ಸೌದಿ ಅರೇಬಿಯಾಕ್ಕೆ ಪ್ರಯಾಣ ಮಾಡುವವರಿಗೆ ರಿಲಯನ್ಸ್ ಕಮ್ಯುನಿಕೇಷನ್ ಹೊಸ ಪೋಸ್ಟ್- ಪೆಯ್ಡ್ ಯೋಜನೆ ಆರಂಭಿಸಿದೆ. ಪ್ರತಿ ತಿಂಗಳ ಶುಲ್ಕ 786ಕ್ಕೆ ವಾಯ್ಸ್ ಮತ್ತು ಡೇಟಾ ಬಳಕೆಯಲ್ಲಿ ಉಳಿತಾಯ ಮಾಡುವ ಅವಕಾಶ ಇದೆ. ಅಂದರೆ ಶೇ.84ರಷ್ಟು ಉಳಿತಾಯ, 24 ಪೈಸೆ ವೆಚ್ಚದಲ್ಲಿ 10 ಕೆಬಿ ಡೇಟಾ ಬಳಕೆ ಮಾಡಬಹುದು. ಪ್ರಯಾಣದ ವೇಳೆ ಗ್ರಾಹಕರು ತಮ್ಮ ಹಾಲಿ ಮೊಬೈಲ್ ನಂಬರ್ ಅನ್ನು ಉಳಿಸಿಕೊಳ್ಳಲು ಅವಕಾಶ ಉಂಟು ಎನ್ನುವುದು ಕಂಪನಿ ಹೇಳಿಕೆ.