ಪೇಸ್ಮಾರ್ಟ್ ಪ್ರಿಪೇಯ್ಡ್ ಕಾರ್ಡ್ ಬಿಡುಗಡೆ

ಟಾಟಾ ಟೆಲಿಸರ್ವೀಸಸ್‌ನ ಅಂಗ ಸಂಸ್ಥೆಯಾದ ಎಂಎಂಪಿಎಲ್ ರತ್ನಾಕರ ಬ್ಯಾಂಕ್ ಸಹಯೋಗದೊಂದಿಗೆ...
ಪೇಸ್ಮಾರ್ಟ್ ಪ್ರಿಪೇಯ್ಡ್ ಕಾರ್ಡ್ ಬಿಡುಗಡೆ
Updated on: 

ಟಾಟಾ ಟೆಲಿಸರ್ವೀಸಸ್‌ನ ಅಂಗ ಸಂಸ್ಥೆಯಾದ ಎಂಎಂಪಿಎಲ್ ರತ್ನಾಕರ ಬ್ಯಾಂಕ್ ಸಹಯೋಗದೊಂದಿಗೆ ಪೇಸ್ಮಾರ್ಟ್ ಪ್ರೀಪೇಯ್ಡ್ ಕಾರ್ಡ್ ಬಿಡುಗಡೆಗೊಳಿಸಿದೆ.

ಬ್ಯಾಂಕ್‌ನ ಗ್ರಾಹಕರು ವೀಸಾದಿಂದ ಪರವಾನಗಿ ಪಡೆದ ಎಟಿಎಂಗಳಲ್ಲಿ ಹಣ ತೆಗೆಯಲು ಇದು ಸಹಕಾರಿಯಾಗಲಿದೆ. ಬ್ಯಾಂಕ್ ಖಾತೆಯಲ್ಲಿನ ಹಣ ವರ್ಗಾವಣೆ ಹಾಗೂ ಖಾತೆ ಸಂಬಂಧಿತ ವ್ಯವಹಾರಗಳಿಗೆ ಈ ಸೇವೆಯ ಪ್ರಯೋಜನ ಪಡೆದುಕೊಳ್ಳಬಹುದು.

ಪೇಸ್ಮಾರ್ಟ್ ಕಾರ್ಡ್‌ನಿಂದ ಕನಿಷ್ಠ ರು.200 ರಿಂದ ಗರಿಷ್ಠ ರು.1 ಲಕ್ಷದವರೆಗೂ ವ್ಯವಹರಿಸಬಹುದಾಗಿದೆ. ಇದರಿಂದ ಗ್ರಾಹಕರು ಸಾಂಪ್ರದಾಯಿಕ ಪಾವತಿಯಿಂದ ದೂರ ಉಳಿದು ಸುಲಭ, ಸುರಕ್ಷಿತ ಮತ್ತು ಖಾಸಗಿ ಪಾವತಿ ಅವಕಾಶವನ್ನು ಒದಗಿಸುತ್ತದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com