ನವದೆಹಲಿ: ಜಾಗತಿಕ ಪ್ರಕ್ಷುಬ್ಧತೆ, ಚಂಚಲತೆಯ ನಡುವೆಯೂ ಭಾರತೀಯ ಆರ್ಥಿಕತೆಯ ಸಾಧನೆ ತೃಪ್ತಿಕರವಾಗಿದೆ ಎಂದು ಕೇಂದ್ರ ವಿತ್ತ ಸಚಿವ ಅರುಣ್ ಜೇಟ್ಲಿ ಅಭಿಪ್ರಾಯಪಟ್ಟಿದ್ದಾರೆ.
ಜಾಗತಿಕ ಆರ್ಥಿಕತೆಯ ಹಿಂಜರಿತದ ಸವಾಲನ್ನು ಭಾರತ ಸಮರ್ಥವಾಗಿ ಎದುರಿಸಿದ್ದು, ಮುಂದಿನ ದಿನಗಳಲ್ಲಿ ಆರ್ಥಿಕ ಪ್ರಗತಿ ಇನ್ನಷ್ಟು ಸುಧಾರಣೆಯಾಗಲಿದೆ ಎಂದಿದ್ದಾರೆ.
2016ರಲ್ಲಿ ಸರಕು ಮತ್ತು ಸೇವಾ ತೆರಿಗೆ(ಜಿಎಸ್ಟಿ) ವಿಧೇಯಕಕ್ಕೆ ಅಂಗೀಕಾರ ಪಡೆಯುವುದು, ಭಾರತದಲ್ಲಿ ಉದ್ದಿಮೆ ನಡೆಸುವ ಪ್ರಕ್ರಿಯೆಗಳನ್ನು ಸರಳಗೊಳಿಸುವುದಕ್ಕೆ ಹೆಚ್ಚಿನ ಆದ್ಯತೆ ನೀಡುತ್ತೇನೆ ಎಂದಿದ್ದಾರೆ.
ಇದೇ ವೇಳೆ, ಗೃಹ ಸಚಿವ ರಾಜನಾಥ್ಸಿಂಗ್, 2016ರಲ್ಲಿ ದೇಶದಲ್ಲಿ ಶಾಂತಿಯುತ, ಸುರಕ್ಷಿತ, ಸೌಹಾರ್ದಯುತ ವಾತಾವರಣ ನಿರ್ಮಿಸುತ್ತೇವೆ ಎಂದಿದ್ದಾರೆ.