

ಮುಂಬೈ: ದುರ್ಬಲ ಮಾರುಕಟ್ಟೆ ವಹಿವಾಟಿನಿಂದಾಗಿ ಮಂಗಳವಾರ ಸೆನ್ಸೆಕ್ಸ್ ಬರೊಬ್ಬರಿ 500 ಅಂಕಗಳ ಇಳಿಕೆ ಕಂಡಿದೆ.
ಇಂದು ಬೆಳಗ್ಗೆ ವಹಿವಾಟು ಆರಂಭವಾಗುತ್ತಿದ್ದಂತಯೇ ಉತ್ತಮ ಆರಂಭ ಕಂಡಿದ್ದ ಭಾರತೀಯ ಷೇರುಮಾರುಕಟ್ಟೆ ಮಧ್ಯಾಹ್ನದ ವೇಳೆಗೆ ಇಳಿಕೆಯತ್ತ ಮುಖಮಾಡಿದೆ. ಮಾರುಕಟ್ಟೆಯ ದುರ್ಬಲ ವಹಿವಾಟಿನಿಂದಾಗಿ ಬಿಎಸ್ ಇ ಸೆನ್ಸೆಕ್ಸ್ ಸುಮಾರು 500 ಅಂಕಗಳನ್ನು ಕಳೆದುಕೊಂಡು 26,927.82ಕ್ಕೆ ಸ್ಥಿರವಾಗಿದೆ. ನಿಫ್ಟಿಯಲ್ಲಿಯೂ ಕೂಡ 150 ಅಂಕಗಳ ಕಡಿತವಾಗಿದ್ದು, 8137.60 ನಿಫ್ಟಿ ಸ್ಥಿರವಾಗಿದೆ.
ಪ್ರಮುಖವಾಗಿ ಬ್ಯಾಂಕಿಂಗ್ ಕ್ಷೇತ್ರ, ಗ್ರಾಹಕ ಬಳಕೆ ವಸ್ತುಗಳು, ಸ್ಥಿರಾಸ್ಥಿ, ಆಟೋ ಮತ್ತು ಬಂಡವಾಳ ಸರಕು ಷೇರುಗಳ ಮೌಲ್ಯದಲ್ಲಿ ತೀವ್ರ ಕುಸಿತ ಕಂಡುಬಂದಿದೆ. ಆದರೆ ಹೀರೋ ಮೊಟೋ ಕಾರ್ಪ್, ಡಾ.ರೆಡ್ಡೀಸ್ ಲ್ಯಾಬ್ ಮತ್ತು ಕೋಲ್ ಇಂಡಿಯಾ ಷೇರುಗಳ ಮೌಲ್ಯದಲ್ಲಿ ಅಲ್ಪ ಪ್ರಮಾಣದ ಏರಿಕೆ ಕಂಡುಬಂದಿದೆ.
ಇನ್ನು ಇಂಧನ, ಗ್ಯಾಸ್, ಉಕ್ಕು ವಿಭಾಗಗಲ್ಲಿ ಶೇ. 0.76ರಿಂದ 2.61ರಷ್ಟು ಮೌಲ್ಯ ಕಡಿತವಾಗಿದೆ. ಇನ್ನು ಕೇವಲ ಭಾರತೀಯ ಷೇರುಮಾರುಕಟ್ಟೆಯಷ್ಟೇ ಅಲ್ಲದೆ ಏಷಿಯಾ ಮಾರುಕಟ್ಟೆ, ಹಾಂಕ್ ಕಾಂಗ್, ಜಪಾನ್, ಸಿಂಗಾಪುರ, ದಕ್ಷಿಣ ಕೊರಿಯಾ ಮತ್ತು ಚೀನಾ ಷೇರುಮಾರುಕಟ್ಟೆಯಲ್ಲಿಯೂ ಕೂಡ ದುರ್ಬಲ ಆರ್ಥಿಕ ವ್ಯವಹಾರದಿಂದಾಗಿ ಕುಸಿತ ಕಂಡುಬಂದಿದೆ.