

ನವದೆಹಲಿ: ಕಳೆದ ಐದು ದಿನಗಳಿಂದ ಸತತ ಕುಸಿತ ಕಂಡ ಚಿನ್ನ ಶನಿವಾರದ ವಹಿವಾಟಿನಲ್ಲಿ ಚೇತರಿಸಿಕೊಂಡಿದೆ. ಜಾಗತಿಕ ಮಾರುಕಟ್ಟೆಯಲ್ಲಿ ಚಿನ್ನದ ಬೇಡಿಕೆ ಕಡಿಮೆ ಇದ್ದರೂ ದೇಶೀಯ ಮಾರುಕಟ್ಟೆಯಲ್ಲಿ ಆಭರಣ ತಯಾ ರಕರು ಖರೀದಿಗೆ ಮುಂದಾಗಿದ್ದರು.
ಇದರಿಂದ ಪ್ರತಿ ಹತ್ತು ಗ್ರಾಂ ದರ ರು.350 ಏರಿಕೆ ಕಂಡು 25,400ಕ್ಕೆ ತಲುಪಿತು. ಬೆಳ್ಳಿ ಸಹ ಚೇತರಿಕೆ ಕಂಡು ಪ್ರತಿ ಕೆಜಿ ದರ ರು.100 ಏರಿಕೆಯೊಂದಿಗೆರು.34,050 ತಲುಪಿತು. ಕೈಗಾರಿಕೆ ಬಳಕೆಗಾಗಿ ಮತ್ತು ನಾಣ್ಯ ತಯಾರಕರು ಹೆಚ್ಚಿನ ಸಂಖ್ಯೆಯಲ್ಲಿ ಖರೀದಿಯಲ್ಲಿ ತೊಡಗಿದ್ದರು.
ಚಿನ್ನ ಮತ್ತು ಬೆಳ್ಳಿ ಖರೀ ದರಗಳು ದಾಖಲೆ ಕುಸಿತ ಕಂಡಿದ್ದರಿಂದ ಇದರ ಲಾಭ ಪಡೆಯಲು ಆಭರಣ ತಯಾರಕರು, ರಿಟೇಲ್ ಖರೀದಿದಾರರು ಹೆಚ್ಚಿನ ಖರೀದಿಯಲ್ಲಿ ತೊಡಗಿದ್ದರು. ಇದರಿಂದ ದರಗಳು ಏರಿಕೆ ಕಂಡವು ಎಂದು ಮಾರುಕಟ್ಟೆ ವಿಶ್ಲೇಷಕರು ಹೇಳಿದ್ದಾರೆ.