ಜಿಡಿಪಿ ಮೋಡಿ

ಜಿಡಿಪಿ ಮೋಡಿ
Updated on: 

ದೇಶದ ಕಾರ್ಪೊರೇಟ್ ವಲಯದಲ್ಲಿ ಈಗ ಹೊಸ ವಾತಾವರಣ ತುಂಬಿದೆ. ಮಾತ್ರವಲ್ಲದೆ ಹೊಸತನ ನೀಡಲು ಸಿದ್ಧಮಾಡಿಕೊಂಡಿದೆ. ಕಳೆದ ಐದು ವರ್ಷಗಳಲ್ಲಿ ಉಂಟಾಗಿದ್ದ ಬೆಳವಣಿಗೆ ದೇಶದ ಕಾರ್ಪೊರೇಟ್ ವಲಯದಲ್ಲಿ ಕರಿಛಾಯೆ ಮೂಡಿಸಿತ್ತು. ಹೀಗಾಗಿ ಹಲವು ಕಂಪನಿಗಳ ಸಾಧನೆ ಮೇಲೆ ಕೂಡ ಪ್ರತಿಕೂಲ ಪರಿಣಾಮ ಬೀರಿತ್ತು. 2012-13ನೇ ಸಾಲಿನ ವಿತ್ತೀಯ ವರ್ಷದಲ್ಲಿ ಕಂಪನಿಗಳ ಸಾಧನೆ ಶೇ.5ಕ್ಕೆ ಇಳಿದಿತ್ತು. ಇದು ದೇಶದ ಕಾರ್ಪೊರೇಟ್ ಸಂಸ್ಥೆಗಳ ಇತಿಹಾಸದಲ್ಲಿ ಅತ್ಯಂತ ಕನಿಷ್ಠ ಸಾಧನೆಯಾಗಿದೆ.
ಕಡಿಮೆ ಪ್ರಮಾಣದ ಜಿಡಿಪಿ ಬೆಳವಣಿಗೆ ಕೂಡ ಕನಿಷ್ಠ ಕಾರ್ಪೊರೇಟ್ ಸಾಧನೆಗೆ ಕಾರಣವಾಗಿದೆ ಎಂದರೆ ತಪ್ಪಾಗಲಾರದು. ಇಂಥ ಒಂದು ಬೆಳವಣಿಗೆ ದೇಶದ ಮಾರುಕಟ್ಟೆಯಲ್ಲಿ ಇದೇ ಮೊದಲು ಎನ್ನಬಹುದೇನೋ.
ಹೊಸ ಸರ್ಕಾರ ಬರುತ್ತದೆ ಎಂಬ ಸೂಚನೆ ಬರುತ್ತಿದ್ದಂತೆಯೇ ಎಲ್ಲ ಸಮಸ್ಯೆಗಳು ಪರಿಹಾರವಾಗುತ್ತದೆ ಎಂಬ ಯೋಚನೆ ಕಾರ್ಪೊರೇಟ್ ವಲಯಗಳಲ್ಲಿ ಮೂಡಿತ್ತು. ಅದಕ್ಕೆ ಪೂರಕವಾಗಿ 1984ರ ಬಳಿಕ ಇದೇ ಮೊದಲ ಬಾರಿಗೆ ಸ್ವತಂತ್ರವಾಗಿ ರಾಜಕೀಯ ಪಕ್ಷವೊಂದು ಅಧಿಕಾರ ವಹಿಸಿಕೊಂಡಿದೆ. ಹೀಗಾಗಿ ಈ ಬಾರಿ ಕೈಗಾರಿಕೋದ್ಯಮಿಗಳು ಮತ್ತು ಉದ್ದಿಮೆ ವಲಯದಲ್ಲಿ ಸಹಜವಾಗಿಯೇ ಹೆಚ್ಚಿನ ನಿರೀಕ್ಷೆ ಇದೆ.
ಈಗ ಕೊಂಚ ಹಿಂದಿನ ವರ್ಷಗಳ ಆರ್ಥಿಕ ಸಾಧನೆಗಳ ಬಗ್ಗೆ ಗಮನಿಸೋಣ. 2006-2007 ಹಣಕಾಸು ವರ್ಷದಲ್ಲಿ ಶೇ.9ರಷ್ಟು ಬೆಳವಣಿಗೆ ಕುಸಿದು ಹೋಗಿತ್ತು. ಯಾವುದೇ ದೇಶದ ಅರ್ಥವ್ಯವಸ್ಥೆ ತನ್ನದೇ ಆದ ಸಾಮರ್ಥ್ಯವನ್ನು ಅದು ತಿಳಿದುಕೊಳ್ಳಬೇಕು. ಇಂಥ ಬೆಳವಣಿಗೆಯಾದಾಗ ನಮ್ಮ ದೇಶದ ಕಾರ್ಪೊರೇಟ್ ಕಂಪನಿಗಳು ಹೆಚ್ಚು ವೈಭವಯುತವಾಗಿ ಬೆಳೆಯುತ್ತವೆ. ಜತೆಗೆ ಅವುಗಳ ಕಾರ್ಯನಿರ್ವಹಣಾ ಶೈಲಿಯಲ್ಲಿಯೂ ಹೆಚ್ಚಿನ ಪಾರದರ್ಶಕತೆಯಿಂದ ಕೂಡಿರುತ್ತದೆ. ಕೇಂದ್ರ ಹಣಕಾಸು ಸಚಿವರು ಜು.10ರಂದು ಮಂಡಿಸಲಿರುವ ಮುಂಗಡ ಪತ್ರದಲ್ಲಿ ಯಾವ ಕ್ಷೇತ್ರಕ್ಕೆ ಆದ್ಯತೆ ನೀಡಲಿದ್ದಾರೆ ಎಂಬ ವಿಚಾರವೇ ಈಗ ಎಲ್ಲರ ಕುತೂಹಲ ಕೆರಳಿಸಿದೆ.
(ಲೇಖಕರು ಐಸಿಐಸಿಐ ಪ್ರುಡೆನ್ಷಿಯಲ್
ಎಎಂಸಿಯ ಎಂಡಿ ಮತ್ತು ಸಿಇಒ)

= ನಿಮೇಶ್ ಶಾ

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com