

ಹೈದ್ರಾಬಾದ್: ರು.1,200 ಕೋಟಿ ಬ್ಯಾಂಕಿಂಗ್ ವಂಚನೆ ಪ್ರಕರಣಕ್ಕೆ ಸಂಬಂಧಿಸಿ ಆಂಗ್ಲ ದೈನಿಕ 'ಡೆಕ್ಕನ್ ಕ್ರಾನಿಕಲ್'ನ ಮಾಲೀಕ ಟಿ.ವೆಂಕಟ್ರಾಮ್ ರೆಡ್ಡಿ ಅವರನ್ನು ಬೆಂಗಳೂರಿನ ಸಿಬಿಐ ಅಧಿಕಾರಿಗಳು ಶನಿವಾರ ಬಂಧಿಸಿದ್ದಾರೆ.
ಕೆನರಾ ಬ್ಯಾಂಕ್ ನೀಡಿದ್ದ ದೂರಿನ ಆಧಾರದಂತೆ ಅವರನ್ನು ಬಂಧಿಸಲಾಗಿದೆ. ಈ ಸಂಬಂಧ ಸಿಬಿಐನ ಬ್ಯಾಂಕ್ ಭದ್ರತೆಗಳ ಮತ್ತು ವಂಚನೆ ಘಟಕದ ಅಧಿಕಾರಿಗಳು ಆಂಧ್ರದ ಸಿಕಂದರಾಬಾದ್‌ನಲ್ಲಿರುವ ಡೆಕ್ಕನ್ ಕ್ರಾನಿಕಲ್ ಕಚೇರಿಯಲ್ಲಿ ರೆಡ್ಡಿ ಅವರನ್ನು ವಶಕ್ಕೆ ತೆಗೆದುಕೊಂಡಿದ್ದಾರೆ.
ನಂತರ ಅವರನ್ನು ಕೋಟಿಯಲ್ಲಿರುವ ಸಿಬಿಐ ಕಚೇರಿಗೆ ಕರೆದೊಯ್ದು ವಿಚಾರಣೆ ನಡೆಸಿದ್ದಾರೆ. ಸಂಜೆ 5 ಗಂಟೆಗೆ ಬಂಧಿಸಿದ್ದಾರೆ. ರೆಡ್ಡಿ ಅವರ ಡೆಕ್ಕನ್ ಕ್ರಾಮಿಕಲ್ ಹೋಲ್ಡಿಂಗ್ಸ್ ಲಿ. ಸಂಸ್ಥೆಯು ಡೆಕ್ಕನ್ ಕ್ರಾನಿಕಲ್, ಫೈನಾನ್ಷಿಯಲ್ ಕ್ರಾನಿಕಲ್ ಮತ್ತು ಏಷ್ಯನ್ ಏಜ್ ಆಂಗ್ಲ ದೈನಿಕಗಳು ಮತ್ತು ತೆಲುಗು ಪತ್ರಿಕೆ ಆಂಧ್ರ ಭೂಮಿಯ ಮಾಲೀಕತ್ವ ಹೊಂದಿದೆ.