ಚಿನ್ನದ ಬೆಲೆ: ರು.715 ಏರಿಕೆ

ಶನಿವಾರ ಚಿನ್ನದ ಬೆಲೆ ರು.715 ಏರಿಕೆ ಕಂಡಿದೆ. ಮದುವೆ ಸಮಾರಂಭಗಳ ಕಾಲ...
ಚಿನ್ನ
ಚಿನ್ನ

ಮುಂಬೈ: ಶನಿವಾರ ಚಿನ್ನದ ಬೆಲೆ ರು.715 ಏರಿಕೆ ಕಂಡಿದೆ. ಮದುವೆ ಸಮಾರಂಭಗಳ ಕಾಲ ಸನ್ನಿಹಿತವಾಗುತ್ತಿದ್ದಂತೆ ಚಿನ್ನದ ಬೆಲೆ ಧುತ್ತನೆ ಮೇಲಕ್ಕೇರಿದೆ.

ಪ್ರಸ್ತುತ ವರ್ಷದಲ್ಲಿ ಎರಡನೇ ಬಾರಿ ಚಿನ್ನದ ಬೆಲೆಯಲ್ಲಿ ಇಷ್ಟೊಂದು ಹೆಚ್ಚಳವುಂಟಾಗಿದೆ. ಮುಂಬರುವ ದಿನಗಳಲ್ಲಿ ಬೆಲೆ ಇನ್ನೂ ಹೆಚ್ಚಾಗುವ ಸಾಧ್ಯತೆಯಿದೆ ಎಂದು ಬಲ್ಲಮೂಲಗಳು ಹೇಳಿವೆ.

ಮಾರುಕಟ್ಟೆಯಲ್ಲಿ ಶುಕ್ರವಾರ ಹತ್ತು ಗ್ರಾಂ ಚಿನ್ನದ ಬೆಲೆ ರು.25,685 ಆಗಿದ್ದು, ಶನಿವಾರ 26,400 ರು.ಗೆ ಏರಿಕೆಯಾಗುವ ಮೂಲಕ ಗ್ರಾಹಕರಿಗೆ ಬೆಲೆ ಏರಿಕೆಯ ಬಿಸಿ ತಟ್ಟುವಂತೆ ಮಾಡಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com