ಆರ್‍ಬಿಐ ಸಭೆಯತ್ತ ಉದ್ಯಮ ಚಿತ್ತ

ಭಾರತೀಯ ರಿಸರ್ವ್ ಬ್ಯಾಂಕ್ (ಆರ್‍ಬಿಐ)ನ ಪ್ರಸಕ್ತ ಹಣಕಾಸು ಸಾಲಿನ ಮೂರನೆ ಹಣಕಾಸು ನೀತಿ ಪರಿಶೀಲನಾ ಸಭೆ ಇಂದು ನಡೆಯಲಿದೆ...
ಭಾರತೀಯ ರಿಸರ್ವ್ ಬ್ಯಾಂಕ್
ಭಾರತೀಯ ರಿಸರ್ವ್ ಬ್ಯಾಂಕ್
Updated on: 

ನವದೆಹಲಿ: ಭಾರತೀಯ ರಿಸರ್ವ್ ಬ್ಯಾಂಕ್ (ಆರ್‍ಬಿಐ)ನ ಪ್ರಸಕ್ತ ಹಣಕಾಸು ಸಾಲಿನ ಮೂರನೆ ಹಣಕಾಸು ನೀತಿ ಪರಿಶೀಲನಾ ಸಭೆ ಇಂದು ನಡೆಯಲಿದೆ. ಆರ್‍ಬಿಐ ತನ್ನ ಪ್ರಮುಖ ಸಾಲಗಳ ಮೇಲಿನ ಬಡ್ಡಿದರಗಳನ್ನು ಕಡಿತಗೊಳಿಸುವ ಕುರಿತು ಉದ್ಯಮದ ವಿಶ್ಲೇಷಕರು ಭಿನ್ನ ಅಭಿಪ್ರಾಯಗಳನ್ನುವ್ಯಕ್ತಪಡಿಸುತ್ತಿದ್ದಾರೆ. ಹೀಗಾಗಿ ರಿಸರ್ವ್ ಬ್ಯಾಂಕ್ ಭಾರಿ ಒತ್ತಡದಲ್ಲಿ ಸಿಲುಕಿದೆ.
ರಿಟೇಲ್ ಹಣದುಬ್ಬರ ದರ ಸಂಯಮದ ಮಟ್ಟಕ್ಕಿಂತಲೂ ಹೆಚ್ಚಾಗಿ ರುವುದರಿಂದ ಬಡ್ಡಿದರಗಳನ್ನು ಕಡಿತ ಗೊಳಿಸುವ ಸಾಧ್ಯತೆಗಳು ಕಡಿಮೆ ಎಂದು ಕೆಲವರು ಅಭಿಪ್ರಾಯಪಟ್ಟಿದ್ದಾರೆ. ಇನ್ನು ಕೆಲವರ ವಾದವೇ ಬೇರೆ. ಕೈಗಾರಿಕಾ ಪ್ರಗತಿ ಹಿನ್ನಡೆ ಕಂಡಿರುವು ದರಿಂದ ಮತ್ತು ಸಗಟು ದರ ಆಧರಿತ ಹಣದುಬ್ಬರ ಪ್ರಮಾಣ ನೇತ್ಯಾತ್ಮಕ ವಲಯದಲ್ಲಿ ಇರುವುದರಿಂದ ಬಡ್ಡಿದರ ಕಡಿಮೆ ಮಾಡಲಿದೆ ಎಂದಿದ್ದಾರೆ. ಆರ್ಥಿಕ ಪ್ರಗತಿಯನ್ನು ಹೆಚ್ಚಿಸಲು ಬಡ್ಡಿದರಗಳನ್ನು ಕಡಿಮೆ ಮಾಡಬೇಕೆಂಬುದು ಕೇಂದ್ರ ಸರ್ಕಾರದ ಉದ್ದೇಶವೂ ಆಗಿದೆ. ಪ್ರಸಕ್ತ ಸನ್ನಿವೇಶದಲ್ಲಿ ಆರ್‍ಬಿಐ ಬಡ್ಡಿದರಗಳನ್ನು ಕಡಿತಗೊಳಿಸಲಿದೆ ಎಂಬ ನಿರೀಕ್ಷೆ ನಾನು ಹೊಂದಿಲ್ಲ ಎಂದು ಭಾರ ತೀಯ ಸ್ಟೇಟ್ ಬ್ಯಾಂಕ್ (ಎಸ್‍ಬಿಐ) ಚೇರ್ಮನ್ ಅರುಂಧತಿ ಭಟ್ಟಾಚಾರ್ಯ ಹೇಳಿದ್ದಾರೆ.

ಸಗಟು ದರ ಆಧರಿತ ಹಣದುಬ್ಬರ ಪ್ರಮಾಣ ನೇತ್ಯಾತ್ಮಕ ವಲಯದಲ್ಲಿರ ಬಹುದು ಆದರೆ ಆಹಾರ ಉತ್ಪನ್ನಗಳ ದರಗಳ ಏರಿಕೆಯಿಂದಾಗಿ ರಿಟೇಲ್ ಹಣದುಬ್ಬರ ಪ್ರಮಾಣ ಹೆಚ್ಚಿನ ಪ್ರಮಾಣ ದಲ್ಲಿ ಇರುವುದರಿಂದ ಬಡ್ಡಿ ದರಗಳ ಕಡಿತ ಸಾಧ್ಯತೆಗಳು ಕಡಿಮೆ ಎಂದಿದ್ದಾರೆ. ಸಾಮಾನ್ಯವಾಗಿ ಪ್ರಮುಖ ಸಾಲಗಳ ಮೇಲಿನ ಬಡ್ಡಿದರಗಳನ್ನು ನಿಗದಿಪಡಿಸು ವಾಗ ಆರ್‍ಬಿಐ ರಿಟೇಲ್ ಹಣದುಬ್ಬರ ಪ್ರಮಾಣವನ್ನು ಗಣನೆಗೆ ತೆಗೆದು ಕೊಳ್ಳಲಿದೆ.
ಪರಿಸ್ಥಿತಿ ಈಗಿರುವಂತೆ ಇರಲಿದೆ. ಹಣಕಾಸು ನೀತಿ ಬದಲಾವಣೆಯಿಂದ ದೇಶದ ಆರ್ಥಿಕತೆಯಲ್ಲಿ ಹೆಚ್ಚಿನ ಬದಲಾ ವಣೆಯಾಗಲಿದೆ ಎಂದು ನಾನು ಭಾವಿಸಿಲ್ಲ. ಆರ್‍ಬಿಐ ಮುಂಗಾರು ಮಳೆಯನ್ನು ನಿಕಟವಾಗಿ ಗಮನಿಸುತ್ತಿದೆ ಎಂದು ಬ್ಯಾಂಕ್ ಆಫ್  ಬರೋಡ ಎಂಡಿ ಮತ್ತುಮ ಸಿಇಒ ರಂಜನ್ ಧಾವನ್ ಹೇಳಿದ್ದಾರೆ. ಆರ್‍ಬಿಐ ಇಂದು ಎಂತಹ ಬದಲಾವಣೆ ಮಾಡಲಿದೆ ಎಂಬುದನ್ನು ಊಹಿಸು ವುದು ಕಷ್ಟ. ಈ ಹಣಕಾಸು ಸಾಲಿನಲ್ಲಿ 25ರಿಂದ 50 ಅಂಶಗಳಷ್ಟು ಕಡಿತಗೊಳಿಸ ಬಹುದು ಎಂಬ ನಿರೀಕ್ಷೆಯನ್ನು ಎಚ್ ಡಿಎಫ್ ಸಿ ಬ್ಯಾಂಕ್ ಉಪ ವ್ಯವಸ್ಥಾಪಕ ನಿರ್ದೇಶಕ ಪರೇಶ್ ಸುಖ್ತಾಂಕರ್ ವ್ಯಕ್ತಪಡಿಸಿದ್ದಾರೆ. ಮುಂಗಾರು ಸರಾಸರಿ ಪ್ರಮಾಣದಲ್ಲಿರುವುದರಿಂದ ಹಣ ದುಬ್ಬರ ಹೆಚ್ಚಿನ ಪ್ರಮಾಣದಲ್ಲಿರುವ ಅಂದಾಜುಗಳಿವೆ. ಇದರಿಂದ ಆರ್‍ಬಿಐ 25 ಮೂಲ ಅಂಶಗಳಷ್ಟು ಬಡ್ಡಿದರ ಕಡಿತಗೊಳಿಸಬಹುದು ಎಂದು ಆರ್ಥಿಕ ವಿಶ್ಲೇಷಣಾ ಸಂಸ್ಥೆ ಮೂಡೀಸ್‍ನ ನಿರೀಕ್ಷೆಯಾಗಿದೆ. ಜೂನ್‍ನಲ್ಲಿ ನಡೆದ ಹಣಕಾಸು ನೀತಿ ಪರಿಶೀಲನ ಸಭೆಯಲ್ಲಿ ರೆಪೋ ದರವನ್ನು ಶೇ.0.25ರಷ್ಟು ಕಡಿತಗೊಳಿಸಿತ್ತು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com