ಮಧುಮೇಹಿಗಳಿಗೆ ಕೆನರಾ ಬ್ಯಾಂಕ್ 'ಸಿಹಿ'

ಕೆನರಾ ಬ್ಯಾಂಕ್ ಎನರ್ಜಿ ಟೈಪ್2 ಮಧುಮೇಹದಿಂದ ಬಳಲುತ್ತಿರುವವರಿಗಾಗಿ ಆರೋಗ್ಯ ವಿಮಾ ಯೋಜನೆ ಪ್ರಾರಂಭಿಸಿದೆ.
ಮಧುಮೇಹಿಗಳಿಗೆ ಕೆನರಾ ಬ್ಯಾಂಕ್ 'ಸಿಹಿ'
Updated on: 

ಕೆನರಾ ಬ್ಯಾಂಕ್ ಎನರ್ಜಿ ಟೈಪ್2 ಮಧುಮೇಹದಿಂದ ಬಳಲುತ್ತಿರುವವರಿಗಾಗಿ ಆರೋಗ್ಯ ವಿಮಾ ಯೋಜನೆ ಪ್ರಾರಂಭಿಸಿದೆ. ಎನರ್ಜಿ ಮಧುಮೇಹವನ್ನು ನಿಭಾಯಿಸಲು ಪಾಲಿಸಿದಾರರಿಗೆ ನೆರವು ನೀಡುವ ಯೋಜನೆ
ಇದಾಗಿದ್ದು, ದೇಶದ ಎಂಟು ನಗರಗಳಲ್ಲಿ ಈ ಕೊಡುಗೆ ಲಭ್ಯ. ಆರೋಗ್ಯ ವಿಮಾ ಸಂಸ್ಥೆ ಅಪೊಲೋ ಮ್ಯೂನಿಕ್ ಹೆಲ್ತ್ ಇನ್ಶೂರೆನ್ಸ್, ಈ ಎನರ್ಜಿ ಯೋಜನೆಯನ್ನು 2013ರಲ್ಲಿ ಆರಂಭಿಸಿದೆ. ಅದನ್ನು ಕೆನರಾಬ್ಯಾಂಕ್ ತನ್ನ ಗ್ರಾಹಕರಿಗೆ ಒದಗಿಸಲಿದೆ.
ತನ್ನ ಗ್ರಾಹಕರಿಗೆ ಎನರ್ಜಿಯನ್ನು ಕೊಡುಗೆಯಾಗಿ ನೀಡುವಲ್ಲಿ ಕೆನರಾ ಬ್ಯಾಂಕ್ ಪ್ರಥಮ ಬ್ಯಾಂಕ್ ಎಂದು ಹೇಳಲು ಹರ್ಷವಾಗುತ್ತದೆ. ಗ್ರಾಹಕರು ಜೀವನದುದ್ದಕ್ಕೂ ಬಳಸಬಲ್ಲ ಸೂಕ್ತ ಆಸ್ತಿ ನಿರ್ವಹಣೆ ಉಪಕರಣಗಳೊಂದಿಗೆ ಹೆಚ್ಚುವರಿಯಾಗಿ ಅವರ ಆರೋಗ್ಯ ಆರೈಕೆ ಮಾಡುವಲ್ಲಿ ಸಹಾಯ ಮಾಡುವ ಉದ್ದೇಶ ನಮ್ಮದು. ಎನರ್ಜಿ ಒಂದು ಪ್ರಮುಖ ಆರೋಗ್ಯ ವಿಮೆ ಅಲ್ಲದೆ ಟೈಪ್2 ಮಧುಮೇಹದಿಂದ ಬಳಲುತ್ತಿರುವವರಿಗೆ ಆರೋಗ್ಯ ಸ್ಥಿತಿ ನಿಭಾಯಿಸಿಕೊಳ್ಳಲು ಸೌಖ್ಯತೆ ಉಪಕರಣ ಇದು ಎಂದು ನಾವು ನಂಬಿದ್ದೇವೆ ಎಂದು ಕೆನರಾಬ್ಯಾಂಕ್ ಅಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕ ಆರ್.ಕೆ. ದುಬೆ ತಿಳಿಸಿದ್ದಾರೆ.
ಭಾರತದಲ್ಲಿ ಮಧುಮೇಹದಿಂದ ಬಳಲುತ್ತಿರುವ ಲಕ್ಷಾಂತರ ಜನರಿಗೆ ಅಪೊಲೊ ಮ್ಯೂನಿಕ್ ಈ ಉತ್ಪನ್ನವನ್ನು ಪ್ರಸ್ತುತಪಡಿಸುತ್ತಿರುವುದಕ್ಕೆ ನಮಗೆ ಹೆಮ್ಮೆ. ವಿಮೆ ಮತ್ತು ಸೌಖ್ಯತೆ ವ್ಯವಸ್ಥೆಯೊಂದಿಗೆ ಮಧುಮೇಹವನ್ನು ಉತ್ತಮವಾಗಿ ನಿಯಂತ್ರಿಸುವಲ್ಲಿ ಎನರ್ಜಿ ಸಹಾಯ ಮಾಡುತ್ತದೆ ಎಂದು ಅಪೊಲೋ ಮ್ಯೂನಿಕ್ ಹೆಲ್ತ್ ಇನ್ಶೂರೆನ್ಸ್‌ನ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಅಂತೋನಿ ಜೋಕಬ್ ಹೇಳಿದ್ದಾರೆ. ಎನರ್ಜಿ ಪಾಲಿಸಿ ಖರೀದಿಸುವ ಕೆನರಾಬ್ಯಾಂಕ್ ಗ್ರಾಹಕರು ಅಪೊಲೋ ಮ್ಯೂನಿಕ್‌ನ ಆಸ್ಪತ್ರೆಗಳು ಮತ್ತು ಕ್ಲಿನಿಕ್‌ಗಳಲ್ಲಿ ಪಾಲಿಸಿ ಮುಂಚಿನ ಪರೀಕ್ಷೆ, ಸೌಖ್ಯತೆ, ತಪಾಸಣೆ ಹಾಗೂ ಚಿಕಿತ್ಸೆ ಪಡೆಯಲಿದ್ದಾರೆ.

ವಿಡಿಯೋಕಾನ್ ಡಿಟಿಎಚ್‌ನಲ್ಲಿ 4 ಕನ್ನಡ ಚಾನೆಲ್
ವಿಡಿಯೋಕಾನ್ ಡಿಟಿಎಚ್‌ನಲ್ಲಿ ಕನ್ನಡದ 4 ಹಾಗೂ ಮಲಯಾಳಂನ 3 ಚಾನೆಲ್‌ಗಳು ಹೆಚ್ಚುವರಿಯಾಗಿ ಸೇರ್ಪಡೆಯಾಗಿವೆ. ಕನ್ನಡ ಚಾನೆಲ್‌ಗಳ ಪಟ್ಟಿಯಲ್ಲಿ ಜನಶ್ರೀ, ಸಮಯ, ಉದಯ ನ್ಯೂಸ್ ಮತ್ತು ಚಿಂಟು ಟಿವಿ ಸೇರಿಕೊಂಡಿದೆ. ಮಲಯಾಳಂ ಪಟ್ಟಿಯಲ್ಲಿ ರಿಪೋರ್ಟರ್ ಟಿವಿ, ಗುಡ್‌ನೆಸ್ ಟಿವಿ ಮತ್ತು ಸೂರ್ಯ ಮ್ಯೂಸಿಕ್ ಸೇರಿದೆ. ಕಳೆದ ನಾಲ್ಕು ವರ್ಷಗಳಲ್ಲಿ ಡಿಟಿಎಚ್ ಉದ್ಯಮ ಅಮೋಘವಾಗಿ ಬೆಳೆದಿದೆ. ವಿಡಿಯೋಕಾನ್ ಈಗ ಹೆಚ್ಚು ಸಂಪರ್ಕ ಹೊಂದಿರುವ ಯಶಸ್ಸಿನ ಹಾದಿಯಲ್ಲಿದೆ. ಹೆಚ್ಚಿನ ಚಾನೆಲ್‌ಗಳು ಹಾಗೂ ಸೇವೆಗಳು, ಹೈ ಡೆಫಿನೇಷನ್ ಸೇವೆಗಳು, ತೃಪ್ತಿದಾಯಕ ಗ್ರಾಹಕ ಸೇವೆಗಳು ಈ ಯಶಸ್ಸಿಗೆ ಸಹಾಯಕವಾಗಿವೆ. ಹೈ ಡಿಫಿನೇಷನ್ ವರ್ಗಗಳಲ್ಲಿ ವಿಡಿಯೋಕಾನ್ ಡಿಟಿಎಚ್ ಉದ್ಯಮದಲ್ಲಿ ಮೇರು ಸ್ಥಾನ ಗಳಿಸಿದೆ ಎಂದು ಸಂಸ್ಥೆಯ ನಿರ್ದೇಶಕ ಸೌರಬ್ ಧೂತ್ ಹೇಳಿದ್ದಾರೆ.

ಏವಿಯೇಟರ್‌ಗೆ ಚಾಲನೆ
ವ್ಯಾಪಾರಿ ಪರಿಹಾರ ವಹಿವಾಟು ನಿಭಾಯಿಸುವ ಕಂಪನಿ ಅಸೆಂಡಾಸ್ ಬೆಂಗಳೂರಿನ ಅಂತಾರಾಷ್ಟ್ರೀಯ ಟೆಕ್ ಪಾರ್ಕ್‌ನಲ್ಲಿ 'ಏವಿಯೇಟರ್‌' ಎಂಬ ಹೊಸ ಕಟ್ಟಡಕ್ಕೆ ಚಾಲನೆ ನೀಡಿದೆ. ಅಸೆಂಡಾಸ್ ಪ್ರಾಪರ್ಟಿ ಫಂಡ್ ಟ್ರಸ್ಟ್ ವತಿಯಿಂದ ಈ ಕಟ್ಟಡ ಸುಮಾರು 2.5 ಎಕರೆ ಪ್ರದೇಶದಲ್ಲಿ 6,01,360 ಚದರ ಅಡಿಯಲ್ಲಿ ಎರಡು ಕಂಪನಿಗಳಿಗೆ ಅನುವು ಮಾಡಿಕೊಡುತ್ತದೆ. ಸಿಂಗಾಪುರದ ಮಾ ಸಿಗ್ಮಾ ಬಿಸಿನೆಸ್ ಸಲ್ಯೂಷನ್ಸ್ ಹಾಗೂ ಅಫಿಲಿಯೇಟೆಡ್ ಕಂಪ್ಯೂಟರ್ ಸರ್ವಿಸ್ ಲಿ., ಎಂಬ ಜೆರಾಕ್ಸ್ ಕಂಪನಿ ಇಲ್ಲಿ ಬರಲಿವೆ. ಇದಲ್ಲದೆ ಸುಮಾರು ಆರು ಸಾವಿರಕ್ಕೂ ಹೆಚ್ಚು ಮಂದಿಗೆ ಕೆಲಸ ನಿರ್ವಹಿಸಲು ಅನಕೂಲ ಕಲ್ಪಿಸಲಾಗಿದ್ದು, ಇಂಡಿಯನ್ ಗ್ರೀನ್ ಬಿಲ್ಡಿಂಗ್ ಕೌನ್ಸಿಲ್‌ನಿಂದ ಗೋಲ್ಡ್ ಲೀಡ್ ರೇಟಿಂಗ್ ಪಡೆದಿದೆ. ಕೇಂದ್ರದ ಪಿಎಂಒ ಎಸ್. ಈಶ್ವರನ್ ಈ ಕಟ್ಟಡಕ್ಕೆ ಚಾಲನೆ ನೀಡಿದರು ಎಂದು ಪ್ರಕಟಣೆ ತಿಳಿಸಿದೆ.

 ವಿಷನ್ ಎಕ್ಸ್‌ಪ್ರೆಸ್‌ನಿಂದ ಕ್ರೋಮಾ
ಪ್ರೇಮಿಗಳ ದಿನಾಚರಣೆ ಅಂಗವಾಗಿ ವಿಷನ್ ಎಕ್ಸ್‌ಪ್ರೆಸ್ ಕ್ರೋಮಾ ಸಂಗ್ರಹವನ್ನು ಬಿಡುಗಡೆ ಮಾಡಿದೆ. ಇವು ಆಕರ್ಷಕ ಸನ್‌ಗ್ಲಾಸ್‌ಗಳಾಗಿದ್ದು, ಕಲಾತ್ಮಕ ಫ್ರೇಮ್ ವಿನ್ಯಾಸಹೊಂದಿವೆ. ಶೇ.100ರಷ್ಟು ಯುವಿ ರಕ್ಷಣೆ ನೀಡುವ ಕ್ರೋಮಾ, ಶೇಡೆಡ್ ಬ್ರೈಟ್ ಪಿಂಕ್ ಹಾಗೂ ಗ್ರೀನ್-ಎನ್-ಬ್ರೌನ್ ಸನ್‌ಗ್ಲಾಸ್‌ಗಳು ಲಭ್ಯ. 399ರಿಂದ 1399ರವರ ದರದಲ್ಲಿ ಈ ಸನ್‌ಗ್ಲಾಸ್‌ಗಳು ಲಭ್ಯವಿದ್ದು, ಪೋಲರೈಸ್ಡ್ ಕೋಟಿಂಗ್‌ನೊಂದಿಗೂ ಲಭ್ಯ.

 ವಿ-ಗಾರ್ಡ್ ತ್ರೈಮಾಸಿಕ ವಹಿವಾಟು ಲಾಭ ಏರಿಕೆ
ಪ್ರಮುಖ ಎಲೆಕ್ಟ್ರಾನಿಕ್ ಮತ್ತು ಎಲೆಕ್ಟ್ರಿಕಲ್ ಕಂಪನಿ ವಿ-ಗಾರ್ಡ್ ಇಂಡಸ್ಟ್ರೀಸ್ 2013-14ರ ಮೂರನೇ  ತ್ರೈಮಾಸಿಕದಲ್ಲಿ ವಹಿವಾಟು ಲಾಭಯದಲ್ಲಿ ಶೇ.14ರಷ್ಟು ಏರಿಕೆ ಸಾಧಿಸಿದೆ. ತೆರಿಗೆ ನಂತರದ ಲಾಭ 17.53 ಕೋಟಿಯಾಗಿದ್ದು, ಕಳೆದ ವರ್ಷ 15.35 ಕೋಟಿ ಆಗಿತ್ತು. ಮೂರನೇ ತ್ರೈಮಾಸಿಕದಲ್ಲಿ ಕಾರ್ಯಾಚರಣೆ ಲಾಭಗಳಿಂದ ನಿವ್ವಳ ಆದಾಯ 352.93 ಕೋಟಿಯಾಗಿದ್ದು, ಕಳೆದ ವರ್ಷ 349.04 ಕೋಟಿಯಾಗಿತ್ತು. ಸೌರ ಮತ್ತು ನೀರು ಕಾಯಿಸುವ ಉತ್ಪನ್ನಗಳ ಮಾರಾಟ ದೃಢವಾಗಿದ್ದು, ಹೊಸದಾಗಿ ಮಾರುಕಟ್ಟೆಗೆ ಬಿಡುಗಡೆಯಾದ ಪೆಬಲ್ ಎಲೆಕ್ಟ್ರಿಕ್ ವಾಟರ್‌ಹೀಟರ್ ದಕ್ಷಿಣ ಭಾರತದ ಅತ್ಯಂತ ಯಶಸ್ವಿ ಮಾರಾಟ ಕಂಡಿದೆ ಎಂದು ಸಂಸ್ಥೆ ವ್ಯವಸ್ಥಾಪಕ ನಿರ್ದೇಶಕ ಮಿಥುನ್ ಕೆ. ಚಿಟ್ಟಿಲಪಲ್ಲಿ ತಿಳಿಸಿದ್ದಾರೆ.

 ಪ್ರೇಮಿಗಳಿಗಾಗಿ 'ತಮರಾ ಕೂರ್ಗ್‌'
ಪ್ರೇಮಿಗಳ ದಿನವನ್ನು ಹೆಚ್ಚು ವಿಶೇಷವಾಗಿ ಆಚರಿಸಲು ಅನುವಾಗಲು ದಿ ತಮರಾ ಕೂರ್ಗ್ ರೆಸಾರ್ಟ್ ವಿಶೇಷ ಸ್ಪರ್ಧೆಯ ಕೊಡುಗೆಯನ್ನು ಆಯೋಜಿಸಿದೆ. ದಿ ತಮರಾ ಕೂರ್ಗ್ ಪ್ರೇಮಿಗಳ ದಿನಾಚರಣೆಯಂದು ಫೇಸ್‌ಬುಕ್‌ನಲ್ಲಿ ವಿಶೇಷ ಸ್ಪರ್ಧೆ ಆಯೋಜಿದೆ. ಅಲ್ಲಿ ನಿಮ್ಮ ಪ್ರೇಮ ಜೀವನದ ಅತ್ಯಂತ ಪ್ರೇಮಮಯ ಕ್ಷಣಗಳನ್ನು ವಿವರಿಸಬೇಕು. ಅದೃಷ್ಟಶಾಲಿ ವಿಜೇತರಿಗೆ ವಿಶೇಷ ಗಿಫ್ಟ್ ಹ್ಯಾಂಪರ್‌ನೀಡುತ್ತದೆ. ಇದಲ್ಲದೆ, ಕೊಡಗಿನಲ್ಲಿರುವ ತನ್ನ ರೆಸಾರ್ಟ್‌ನಲ್ಲಿ ವಿಶೇಷ ಪ್ಯಾಕೇಜ್ ಕೊಡುಗೆ ನೀಡುತ್ತಿತ್ದು, ಲೈವ್ ಬ್ಯಾಂಡ್, ಕ್ಯಾಂಡಲ್ ಲೈಟ್ ಡಿನ್ನರ್, ಡ್ಯಾನ್ಸ್ ಫ್ಲೋರ್‌ನಲ್ಲಿ ಸಾಲ್ಸಾ ನೃತ್ಯಗಳಿಗೂ ಅವಕಾಶಕಲ್ಪಿಸಿದೆ. ಹೆಚ್ಚಿನ ವಿವರಗಳಿಗೆ ವೆಬ್‌ಸೈಟ್- www.thetamara.com ಮತ್ತು www.facebook.com/thetamaracoorg  ಸಂಪರ್ಕಿಸಬಹುದು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com