

ಮುಂಬೈ: ಸೋಮವಾರದ ವಹಿವಾಟಿನಲ್ಲಿ ಡಾಲರ್ ಎದುರು ರುಪಾಯಿ ಮೌಲ್ಯ ಇನ್ನೂ 21 ಪೈಸೆ ಕುಸಿದು 65.21ಕ್ಕೆ ಕುಸಿದಿದೆ. ದೇಶೀಯ ಷೇರು ಪೇಟೆ ದುರ್ಬಲವಾಗಿದ್ದರಿಂದ ಮತ್ತು ಜಾಗತಿಕ ಮಾರುಕಟ್ಟೆಯಲ್ಲಿ ಡಾಲರ್ ಮೌಲ್ಯ ಏರಿಕೆ ಕಂಡಿದ್ದರಿಂದ ಆಮದು ಕಂಪನಿಗಳು ಹೆಚ್ಚಿನ ಡಾಲರ್ ಖರೀದಿಯಲ್ಲಿ ತೊಡಗಿದ್ದರು. ಇದರಿಂದ ರುಪಾಯಿ ಮೌಲ್ಯ ಕಳೆದ ಎರಡುವರ್ಷಗಳಲ್ಲೇ ಕನಿಷ್ಠ ಮಟ್ಟಕ್ಕೆ ಕುಸಿಯಿತು. 65.21ಕ್ಕೆ ವಹಿವಾಟು ಮುಗಿಸುವ ಮುನ್ನ 65.12ರ ನಡುವೆ ವಹಿವಾಟು ಏರಿಳಿತ ಕಂಡಿತ್ತು. ಸೋಮವಾರ ಮುಂಬೈ ಷೇರು ಮಾರುಕಟ್ಟೆ ಸೂಚ್ಯಂಕ ಸೆನ್ಸೆಕ್ಸ್ ಸಹ ನಷ್ಟದೊಂದಿಗೆ ದಿನದಂತ್ಯ ಕಂಡಿದೆ. ಕಳೆದ ಗುರುವಾರ
ರು. ಮೌಲ್ಯ 65.10ಕ್ಕೆ ಕುಸಿದಿತು.