೆ ಸಾಮಾಜಿಕ ತಾಣವಾಗಿ ಕಾರ್ಯನಿರ್ವಹಿಸಲಿದೆ. ವಿಡಿಯೋ, ಬ್ರೌಸರ್,  ಕೌಂಟ್‌ಡೌನ್, ಬುಡ್ಡಿಬುಜ್ ಸೇರಿದಂತೆ ಗೆಳೆಯರ ನಡುವೆ ಉತ್ತಮ ಬಾಂಧವ್ಯ ಹೊಂದುವಂತೆ ಮಾಡಿದೆ. ಭಾರತದ ಮಾರುಕಟ್ಟೆಯಲ್ಲಿ ಆ್ಯಸಸ್ ಮೆಮೋ ಪ್ಯಾಡ್ ಬೆಲೆ 9,999.


ಜಲಸ್ 21ರಿಂದ ಪೆಪ್ಪರ್ ಸ್ಪ್ರೇ
ಭಾರತದಲ್ಲಿ ಮಹಿಳಾ ಉಡುಪುಗಳ ಬ್ರಾಂಡ್ ಆಗಿರುವ ಮತ್ತು ಜೀನ್ಸ್ ಮಾರುಕಟ್ಟೆಯಲ್ಲಿ ವಿಭಿನ್ನ ಕಾನ್ಸೆಪ್ಟ್ ಆಗಿರುವ ಜಲಸ್ 21 ಕಂಪನಿ ತನ್ನ ಸ್ಟೋರ್‌ಗಳಲ್ಲಿ ಪ್ರತಿ ಜೋಡಿ ಜೀನ್ಸ್ ಖರೀದಿ ಮಾಡಿದ ಗ್ರಾಹಕರಿಗೆ ಉಚಿತ ಪೆಪ್ಪರ್ ಸ್ಪ್ರೇ ಕೊಡುಗೆ ನೀಡುತ್ತಿದೆ. ಜಲಸ್ 21ರ ಈ ಕೊಡುಗೆ ಭಾರತೀಯ ಮಹಿಳೆಯರಿಗೆ ಎದುರಾಗುತ್ತಿರುವ ಅನಿರೀಕ್ಷಿತ, ಅಹಿತಕರ ಘಟನೆಯನ್ನು ಸಂಭಾಳಿಸುವ ಕುರಿತು ಅವರಲ್ಲಿ ಜಾಗೃತಿ ಮೂಡಿಸುವುದು ಮತ್ತು ಭಾರತೀಯ ಮಹಿಳೆಯರ ಸುರಕ್ಷತೆಯನ್ನು ಇನ್ನಷ್ಟು ಹೆಚ್ಚಿಸುವ ಗುರಿ ಹೊಂದಿದೆ ಎಂದು ಕಂಪನಿ ಹೇಳಿಕೊಂಡಿದೆ. ಜಲಸ್ 21 ಪೆಪ್ಪರ್ ಸ್ಪ್ರೇಯನ್ನು ಅಧಿಕೃತ ಅಂಗಡಿಗಳಿಂದ ಕಾನೂನು ಬದ್ಧವಾಗಿ ಪಡೆಯಬಹುದಾಗಿದೆ. ಈ ಉತ್ಪನ್ನವು ಕಾನೂನಾತ್ಮಕ ಮತ್ತು ಸುರಕ್ಷಿತವಾಗಿದ್ದು, ಯಾವುದೇ ಶಾಶ್ವತ ಗಾಯ ಅಥವಾ ಹಾನಿ ಉಂಟುಮಾಡದ ರೀತಿಯಲ್ಲಿದ್ದು, ಹೆಣ್ಣು ಮಕ್ಕಳು ತಮ್ಮ ರಕ್ಷಣೆಗಾಗಿ ಇದನ್ನು ಉಪಯೋಗಿಸಬಹುದಾಗಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com