ನೂಡಲ್ಸ್ ಹಿಂಪಡೆಯಲು ಆದೇಶ ನೀಡಿಲ್ಲ

ಮ್ಯಾಗಿ ನೂಡಲ್ಸ್ ನಲ್ಲಿ ಸೀಸದ ಅಂಶ ಹೆಚ್ಚಾಗಿ ಎಂಬ ಕಾರಣಕ್ಕಾಗಿ ಮಾರುಕಟ್ಟೆಯಿಂದ ಅದನ್ನು ಹಿಂಪಡೆಯಲು ಆಹಾರ ಇಲಾಖೆ ಹೊರಡಿಸಿದ ಆದೇಶವನ್ನು ನೆಸ್ಲೆ ಪ್ರಶ್ನಿಸಿದೆ...
ನೆಸ್ಲೆ ಸಂಸ್ಥೆಯ ಮ್ಯಾಗಿ ನೂಡಲ್ಸ್
ನೆಸ್ಲೆ ಸಂಸ್ಥೆಯ ಮ್ಯಾಗಿ ನೂಡಲ್ಸ್
Updated on: 

ಮುಂಬೈ: ಮ್ಯಾಗಿ ನೂಡಲ್ಸ್ ನಲ್ಲಿ ಸೀಸದ ಅಂಶ ಹೆಚ್ಚಾಗಿ ಎಂಬ ಕಾರಣಕ್ಕಾಗಿ ಮಾರುಕಟ್ಟೆಯಿಂದ ಅದನ್ನು ಹಿಂಪಡೆಯಲು ಆಹಾರ ಇಲಾಖೆ ಹೊರಡಿಸಿದ ಆದೇಶವನ್ನು ನೆಸ್ಲೆ ಪ್ರಶ್ನಿಸಿದೆ.

ಈ ಬಗ್ಗೆ ಮುಂಬೈನಲ್ಲಿ ಹೇಳಿಕೆ ನೀಡಿದ ಸಂಸ್ಥೆ ``ಉತ್ತರ ಪ್ರದೇಶದ ಆಹಾರ ಭದ್ರತೆ ಮತ್ತು ಔಷಧ ಇಲಾಖೆ ಅಧಿಕಾರಿಗಳ ಆದೇಶವನ್ನು ನಾವು ಪ್ರಶ್ನಿಸುತ್ತೇವೆ'' ಎಂದು ಹೇಳಿಕೆ ನೀಡಿದೆ.

ಮತ್ತೊಂದು ಬೆಳವಣಿಗೆಯಲ್ಲಿ ಮಾರ್ಚ್ 2014 ಬ್ಯಾಚ್ ನ ಮ್ಯಾಗಿ ನೂಡಲ್ಸ್ ಗಳಲ್ಲಿ ಅಪಾಯಕಾರಿ ಪ್ರಮಾಣದ ಸೀಸ ಮತ್ತು ಮಾನೋಸೋಡಿಯಂ ಗ್ಲುಟಮೇಟ್ ಪತ್ತೆಯಾಗಿದ್ದು, ಆ ಬ್ಯಾಚ್‍ನ ಅಷ್ಟೂ ಪ್ಯಾಕೆಟ್‍ಗಳನ್ನು ಹಿಂಪಡೆಯಲು ಆದೇಶವನ್ನು ಆಹಾರ ನಿರೀಕ್ಷಕರು ನಿರಾಕರಿಸಿದ್ದಾರೆ.

``ಸದ್ಯಕ್ಕೆ ನಾವು ಹಿಂಪಡೆಯುವ ಆದೇಶ ನೀಡಿಲ್ಲ. ಉತ್ತರ ಪ್ರದೇಶ ಆಹಾರ ಭದ್ರತೆ ಮತ್ತು ಔಷಧ ನಿಯಂತ್ರಣ ಇಲಾಖೆಯಿಂದ ಈ ಬಗ್ಗೆ ವಿವರಣೆ ಕೇಳಿದ್ದು, ಅದನ್ನು ಪರಿಶೀಲಿಸಿದ ನಂತರ ದೇಶಾದ್ಯಂತ ಆದೇಶ ನೀಡುವ ಬಗ್ಗೆ ಯೋಚಿಸಲಾಗುವುದು'' ಎಂದು ಹಿರಿಯ ಅಧಿಕಾರಿಗಳೊಬ್ಬರು ತಿಳಿಸಿದ್ದಾರೆ. ನೆಸ್ಲೆಯ ಬಾತ್ಮಿದಾರ ಕೂಡ ತಾವು ಪ್ಯಾಕೆಟ್‍ಗಳನ್ನು ಹಿಂಪಡೆಯುವ ಬಗ್ಗೆ ಯಾವುದೇ ಆದೇಶ ಪಡೆದಿಲ್ಲವೆಂದು ದೃಢಪಡಿಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com