

ಹದಿಮೂರು ವರ್ಷಗಳ ಹಿಂದಿನ ಮಾತು. ದೇಶದಲ್ಲಿ ಕಾಲ್ಸೆಂಟರ್ಗಳು ಆರಂಭವಾದ ದಿನಮಾನಗಳು. ಕೊಂಚ ಇಂಗ್ಲಿಷ್ ಭಾಷೆ ಮೇಲೆ ಹಿಡಿತ ಇದ್ದಿದ್ದರೆ ಸಾಕಿತ್ತು, ಸುಲಭವಾಗಿ ಕೆಲಸ ಸಿಗುತ್ತಿತ್ತು. ಆದರೆ, ಈಗ ಪರಿಸ್ಥಿತಿ ಬದಲಾಗಿದೆ. ಕಾಲ್ಸೆಂಟರ್ಗಳು ಹಿಂದಿನ ರೀತಿಯಲ್ಲಿಲ್ಲ. ಹಣಕಾಸು ಕ್ಷೇತ್ರದ ಏರಿಳಿತಗಳು ಅವುಗಳಿಗೂ ಹೊಡೆತ ನೀಡಿವೆ.
ಬದಲಾದ ಪರಿಸ್ಥಿತಿಗೆ ತಕ್ಕಂತೆ ಹೊಂದಿಕೊಂಡವು ಉಳಿದುಕೊಂಡವು. ಬಾಕಿ ಬಾಗಿಲೆಳೆದುಕೊಂಡವು. ವ್ಯಾಪಾರ ವಹಿವಾಟು ಹೊರಗುತ್ತಿಗೆಗಳು (ಬಿಪಿಒ) ಇಂದು ವ್ಯಾಪಾರ ವಹಿವಾಟು ನಿರ್ವಹಣೆ (ಬಿಪಿಎಂ) ಗಳಾಗಿ ಮಾರ್ಪಡುತ್ತಿವೆ. ಕೈಗಾರಿಕೆಗಳು ಕೇವಲ ಕೆಲಸಗಾರರನ್ನು ನಂಬಿ ಕೂತಿಲ್ಲ. ಅದರ ಬದಲು ವಕೀಲರು, ವೈದ್ಯರು, ಸಂಖ್ಯಾಶಾಸ್ತ್ರಜ್ಞರು, ಸಂಶೋಧಕರು, ಲೆಕ್ಕಾಧಿಕಾರಿಗಳಿಗಳಿಗೆ ಅವಕಾಶ ನೀಡುತ್ತಿವೆ.
10 ಲಕ್ಷ ಮಂದಿ
ಇಂದು ಬಿಪಿಎಂ ವಲಯದಲ್ಲಿ 10 ಲಕ್ಷ ಮಂದಿ ಕಾರ್ಯನಿರ್ವಹಿಸುತ್ತಿದ್ದಾರೆ. ಅದರಲ್ಲಿ ಭೂ ತಜ್ಞರು, ಕಾನೂನು ವಿಶ್ಲೇಷಣಾಕಾರರಂತೆ ವೈದ್ಯರು, ವಕೀಲರಂತೆ ಪ್ರವೃತ್ತಿಯಾಗಿಸಿಕೊಂಡಿರುವವರೇ ಶೇ.34ರಷ್ಟು ಇದ್ದಾರೆ. ಅಲ್ಲದೆ ಇವರು ಇನ್ನೂ ಹೆಚ್ಚಾಗುವ ಸಾಧ್ಯತೆಗಳಿವೆ. ಏಕೆಂದರೆ, ಹೊರದೇಶಗಳಲ್ಲಿ ತಗಲುವ ವೆಚ್ಚಕ್ಕಿಂತ ಶೇ.30ರಷ್ಟು ಹಣ ಸಹ ಕಡಿಮೆಯಾಗಲಿದೆ. ಯುರೋಪ್ನಲ್ಲಿ ಇದಕ್ಕಾಗಿಯೇ ಇರುವ ತಜ್ಞರ ಕೆಲಸವನ್ನು ಭಾರತದಲ್ಲಿ ಪ್ರವೃತ್ತಿಯಾಗಿಕೊಂಡಿವವರೇ ಕೆಲಸ ನಿರ್ವಹಿಸುತ್ತಿರುವುದರಿಂದ ಗ್ರಾಹಕರಿಗೆ ಶೇ.30ರಷ್ಟು ವೆಚ್ಚ ಸಹ ಕಡಿಮೆಯಾಗುತ್ತಿದೆ.
ಕೈಗಾರಿಕಾ ಅಸೋಸಿಯೇಶನ್ ಹೇಳುವ ಹಾಗೆ, ಪ್ರಸ್ತುತ ಭಾರತದಲ್ಲಿ 1.3 ಲಕ್ಷ ಕೋಟಿ ಇರುವ ಬಿಪಿಎಂ ವಲಯ 2020ರಷ್ಟರಲ್ಲಿ ವಲಯದ ಆದಾಯ ರು. 3.1 ಲಕ್ಷ ಕೋಟಿಗೆ ದಾಟುವ ಸಾಧ್ಯತೆ ಇದೆ.
ಭಾರತಕ್ಕೇನು ಲಾಭ?