ಮಹಿಳೆಯರಿಗೆ ಸ್ಯಾಮ್ಸಂಗ್ ನೆರವು
ಸ್ಯಾಮ್ಸಂಗ್ ಎಲೆಕ್ಟ್ರಾನಿಕ್ಸ್ ಕಂಪನಿ ಭಾರತೀಯ ಮಹಿಳೆಯರಿಗೆ ಹೆಲ್ಪಿಂಗ್ ವುಮೆನ್ ಗೆಟ್ ಆನ್ಲೈನ್ ಮೂಲಕ ಇಂಟರ್ನೆಟ್ ಜಗತ್ತಿಗೆ ಪ್ರವೇಶ ದೊರಕಿಸುವ ಪ್ರಯತ್ನದಲ್ಲಿದೆ. ಮಹಿಳೆಯರು ಇಂಟರ್ನೆಟ್ ಬಳಕೆ ಉಪಯೋಗಗಳನ್ನು ಸುಲಭವಾಗಿ ಅರ್ಥಮಾಡಿಕೊಳ್ಳುವಂತೆ ಮತ್ತು ತಮ್ಮ ದೈನಂದಿನ ಜೀವನದಲ್ಲಿ ಅವುಗಳ ಪ್ರಯೋಜನ ಪಡೆದುಕೊಳ್ಳುವಂತೆ ನೆರವು ನೀಡಲಿದೆ. ಏರ್ಸೆಲ್ ಡಾಟಾ ನೆರವಿನಿಂದ ಸ್ಯಾಮ್ಸಂಗ್ ಮತ್ತು ಗೂಗಲ್ ಮಹಿಳೆಯರಿಗೆ ಇಂಟರ್ನೆಟ್ ತರಬೇತಿ ಕಾರ್ಯಾಗಾರ ನೀಡಲಿದೆ. ಪ್ರತಿ ಮೂವರು ಭಾರತೀಯ ಮಹಿಳೆಯರಲ್ಲಿ ಒಬ್ಬರು ಮಾತ್ರ ಇಂಟರ್ನೆಟ್ ಬಳಸುತ್ತಿದ್ದಾರೆ.ಹೀಗಾಗಿ 12ರಾಜ್ಯಗಳಲ್ಲಿನ ನಗರ, ಪಟ್ಟಣ ಪ್ರದೇಶಗಳ 4ಲಕ್ಷ ಮಹಿಳೆಯರಿಗೆ ಇಂಟರ್ನೆಟ್ ಬಳಕೆ ಜಾಗೃತಿ ಮೂಡಿಸುವ ಗುರಿಯನ್ನು ಹೊಂದಿದೆ. ಮಹಿಳೆಯರು ಖರೀದಿಸುವ ಆಯ್ದ ಸ್ಯಾಮ್ಸಂಗ್ ಸ್ಮಾರ್ಟ್ಫೋನ್ನೊಂದಿಗೆ ಏರ್ಸೆಲ್ 6ತಿಂಗಳ ಕಾಲ 500ಎಂಬಿ ಡಾಟಾವನ್ನು ಉಚಿತವಾಗಿ ಒದಗಿಸಲಿದೆ.
ವಿದ್ಯಾರ್ಥಿಗಳಿಗೆ ಎಮಿರೇಟ್ಸ್ ವಿನಾಯಿತಿ
ವಿದ್ಯಾರ್ಥಿಗಳಿಗಾಗಿ ಎಮಿರೇಟ್ಸ್ ವಿಮಾನಯಾನ ಸಂಸ್ಥೆ ವಿಶೇಷ ಪ್ರಯಾಣದ ಕೊಡುಗೆಗಳನ್ನು ಪ್ರಕಟಿಸಿದೆ. ಹೆಚ್ಚಿನ ವಿದ್ಯಾಭ್ಯಾಸಕ್ಕಾಗಿ ಭಾರತದ ವಿದ್ಯಾರ್ಥಿಗಳು ವಿದೇಶಕ್ಕೆ ತೆರಳುವ ವಿಮಾನ ಪ್ರಯಾಣದ ಶುಲ್ಕದಲ್ಲಿ ಎಮಿರೇಟ್ಸ್ ವಿಮಾನಯಾನ ಸಂಸ್ಥೆ ವಿಶೇಷ ರಿಯಾಯಿತಿ ಅನ್ವಯ. ಸುಮಾರು 10ಕೆಜಿ ತೂಕದ ಸಾಮಗ್ರಿಗಳನ್ನು ಕೊಂಡೊಯ್ಯಲು ಅನುಮತಿ ನೀಡಿದೆ. ಪ್ರಸ್ತುತ ಇರುವ 30ಕೆಜಿ ತೂಕದ ಸಾಮಾನುಗಳ ಜತೆ ಆಫರ್ಗಳನ್ನು ಸಂಸ್ಥೆ ನೀಡಿದೆ. ಅಮೆರಿಕಕ್ಕೆ ತೆರಳುವಾಗ ಮುಂಗಡ ಟಿಕೆಟ್ ಬುಕಿಂಗ್ ಸಮಯದಲ್ಲಿ ಶೇ.10ರಷ್ಟು ಹೆಚ್ಚಿನ ರಿಯಾಯಿತಿ ಪಡೆಯಬಹುದು. ಅವಕಾಶ ಜೂ 25ರಿಂದ ಪ್ರಾರಂಭವಾಗಿದ್ದು, ಅಕ್ಟೋಬರ್ 31ರೊಳಗೆ ಆಯ್ದ ನಗರಗಳಿಗೆ ಮಾತ್ರ ಸೀಮಿತವಾಗಿದೆ. www.emirates.com/in
ಡೊಕೊಮೋದಿಂದ 'ಪವರ್ ದರ'
ಕರ್ನಾಟಕದ ಜಿಎಸ್ಎಂ ಪ್ರಿಪೇಯ್ಡ್ ಗ್ರಾಹಕರಿಗೆ 2 ಸೆಕೆಂಡ್ಗೆ 1ಪೈಸೆ ದರದಲ್ಲಿ ಎಸ್ಟಿಡಿ ಕರೆ ಮಾಡುವ 'ಪವರ್ ದರ' ಯೋಜನೆಯನ್ನು ಪ್ರಾರಂಭಿಸಿದೆ. ಪುನೀತ್ ರಾಜ್ಕುಮಾರ್ ಅವರ ಪವರ್ ಸ್ಟಾರ್ ಚಿತ್ರದ ಜತೆ ಟಾಟಾ ಡೊಕೊಮೊ ಈಗ ಪಾಲುದಾರನಾಗಿದೆ. ಇದೇ ಸಂದರ್ಭದಲ್ಲಿ ಟಾಟಾ ಡೊಕೊಮೊ ವಿಶೇಷ ರೀಚಾರ್ಜ್ ತನ್ನ ಜಿಎಸ್ಎಂ ಗ್ರಾಹಕರಿಗೆ ಕರ್ನಾಟಕದಾದ್ಯಂತ ಬಿಡುಗಡೆಗೊಳಿಸಿದೆ. 30ರ ರೀಚಾರ್ಜ್ಗೆ ಗ್ರಾಹಕರಿಗೆ ಎಲ್ಲ್ಲ ಎಸ್ಟಿಡಿ ಮೊಬೈಲ್ ಕರೆಗಳನ್ನು 2 ಸೆಕೆಂಡ್ಗೆ 1ಪೈಸೆ ದರದಲ್ಲಿ 3ತಿಂಗಳ ಅವಧಿಯಲ್ಲಿ ನೀಡುತ್ತಿದೆ.
ಫಿಲಿಪ್ಸ್ನಿಂದ ಹೊಸ ಆರೋಗ್ಯ ಉಪಕರಣ
ಮನೆಯಲ್ಲಿಯೇ ಚಿಕಿತ್ಸೆ ಪಡೆಯುತ್ತಿರುವ ರೋಗಿಗಳಿಗೆ ಉತ್ತಮ ರೀತಿಯ ಉಸಿರಾಟದ ವ್ಯವಸ್ಥೆಯನ್ನು ಕಲ್ಪಿಸುವ ಸಲುವಾಗಿ ಫಿಲಿಪ್ಸ್ ಹಾಗೂ ನೈಟಿಂಗೇಲ್ ಸಂಸ್ಥೆ ಒಂದಾಗಿದೆ. ಉಸಿರಾಟದ ಸಮಸ್ಯೆ ವ್ಯಾಪಕವಾಗಿದ್ದು, ಭಾರತದಲ್ಲಿ 1ಕೋಟಿಗೂ ಹೆಚ್ಚು ಮಂದಿ ಒಂದಲ್ಲಾ ಒಂದು ರೀತಿಯ ಉಸಿರಾಟದ ತೊಂದೆರೆಗೆ ಗುರಿಯಾಗಿದ್ದಾರೆ. ಉಳಿದೆಲ್ಲಾ ಉಸಿರಾಟದ ತೊಂದರೆಗಳಲ್ಲಿ ಸಿಒಪಿಡಿ ಅತ್ಯಂತ ಪ್ರಮುಖವಾಗಿದೆ. ಇದರಿಂದ ಅನಾರೋಗ್ಯ ಅಥವಾ ಸಾವು ಸಂಭವಿಸುವ ಸಾಧ್ಯತೆ ಇರುತ್ತದೆ. ಇದಕ್ಕಾಗಿ ಪ್ರತ್ಯೇಕ ಹೋಮ್ ವೆಂಟಿಲೇಷನ್ ಹಾಗೂ ಹೋಮ್ ಆಕ್ಸಿಜನ್ ಥೆರಪಿ ಒದಗಿಸಬೇಕಾಗುತ್ತದೆ. ನೈಟಿಂಗೇಲ್ ಸಂಸ್ಥೆ ಈ ಎಲ್ಲಾ ರೀತಿಯ ಸೌಲಭ್ಯಗಳನ್ನು ಒದಗಿಸಲಿದೆ. ಇವೆಲ್ಲವುಗಳನ್ನು ಮನೆಯಲ್ಲೇ ಲಭ್ಯವಾಗುವಂತೆ ಮಾಡುತ್ತದೆ.
ವೈಟ್ಫೀಲ್ಡಲಿ ್ಲ ಕೊಲಂಬಿಯ ಏಷ್ಯಾ ನೂತನ ಆಸ್ಪತ್ರೆ
ಕೊಲಂಬಿಯ ಏಷಿಯಾ ಹಾಸ್ಪಿಟಲ್ನ ನೂತನ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಯನ್ನು ವೈಟ್ಫೀಲ್ಡ್ನಲ್ಲಿ ಸ್ಥಾಪಿಸಲಾಗಿದೆ. ದೇಶಾದ್ಯಂತ ವ್ಯವಸ್ಥಿತವಾಗಿ ನೆಲೆಗೊಂಡಿರುವ ಕೊಲಂಬಿಯಾ ಆಸ್ಪತ್ರೆಯ 10ನೇ ಆಸ್ಪತ್ರೆ ಇದಾಗಿದೆ. ಆಸ್ಪತ್ರೆ ಹೃದ್ರೋಗ, ಪ್ರಸೂತಿ, ಅತ್ಯಾಧುನಿಕ ಲ್ಯಾಪ್ರಸ್ಕೋಪಿಕ್ ಶಸ್ತ್ರಚಿಕಿತ್ಸೆ, ಮೂಳೆ -ಕೀಲು ಚಿಕಿತ್ಸೆ, ಪ್ಲಾಸ್ಟಿಕ್ ಸರ್ಜರಿ, ನರರೋಗ ಚಿಕಿತ್ಸೆ ನೀಡಲಿದೆ. ಇದರ ಹೊರತಾಗಿ ದಿನಪೂರ್ತಿ ತುರ್ತು ಚಿಕಿತ್ಸೆಯನ್ನು ಮೇಜ್ ಸೆಕ್ಷನ್ ಡಯಾಗ್ನೋಸಿಸ್ ಸೌಲಭ್ಯದೊಂದಿಗೆ ನೀಡಲು ಸಜ್ಜಾಗಿದೆ.
ರಾಯಲ್ ಸುಂದರಂಗೆ ಪ್ರಶಸ್ತಿ
ರಾಯಲ್ ಸುಂದರಂ ಅಲಯನ್ಸ್ ಇನ್ಶೂರೆನ್ಸ್ ಕಂಪನಿ ಅಪಘಾತ ಹಾಗೂ ಆರೋಗ್ಯದ ಕ್ಲೇಮ್ಗಳ ಪ್ರಕ್ರಿಯೆಗೆ ಅಂತಾರಾಷ್ಟ್ರೀಯ ಪ್ರಮಾಣೀಕರಿಸುವ ಸಂಸ್ಥೆಯ(ಐಎಸ್ಒ)9001-2008 ಪ್ರಮಾಣೀಕರಣದ ನವೀಕರಣ ಘೋಷಿಸಿದೆ. ಕಂಪನಿಗೆ 2008ರಲ್ಲಿ ಪ್ರಥಮ ಬಾರಿಗೆ ಪ್ರಮಾಣೀಕರಣ ದೊರೆತಿತ್ತು. ಈಗಿನ ನವೀಕರಣ 3ವರ್ಷದವರೆಗೆ ಮಾನ್ಯತೆ ಹೊಂದಿರುತ್ತದೆ.
ಪೇಬ್ಯಾಕಲ್ಲಿ ಹೊಸ ಆಫರ್
ಪೇಬ್ಯಾಕ್ ಸಂಸ್ಥೆ ಗ್ರಾಹಕರಿಗೆ ಆನ್ಲೈನ್ ಶಾಪಿಂಗ್ ಅನುಭವ ನೀಡಲು ಮುಂದಾಗಿದೆ. ನೂತನ ಶಾಪ್ಆನ್ಲೈನ್ ವೆಬ್ ಪೋರ್ಟಲ್ ಮೂಲಕ ಗ್ರಾಹಕರು ತಾವು ಖರೀದಿಸಲಿಚ್ಛಿಸುವ ಸರಕುಗಳ ಹೋಲಿಕೆ ಮಾಡುವುದರ ಜತೆಗೆ ಬೇಕಾದ ಆಫರ್ಗಳನ್ನು ಹೊಂದಿರುವ ಸರಕು ಖರೀದಿಸಬಹುದು. ಪೇಬ್ಯಾಕ್ ಪಾಂಯಿಂಟ್ಸ್ ಮೂಲಕ ರಿಯಾಯಿತಿ ಪಡೆಯಲು ಸಾಧ್ಯವಾಗುತ್ತದೆ. www.shopline.payback.inಗೆ ಭೇಟಿ ನೀಡಿ ಮೊಬೈಲ್, ಮ್ಯೂಸಿಕ್, ಗೇಮ್ಸ್, ಕಂಪ್ಯೂಟರ್, ಕ್ಯಾಮರಾ, ಅಡುಗೆ ಉಪಕರಣಗಳು, ಫ್ಯಾಷನ್, ಫುಟ್ವೇರ್ ಇತ್ಯಾದಿಗಳ ಮೇಲೂ ವಿಶೇಷ ಆಫರ್, ಕೂಪನ್ಗಳನ್ನು ಪಡೆಯಬಹುದು.
ಸಿಎಸ್ಸಾರ್ಗೆ 600 ಕೋಟಿ ವಿನಿಯೋಗ
ಟಾಟಾ ಕಂಪನಿಗಳು ಕಾರ್ಪೊರೇಟ್ ಸಾಮಾಜಿಕ ಜವಾಬ್ದಾರಿ (ಸಿಎಸ್ಆರ್) ಕಾರ್ಯಕ್ರಮಗಳಿಗೆ 660 ಕೋಟಿ ವ್ಯಯಿಸಿದೆ. ಕೌಶಲ್ಯ ಅಭಿವೃದ್ಧಿ, ಶಿಕ್ಷಣ, ಆರೋಗ್ಯ ಮತ್ತು ಪೌಷ್ಠಿಕತೆ, ವಸತಿ, ಜೈವಿಕ ವೈವಿಧ್ಯ, ವಿಪತ್ತು ಪರಿಹಾರ ಸೇರಿದಂತೆ ಅನೇಕ ಸಾಮಾಜಿಕ ಕೆಲಸಗಳಿಗಾಗಿ ಹಣ ವಿನಿಯೋಗಿಸಿದೆ. 60 ರಾಷ್ಟ್ರದ 540 ಸ್ಥಳಗಳಲ್ಲಿ 150ಕಂಪನಿಗಳಲ್ಲಿ 25 ಸಾವಿರಕ್ಕೂ ಹೆಚ್ಚು ಸ್ವಯಂಸೇವಕರಿದ್ದಾರೆ. ಕಳೆದ 3ವರ್ಷಗಳಲ್ಲಿ ವಾರ್ಷಿಕವಾಗಿ 1ಸಾವಿರ ಕೋಟಿ ವ್ಯಯಿಸಿರುವುದಾಗಿ ಬ್ರ್ಯಾಂಡ್ ಕಸ್ಟಡಿಯನ್ ಸದಸ್ಯ ಡಾ. ಮುಕುಂದರಾಜನ್ ತಿಳಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

