ಬಡ್ಡಿ ದರ ಯಥಾಸ್ಥಿತಿ

ಗೃಹ, ವಾಹನ ಸಾಲ ಪಡೆದವರಿಗೆ ಈ ಬಾರಿ ನಿರಾಶೆ. ಭಾರತೀಯ ರಿಸರ್ವ್ ಬ್ಯಾಂಕ್(ಆರ್‍ಬಿಐ) ಸಾಲದ ಮೇಲಿನ ಬಡ್ಡಿ ದರದಲ್ಲಿ ಯಥಾಸ್ಥಿತಿ ಕಾಪಾಡಿಕೊಂಡಿದೆ. ...
ಭಾರತೀಯ ರಿಸರ್ವ್ ಬ್ಯಾಂಕ್(ಆರ್‍ಬಿಐ)
ಭಾರತೀಯ ರಿಸರ್ವ್ ಬ್ಯಾಂಕ್(ಆರ್‍ಬಿಐ)
Updated on: 

ಮುಂಬೈ: ಗೃಹ, ವಾಹನ ಸಾಲ ಪಡೆದವರಿಗೆ ಈ ಬಾರಿ ನಿರಾಶೆ. ಭಾರತೀಯ ರಿಸರ್ವ್ ಬ್ಯಾಂಕ್(ಆರ್‍ಬಿಐ) ಸಾಲದ ಮೇಲಿನ ಬಡ್ಡಿ ದರದಲ್ಲಿ ಯಥಾಸ್ಥಿತಿ ಕಾಪಾಡಿಕೊಂಡಿದೆ. ಮಂಗಳವಾರ ಪ್ರಕಟವಾದ ತನ್ನ ದ್ವೈಮಾಸಿಕ ಹಣಕಾಸು ನೀತಿ ಪರಾಮರ್ಶೆಯಲ್ಲಿ ಆರ್‍ಬಿಐ ರೆಪೋ  ಹಾಗೂ ರಿವರ್ಸ್ ರೆಪೋ ದರದಲ್ಲಿ ಯಾವುದೇ ಬದಲಾವಣೆ ಮಾಡಿಲ್ಲ .
ಆದರೆ, ಕಳೆದ ಬಾರಿಯ ಬಡ್ಡಿ ದರ ಇಳಿಕೆಯ ಅನುಕೂಲವನ್ನು ಗ್ರಾಹಕರಿಗೆ ವರ್ಗಾಯಿಸದೇ ಇರುವ ಬ್ಯಾಂಕುಗಳ ನಿಲುವಿಗೆ ಆರ್‍ಬಿಐ ಗವರ್ನರ್ ರಘುರಾಂ ರಾಜನ್ ಕೆಂಡಕಾರಿದ್ದಾರೆ. ಸಾಲದ ಮೇಲಿನ ವೆಚ್ಚ ಹೆಚ್ಚಾಗಿರುವ ಕಾರಣ  ಬಡ್ಡಿ ದರ ಇಳಿಕೆ ಮಾಡಿಲ್ಲ ಎಂಬ ಬ್ಯಾಂಕ್ಗಳ ವಾದವನ್ನು  `ಮೂರ್ಖತನ ಎಂದು ಹೇಳಿದ್ದಾರೆ . ಆರ್‍ಬಿಐ ಒತ್ತಡಕ್ಕೆ ಕೊನೆಗೂ ಮಣಿದ ಎಸ್‍ಬಿಐ ಹಾಗೂ ಎಚ್‍ಡಿಎಫ್ ಸಿ ಬ್ಯಾಂಕುಗಳುಸಾಲದ ಮೇಲಿನ ಬಡ್ಡಿ ದರವನ್ನು ಶೇ.0.15 ಇಳಿಕೆ ಮಾಡಿವೆ. ಹೀಗಾಗಿ ಈ ಬ್ಯಾಂಕ್ ಗಳ ಬಡ್ಡಿ  ದರ  ಶೇ.10ರಿಂದ ಶೇ.9.85ಕ್ಕಿಳಿದಿದೆ. ಬಡ್ಡಿ ದರ ಏರಿಕೆಯಿಲ್ಲ: ದೇಶದ ಹಲವೆಡೆ ಸುರಿದ ಅಕಾಲಿಕ ಮಳೆಯು ಆಹಾರ ವಸ್ತುಗಳ ದರವನ್ನು ಗಗನಕ್ಕೇರಿಸಬಹುದು ಎಂಬ ಆತಂಕದ ಹಿನ್ನೆಲೆಯಲ್ಲಿ ಆರ್‍ಬಿಐ ಬಡ್ಡಿ ದರದಲ್ಲಿ ಇಳಿಕೆ ಮಾಡಲಿಲ್ಲ. ಹಾಗಾಗಿ ರೆಪೋ  ದರ ಶೇ.7.5 ಹಾಗೂ ನಗದು ಮೀಸಲು ಅನುಪಾತ ಶೇ.4 ಆಗಿಯೇ  ಮುಂದುವರಿಯಲಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com